ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೨.) ಅಯೋಧ್ಯಾಕಾಂಡವು. ೨೬೧ ಲೋಕಸಾಮಾನ್ಯಕ್ಕೂ ಪ್ರಿಯವನ್ನೇ ನುಡಿಯುವ ಸುಸ್ವಭಾವವುಳ್ಳ ರಾಮ ನಿಗೆ ಮನಸ್ಸಿನಲ್ಲಿಯಾದರೂ ನಾನು ಅಪ್ರಿಯವನ್ನು ನೆನೆಸಲಾರೆನು.ಹೀಗಿರು ವಾಗ ಕೂರಸ್ವಭಾವವುಳ್ಳ ಈ ನಿನ್ನ ದುರಾಲೋಚನೆಗೊಳಗಾಗಿ, ನಾನು ಹೇಗೆತಾನೇ ಆ ರಾಮನನ್ನು ಕರೆದು ಕಾಡಿಗೆ ಹೋಗೆಂದು ಬಾಯಿಬಿಟ್ಟು ಹೇ ಳಲಿ : ತಾಳ್ಮೆ, ಇಂದ್ರಿಯನಿಗ್ರಹ, ಸತ್ಯ, ಧರೆ, ಕೃತಜ್ಞತೆ, ಅಹಿಂಸೆ, ಮುಂ ತಾದ ಸರೋತ್ತಮಗುಣಗಳೆಲ್ಲವೂ ಯಾವನಲ್ಲಿರುವುವೋ, ಆ ರಾಮನನ್ನು ತೊರೆದು ಬಿಟ್ಟ ಮೇಲೆ.ನನಗೆ ಬೇರೆ ಗತಿಯೇನು ? ನನಗೆ ಮುಂದಕ್ಕೆ ಹಿಕ್ಕಾಗಿ ರುವ ರಾಮನನ್ನು ಹೇಗೆ ಬಿಟ್ಟುಬಿಡಲಿ ? ಎಲೆ ಕೈಕೇಯಿ ! ನನ್ನ ಈ ಮುಪ್ಪ ನಾದರೂ ನೋಡಿ ನಿನಗೆ ಮರುಕವು ಹುಟ್ಟಬೇಡವೆ ? ಇನ್ನೇನು ? ನನಗೆ ಕೊನೆಗಾಲವು ಸಮೀಪಿಸಿರುವುದು ಬಹಳ ಶೋಚನೀಯವಾದ ಸ್ಥಿತಿಯ ಕ್ಲಿರುವೆನು! ಹೀಗೆ ದಿಕ್ಕಿಲ್ಲದವನಂತೆ ಗೋಳಿಡುತ್ತಿರುವ ಈ ನನ್ನ ಸ್ಥಿತಿಯನ್ನು ನೋಡಿಯೂ ನಿನಗೆ ನನ್ನಲ್ಲಿ ಕರುಣೆ ಹುಟ್ಟಲಿಲ್ಲವೆ ? ನನ್ನ ಕೃಪೆಮಾಡು! ಸಾಗರಾಂತವಾದ ಈ ಭೂಮಿಯಲ್ಲಿ ರಾಜದಾ ಯರೂಪವಾಗಿ ನನಗೆ ಏನೇನು ಸಿಕ್ಕುತ್ತಿರುವುದೋ, ಅದೆಲ್ಲವನ್ನೂ ನಿನಗೇ ಒಪ್ಪಿಸಿಬಿಡುವೆನು. ನಿನ್ನ ಕೋಪವನ್ನು ಬಿಟ್ಟು ಪ್ರಸನ್ನಳಾಗು : ಇದೋ ಕೈಮುಗಿದು ಬೇಡುವೆನು! ಕೊನೆಗೆ ನಿನ್ನ ಕಾಲಿಗಾದರೂ ಬಿಳುವೆನುರಾಮ ನನ್ನು ರಕ್ಷಿಸಿ, ನನ್ನನ್ನೂ ಅಧರದಲ್ಲಿ ಬಿಳದಂತೆ ಮಾಡು!” ಹೀಗೆಂದು ದಶರಥನು ದುಖದಿಂದ ಬೇಯುತ್ತ, ಮೈಮೇಲೆ ಪ್ರಜ್ಞೆಯಲ್ಲದೆ ಗೋಳಿಡು ತಿದ್ದನು. ನಿಂತ ಕಡೆಯಲ್ಲಿ ನಿಲ್ಲದೆ ಸಂಕಟಪಡುತ್ತಿದ್ದನು ದುಃಖಸಾಗರದ ಕ್ಲಿ ಮುಳುಗಿ ಹೋಗುತ್ತಿರುವ ನನ್ನನ್ನು ಎತ್ತಿ ದಡಕ್ಕೆ ಮುಟ್ಟಿಸಬಾರದೆ?” ಎಂದು ಎರಡುಕ್ಕೆಗಳನ್ನೂ ನೀಡಿ, ಬಾರಿಬಾರಿಗೂ ಪ್ರಾಕ್ಟಿಸುತ್ತಿದ್ದನು. ಇಷ್ಟಾ ದರೂ ಕೂರಹೃದಯಳಾದ ಕೈಕೇಯಿಗೆ ಮರುಕವೇ ಹುಟ್ಟಲಿಲ್ಲ. ಅವಳು ಮತ್ತಷ್ಟು ರೌದ್ರಾವೇಶವನ್ನೇ ತೋರಿಸುತ್ತ, ರಾಜನನ್ನು ನೋಡಿ, ಮೊದಲಿ ಗಿಂತಲೂ ಕ್ರೂರವಾದ ಮಾತನ್ನಾಡುವಳು. “ಎಲೈ ರಾಜನೆ!ಇದೀಗ ಬಹ ಳ ಚೆನ್ನಾಯಿತು ! ಹಿಂದೆ ವರಗಳನ್ನು ಕೊಡುವುದಾಗಿ ವಾದ್ಯಾನಮಾಡಿ, ಅದಕ್ಕಾಗಿ ಈಗ ಇಷ್ಟು ಸಂಕಟಪಡುವುದು ನ್ಯಾಯವೆ? ಇನ್ನು ಮೇಲೆ ನಿನಗೆ