ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

' ೬೧೮ ಶ್ರೀಮದ್ರಾಮಾಯಣರ | [ಸರ್ಗ. ೫೨. ಬೇಕು. ಆದುದರಿಂದ ಎಲೆ ವತ್ರನೆ! ನೀನು ಮುಂದೆ ಹೋಗು! ನಿನ್ನ ಹಿಂದೆ ಸೀತೆಯು ಬರಲಿ! ಅವಳ ಹಿಂದೆ ನಿಮ್ಮಿಬ್ಬರಿಗೂ ನಾನು ಬೆಂಗಾವಲಾಗಿ ಬರುವೆನು, ಇಂತಹ ಘೋರವಾದ ಅರಣ್ಯಪ್ರದೇಶದಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿದ್ದು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು, ಯಾವಕಾರಕ್ಕಾ ಗಲಿತಕ್ಕ ಸಮಯವು ಮಿಂಚಿಹೋದಮೇಲೆ,ಪುನಃ ಅದನ್ನು ಸರಿಮಾಡಿಕೊಳ್ಳು ವುದು ಸುಲಭವಲ್ಲ. ಈಗೀಗ ಸೀತೆಗೆ ವನವಾಸದ ಕಷ್ಟವು ಚೆನ್ನಾಗಿ ತಿಳಿಯು ವುದು. ಇದೋ! ಈ ವನವನ್ನು ನೋಡಿದೆಯಾ? ಇಲ್ಲಿ ವಿಶೇಷವಾಗಿ ಜನಸಂ ಚಾರವೇ ಕಾಣುವುದಿಲ್ಲ. ಹೊಲಗದ್ದೆಗಳಾಗಲಿ, ತೋಟಗಳಾಗಲಿ ಯಾವು ಹೊಂದೂ ಗೋಚರಿಸುವುದಿಲ್ಲ. ಇಲ್ಲಿನ ಭೂಪ್ರದೇಶವೆಲ್ಲವೂ ಹಳ್ಳತಿಟ್ಟುಗ ಳಿಂದ ಕೂಡಿ ಸಂಚಾರಯೋಗ್ಯವಲ್ಲದಿರುವುದು. ಅಲ್ಲಲ್ಲಿ ದೊಡ್ಡಹಳ್ಳಗಳು ಕಾಣುವುವು.ಇಂತಹ ದುರ್ಗಮವಾದ ವನಪ್ರದೇಶವನ್ನು ಸೇರಿರುವೆವಾದು ದರಿಂದ, ಈಗೀಗ ಸೀತೆಗೆ ವನವಾಸದ ಕಷ್ಯವು ಚೆನ್ನಾಗಿ ಅನುಭವಕ್ಕೆ ಬರು ವುದು” ಎಂದನು. ಈ ಮಾತನ್ನು ಕೇಳಿ ಲಕ್ಷಣನು ತಾನೇ ಮುಂದೆ ಹೊರ ಟನು. ಆತನ ಹಿಂದೆ ಸೀತೆಯೂ, ಅವಳ ಹಿಂದೆ ರಾಮನೂ ಹೋಗುತಿದ್ದರು. ಅವರು ಮೂವರೂ ಗಂಗಾನದಿಯನ್ನು ದಾಟಿ, ಆಚೆಯ ದಡವನ್ನು ಸೇರಿ, ಅಲ್ಲಿಂದ ಮುಂದೆ ಹೋಗುವವರೆಗೂ ಸುಮಂತ್ರನು ಅವರನ್ನು ಎವೆ ಯಿಕ್ಕದೆ ನೋಡುತಿದ್ದನು. ಆಮೇಲೆ ಅವರು ಬಹುದೂರಕ್ಕೆ ಹೊರಟುಹೋಗಿ ತನ್ನ ಕಣ್ಣಿಗೆ ಗೋಚರಿಸದಿರಲು, ತನ್ನ ದೃಷ್ಟಿಯನ್ನು ಹಿಂತಿರುಗಿಸಿ ಮಹಾ ವ್ಯಸನದಿಂದ ಕಣ್ಣೀರನ್ನು ಸುರಿಸುತ್ತಿದ್ದನು.ದಿಕ್ಷಾಲಕರಿಗೆಣೆಯಾದ ಮಹಾ ಮಹಿಮೆಯುಳ್ಳವನಾಗಿಯೂ, ಮಹಾತ್ಯ ನಾಗಿಯೂ, ವರಪ್ರದನಾಗಿಯೂ ಇರುವ ರಾಮನು ಆ ಮಹಾನದಿಯನ್ನು ದಾಟಿ ಬಹುದೂರದವರೆಗೆ ಪ್ರಯಾ ಣಮಾಡಿ, ಉತ್ತಮವಾದ ಸಸ್ಯಸಮೃದ್ಧಿಗಳಿಂದ ತುಂಬಿದ ಈ ವತೃದೇಶದ

  • ಇಲ್ಲಿ ಮತ್ತದೇಶಗಳೆಂದು ಕೆಲವರು ಪಾಠಾಂತರವನ್ನು ಹೇಳುವರು ಅದು ಪ್ರಾಮಾದಿಕವೇಹೊರತು ನ್ಯಾಯವಲ್ಲ. ಇಲ್ಲಿನ ದೇಶಗಳ ವ್ಯವಸ್ಥೆಯು ಹೇಗೆಂದರೆ, ಗಂಗಾಯಮುನೆಗಳನಡುವೆ ಇರುವ ಪ್ರಯಾಗಪ್ರದೇಶವೇ ವತೃದೇಶವು, ಅದರ ಪಶ್ಚಿ ಮಕ್ಕೆ ಪಾಂಚಾಲದೇಶವು, ಯಮುನೆಯ ದಕ್ಷಿಣತೀರದಲ್ಲಿ ಶರಸೇನದೇಶವು. ಆದರೆ ಪೆ

ಮಕ್ಕಿರುವ ದೇಶಗಳಿಗೆ ಮತ್ಸ ದೇಶವೆಂದು ಹೆಸರು.