ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೩.] ಅಯೋಧ್ಯಾಕಾಂಡವು. ಕೇಡಾಳಿ!ಕುಂದದ ಪರಾಕ್ರಮವುಳ್ಳ, ಮತ್ತು ನನಗೆ ಪ್ರಾಣಪದಕದಂತಿರುವ ರಾಮನನ್ನು ಹೀಗೆ ವ್ಯಸನದಲ್ಲಿರಿಸಬೇಕೆಂಬ ಬುದ್ಧಿಯು ನಿನಗೇಕೆ ಹುಟ್ಟಿತು? ಲೋಕದಲ್ಲಿ ಇದಕ್ಕಿಂತ ಬೇರೆ ಅಪಖ್ಯಾತಿಯೂ, ಅವಮಾನವೂ ನನಗೆ ಬೇರೊಂದೂ ಇಲ್ಲ” ಹೀಗೆಂದು ದಶರಥನು, ಹುಚ್ಚನಂತೆ ಬುದ್ಧಿಭ್ರಮವು ಧೃವನಾಗಿ, ಗಟ್ಟಿಯಾಗಿ ಗೋಳಿಡುತ್ತಿದ್ದನು. ಅಷ್ಟರೊಳಗಾಗಿ ಸೂರ್ ನು ಅಸ್ತಂಗತನಾದನು.ರಾತ್ರಿಯಾಯಿತು. ಮೂರು ಜಾವವುಳ್ಳ ಆ ರಾತ್ರಿ ಯು ಪೂರಚಂದ್ರನಿಂದ ಲೋಕರಂಜಕವಾಗಿದ್ದರೂ, ದುಃಖಿತನಾದ ಆರಾಜನ ಮನಸ್ಸಿಗೆ ಸ್ವಲ್ಪವಾದರೂ ಆಪ್ಯಾಯನವನ್ನುಂಟು ಮಾಡಲಿಲ್ಲ. ವೃದ್ಧನಾದ ರಾಜನು, ಕೇವಲದುಃಖಪ್ರಲಾಪಗಳಿಂದಲೇ ಆ ಮೂರು ಯಾಮಗಳನ್ನೂ ಕಳೆದನು. ಬಿಸಿಬಿಸಿಯಾಗಿ ಸಿಟ್ಟುಸಿರನ್ನು ಬಿಡುತ್ತಿದ್ದನು. ವ್ಯಾಧಿಪೀಡಿತರಾದವರು ನರಳುವಂತೆ, ದೀನಧ್ವನಿಯಿಂದ ಆಕಾಶವನ್ನು ನೋಡಿ ನಕ್ಷತ್ರಗಳಿಂದ ಅಲಂಕರಿಸಲ್ಪಟ್ಟ ಎಲೈ ರಾತ್ರಿಯೆ! ನೀನು ಮುಂ ದುವರಿಯದಿರು ! ಬೆಳಗಾಗಬೇಡ ! ಇದೋ ! ಕೈಮುಗಿದು ಬೇಡಿಕೊಳ್ಳುವೆ ನು ! ನನ್ನಲ್ಲಿ ಇಷ್ಟು ಮಾತ್ರ ದಯೆಯನ್ನು ತೋರಿಸು ! ಹಾಗಿಲ್ಲವೇ ನೀನು ಬೇಗನೆ ಕಳೆದುಹೋಗು! ನನಗೆ ಈ ಮಹಾವ್ಯಸನವನ್ನು ತಂದಿಟ್ಟ ಕೂರೆ ಯಾದ, ನಿರ್ಷ್ಟುಣೆಯಾದ, ಪರಮಸೂತುಕಿಯಾದ ಈ ಕೈಕೇಯಿಯನ್ನು ನಾನು ನೋಡುತ್ತಿರಲಾರೆನು. ಆದುದರಿಂದ ಬೇಗನೆ ಬೆಳಗಾಗು !” ಎಂದು ಗೋಳಿಡುತ್ತ, ಮನಸ್ಸನ್ನು ಒಂದು ಸ್ತಿಮಿತದಲ್ಲಿರಿಸಿಕೊಳ್ಳಲಾರದೆ, ಪುನಃ ಕೈಕೇಯಿಯಮುಂದೆ ಕೈಮುಗಿದು ಅವಳನ್ನು ಸಮಾಧಾನಪಡಿಸು ತ. ಅವಳನ್ನು ಕುರಿತು ( ಎಲೆ ದೇವಿ ! ನನ್ನ ಸಾಧುಸ್ವಭಾವವನ್ನು ನೀನು ಚೆನ್ನಾಗಿ ಕಂಡಿರುವೆ ! ನನ್ನ ಮನಸ್ಸೆಲ್ಲವೂ ನಿನ್ನಲ್ಲಿಯೇ ಅಡಗಿರುವುದೆಂಬುದ ನ್ಯೂ ಸೀನು ಬಲ್ಲೆ! ಈಗ ನನ್ನ ಮನಸ್ಸನ್ನ ,ನನಗೆ ಬಂದೊದಗಿರುವ ಮಹಾ ವ್ಯಸನವನ್ನೂ ಪದ್ಯಾಲೋಚಿಸಿ ನೋಡು! ಅದರಲ್ಲಿಯೂ ನಾನು ರಾಜನಾ ಗಿದ್ದು, ಸಾಯುವ ಕಾಲದಲ್ಲಿ ಪ್ರತಿಜ್ಞೆಗೆ ತಪ್ಪಿ, ಲೋಕಾಪವಾದಕ್ಕೆ ಸಿಕ್ಕಿ, ದುಃಖದಿಂದಲೂ, ಅವಮಾನದಿಂದಲೂ ಪ್ರಾಣವನ್ನು ಬಿಡದಹಾಗೆ ನನ್ನಲ್ಲಿ ಅನುಗ್ರಹವಿಟ್ಟು ಕಾಪಾಡುವ ಭಾರವು ನಿನ್ನದಾಗಿದೆ! ಎಲೆ ಸುಂದ