ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܘܬ ಸರ್ಗ, ೫೨.] ಅಯೋಧ್ಯಾಕಾಂಡವು. ವಿಷಯದಲ್ಲಿ ನೀನು ನನ್ನನ್ನು ಮನ್ನಿ ಸಬೇಕೆಂದು ಕೇಳಿಕೊಳ್ಳುವೆನು. ನಿನ್ನ ನ್ನು ಬಿಟ್ಟು ನಾನುಹೇಗೆ ಹೋಗಲಿ?ಅಥವಾ ಇಲ್ಲಿಂದ ಬಿಟ್ಟು ಹೊರಟರೂ, ಪುತ್ರಶೋಕದಿಂದ ಕೊರಗುವವರಂತೆ ನೀನಿಲ್ಲದುದರಿಂದ ಕಾಂತಿಹೀನವಾದ ಆ ಅಯೋಧ್ಯಾನಗರವನ್ನು ನಾನು ಹೇಗೆ ಪ್ರವೇಶಿಸಲಿ” ಮೊದಲು ನಿನ್ನೊ ಡಗೂಡಿದ ಈ ರಥವನ್ನು ಆಯೋಧ್ಯಾವಾಸಿಗಳೆಲ್ಲರೂ ನೋಡಿದ್ದರಲ್ಲವೆ ? ಇದೇ ರಥವು ಈಗ ನೀನಿಲ್ಲದೆ ಹಿಂತಿರುಗಿ ಬರುತ್ತಿದ್ದರೆ ಅದನ್ನು ನೋಡಿ ಯಾರುತಾನೇ ಸಹಿಸುವರು ? ರಾಮಶೂನ್ಯವಾದ ಈ ರಥವನ್ನು ನಾನು ನ ಡೆಸಿಕೊಂಡುಹೋದರೆ, ಅದನ್ನು ನೋಡಿ ಆ ಅಯೋಧ್ಯಾ ಪಟ್ಟಣವೇ ವ್ಯಸ ನದಿಂದ ಎದೆಯೊಡೆದು ಪ್ರಾಣಬಿಡುವುದೆಂದು ಊಹಿಸಬೇಕಾಗಿದೆ. ರಥಿಕ ನಾದ ನೀನಿಲ್ಲದೆ, ಸಾರಥಿಯಾದ ನಾನುಮಾತ್ರ ಕುಳಿತು, ಶೂನ್ಯವಾದ ಈ ರಥವನ್ನು ನಡೆಸಿಕೊಂಡುಹೋದರೆ, ಪುರವಾಸಿಗಳು ಯಾವ ಆವಸೆಯ ನ್ನು ಹೊಂದಬಹುದೋ ನೀನೇ ಆಲೋಚಿಸು ! ಮುಖ್ಯವೀರನು ಯುದ್ಧ ದಲ್ಲಿ ಹತನಾದಮೇಲೆ, ಸೈನಿಕರು ದಿಕ್ಕುಗೆಟ್ಟ ತಮ್ಮ ಸೈನ್ಯವನ್ನು ನೋಡಿ ದುಃಖಿಸುವಂತೆ, ಆ ಅಯೋಧ್ಯಾನಗರವೆಲ್ಲವೂ ದೈನ್ಯದಿಂದ ಕೊರಗುವುದಲ್ಲ ವೆ? ಈಗ ಆಯೋಧ್ಯಾವಾಸಿಗಳೆಲ್ಲರೂ ನಿನ್ನ ನ್ನು ಎಡೆಬಿಡದೆ ಮನಸ್ಸಿನಲ್ಲಿ ನೆ ನೆಸಿಕೊಳ್ಳುತ್ತಿರುವುದರಿಂದ, ನೀನು ದೂರದಲ್ಲಿದ್ದರೂ ಕಣ್ಣರಿಗಿರುವಂತೆ ಯೇ ಭಾವಿಸಿ, ಅನ್ನಾಹಾರಗಳೆಲ್ಲವನ್ನೂ ಬಿಟ್ಟು ಕೊರಗುತ್ತಿರುವರೆಂಬುದು : ನಿಜವು. ಅದೆಲ್ಲವೂ ಹಾಗಿರಲಿ! ನೀನು ವನವಾಸಕ್ಕಾಗಿ ಅಯೋಧ್ಯೆಯನ್ನು ಬಿಟ್ಟು ಹೊರಟಾಗ, ಅಲ್ಲಿನ ಪ್ರಜೆಗಳು ನಿನ್ನನ್ನು ಬಿಟ್ಟಿರಲಾರದೆ ಎಷ್ಟು ಸಂಕಟಪಟ್ಟು ಕೊರಗುತ್ತಿದ್ದರೆಂಬುದನ್ನು ನೀನೇ ನಿನ್ನ ಕಣ್ಣಿನಿಂದ ನೋ ಡಿರುವೆಯಲ್ಲವೆ ! ಆಗ ಅವರ ಗೋಳಾಟದ ಧ್ವನಿಯನ್ನೂ ನೀನು ಕೇಳಿ ರುವೆ ! ಈಗ ನಾನು ಬರೀರಥವನ್ನು ಪಟ್ಟಣಕ್ಕೆ ನಡೆಸಿಕೊಂಡುಹೋದರೆ, ಇದನ್ನು ನೋಡಿ ಅವರು ಆಗಿಗಿಂತಲೂ ನೂರುಪಾಲು ಹೆಚ್ಚಾಗಿ ರೋದನ ವನ್ನು ಮಾಡುವರು. ನಾನು ಇಲ್ಲಿಂದ ಹೋಗಿ ನಿನ್ನ ತಾಯಿಗೆ ಹೇಗೆ ಮು ಖವನ್ನು ತೋರಿಸಿ ಮಾತಾಡಲಿ? (ನಿನ್ನ ಮಗನನ್ನು ಮಾವನ ಮನೆಯಲ್ಲಿ ಬಿ ಟ್ಯುಬಂದಿರುವೆನು.ನೀನು ಸಂಕಟಪಡಬೇಡ!” ಎಂದು ಹೇಳಲೆ? ನಾನು ಇಂ ತಹ ಅಸತ್ಯವಾಕ್ಕನ್ನು ಎಂದೂ ಹೇಳಿದವನಲ್ಲ. ಅಥವಾ ಸತ್ಯವನ್ನೇ ಹೇಳಿ