ಪುಟ:Mysore-University-Encyclopaedia-Vol-1-Part-1.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

186

ಅಚ್ಚುಮೊಳೆ ಮುದ್ರಣ

ಗಮನ ಹರಿಯಿತು.1879 ಮತ್ತು 1885ರ ಸುಮಾರಿನಲ್ಲಿ ಜೆ.ಡಬ್ಲ್ಯೂ..ಚುಕgïì ಪಂಕ್ತಿಗಳನ್ನು ಬೇಕಾದ ಅಳತೆಗೆ ಅನುಗೊಳಿಸಲು ಯೋಗ್ಯವಾದ ಡಬಲ್ ವೆಡ್ಜ್ ತೆರಪುಗಳನ್ನು ಕಂಡುಹಿಡಿದ.ಇದು ಮೊಳೆ ಜೋಡಿಸುವ ಯಂತ್ರಗಳ ಇತಿಹಾಸದಲ್ಲಿ ಬಹಳ ಮುಖ್ಯವಾದ ಬೆಳೆವಣಿಗೆ. ಗಡಿಯಾರ ಮಾಡುವ ಕಸುಬಿನ ಅಮೆರಿಕದ ಒಟ್ ಮರ್ ಮೆರ್ ಗೆನ್ ತ್ಲರ್ ಅಚ್ಚಿನ ಮೊಳೆ ಜೋಡಿಸುವ ಯಂತ್ರಗಳ ನಿರ್ಮಾಣಕಾರ್ಯದಲ್ಲಿ ತೊಡಗಿ ಅನೇಕ ವರ್ಷಗಳ ಕಾಲ ಸತತವಾಗಿ ಶ್ರಮಿಸಿ ಅನೇಕ ವಿಧದಲ್ಲಿ ಸಂಶೋಧನೆ ನಡೆಸಿಧ. ಕಡೆಗೆ ಪ್ರತಿಯೊಂದು ಅಕ್ಷರಕ್ಕೂ ಪ್ರತ್ಯೇಕವಾದ ಮಾತೃಕೆಗಳನ್ನು ಉಪಯೋಗಿಸಿ ಒಂದು ಪಂಕ್ತಿಯನ್ನು ಏಕಕಾಲದಲ್ಲಿ ಎರಕ ಹೊಯ್ಯುವ ಹೊಸ ಯಂತ್ರವನ್ನು ಕಂಡುಹಿಡಿದ. ಚುಕgïìನ ಡಬಲ್ ವೆಡ್ಜ್ ತೆರಪು ಮೊಳೆಗಳನ್ನು ತನ್ನ ಎರಡನೇಯ ಯಂತ್ರಕ್ಕೆ ಅಳವಡಿಸಿಕೊಂಡ(1885),ಮಾತೃಕೆಗಳನ್ನು ಸರಿಯಾದ ಸ್ಥಾನದಲ್ಲಿ ನಿಲ್ಲಿಸಲು ಕೃತಕ ಗಾಳಿಯನ್ನು ಬಳಸಿ ಮೂರನೆಯ ಯಂತ್ರವನ್ನು ಅದೇ ವರ್ಷ ಕಂಡುಹಿಡಿದ. ಬ್ಲೋಯರ್ ಎಂಬ ಹೆಸರಿನ ಈ ಯಂತ್ರ ಹೆಚ್ಚು ಪ್ರಚಾರಕ್ಕೆ ಬಂದಿತು.ಆಮೇಲೆ ಈ ಬಗೆಯ ಸುಮಾರು ಇನ್ನೂರು ಯಂತ್ರಗಳನ್ನು ತಯಾರಿಸಿದರು. ಅನೇಕ ಯಂತ್ರಗಳನ್ನು ಇಂಗ್ಲೆಂಡ್ ದೇಶಕ್ಕೂ ಕಳುಹಿಸಿದರು.ಇವನ್ನು ಸಮಾಚಾರ ಪತ್ರಿಕೆಘಳ ಮುದ್ರಣಕ್ಕೆ ಹೆಚ್ಚಾಗಿ ಬಳಸಿದರು.ಕೃತಕ ಗಾಳಿಯನ್ನು ಒಯ್ಯಲು ಮೆರ್ಗನ್ ತ್ಲರ್ ಯಂತ್ರಕ್ಕೆ ಅಳವಡಿಸಿದ್ದ ಉಪಕರಣವನ್ನು 1890ರಲ್ಲಿ ತಯಾರಿಸಿದ ಅವನ ಮತ್ತೊಂದು ಯಂತ್ರದಲ್ಲಿ ಕೈಬಿಡಲಾಯಿತು.ಇದು ಹೆಚ್ಚು ಕಡಿಮೆ ಈಗಿನ ಲೈನೋಯಂತ್ರದ ಗುಣವೈಶಿಷ್ಟ್ಯವನ್ನು ಹೊಂದಿದೆ. ಅಮೆರಿಕದ ಓಹಿಯೋದಲ್ಲಿ ಜನಿಸಿದ ಟಾಲ್ ಬgïÖ ವಾಷಿಂಗ್ ಟನ್ನಿನಲ್ಲಿ ಹೊಸ ಮಾದರಿಯ ಯಂತ್ರದ ನಿರ್ಮಾಣ ಕಾರ್ಯದಲ್ಲಿ ತೊಡಗಿ ಈಗಿನ ಮಾದರಿಯ ರಂಧ್ರಗಳ ಪಟ್ಟಿಯನ್ನು ಉಪಯೋಗಿಸಿ ಅಚ್ಚಿನ ಮೊಳೆಪಟ್ಟಿಯನ್ನು ತಯಾರಿಸಿದ (1885). ಅನಂತರ ಲಾನ್ ಸ್ಟನ್ನನು ಟಾಲ್ ಬgïÖನ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಬದಲಾಯಿಸಿ ಪ್ರತಿ ಅಕ್ಷರಕ್ಕೂ ಪ್ರತ್ಯೇಕ ಅಚ್ಚಿನಮೊಳೆ ತಯಾರಿಸುವ ಯಂತ್ರವನ್ನು ಕಂಡು ಹಿಡಿದ (1890).ಅವನು ತಯಾರಿಸಿದ (1897)ಮತ್ತೊಂದು ಯಂತ್ರದಲ್ಲಿ ಈಗಿನ ಮಾನೋಟಯಪ್ ಯಂತ್ರದ ಮುಖ್ಯ ತ್ತತ್ವಗಳನ್ನು ಕಾಣಬಹುದು. ಅಮೆರಿಕದ ಡಬ್ಲ್ಯೂ.ಐ.ಲಡ್ಲೊ ಎಂಬುವವ ಮೊಳೆ ಚೋಡಿಸುವ ತಂತ್ರಗಳ ತಯಾರಿಕೆಯಲ್ಲಿ ಕೆಲವು ಹೊಶ ತ್ತತ್ವಗಳನ್ನು ನಿರೂಪಿಸಿ 1906 ರಲ್ಲಿ ಒಂದು ಕಂಪನಿಯನ್ನು ಸ್ಥಾಪಿಸಿದ ಡಬ್ಲ್ಯೂ.ಎ.ರೀಡೆಗೆ ತನ್ನ ತ್ತತ್ವಗಳನ್ನು ಅರಿವು ಮಾಡಿಕೊಟ್ಟ ರೀಡೆ ಅನೇಕ ಸಂಶೋಧನೆಗಳನ್ನು ನಡೆಸಿ ಕೈಯಿಂದ ಮಾತೃಕೆಗಳನ್ನು ಜೋಡಿಸಿ ಪ್ರತ್ಯೇಕವಾಗಿ ಅಲಂಕರಣ ಪಂಕ್ತಿಯನ್ನು ತಯಾರಿಸುವ ಯಂತ್ರವನ್ನು ಕಂಡುಹಿಡಿದ. ಅನಂತರ ಈಗಿನ ಲಡ್ಲೊ ಯೊತ್ರದಲ್ಲಿನ ಮುಖ್ಯ ತ್ತತ್ವಗಳನ್ನು ಅಳವಡಿಸಿ ಹೊಸ ಯಂತ್ರವನ್ನು ನಿರ್ಮಿಸಲಾಯಿತು(1911). ನ್ಯೂಯಾರ್ಕಿನೆ ಅಂತಾರಾಷ್ಟ್ರೀಯ ಮೊಳೆ ಚೋಡಿಸುವ ಯಂತ್ರ ಪರಿಷತ್ತಿನವರು ಮೂರು ಬಗೆಯ ಯಂತ್ರಗಳನ್ನು ಕಂಡುಹಿಡಿಯಲು ಪ್ರಯತ್ನಿಸಿದರು (1911).1912 ರಲ್ಲಿ ಎಮ್ ಬ್ರೊ ಇಂಟರ್ ಟೈಪ್ ಯಂತ್ರ ತಯಾರಾಯಿತು.1914ರಲ್ಲಿ ಮಹಾಯುದ್ಧ ಯುರೋಪನ್ನು ಸುತ್ತುವರಿಯುವ ಹೊತ್ತಿಗೆ ಮೊಳೆ ಜೋಡಿಸುವ ಯಂತ್ರಗಳು ಹೆಚ್ಚು ಪ್ರಚಾರಕ್ಕೆ ಬಂದಿದ್ದುವು.(ಎಚ್.ಎನ್.) ಅಚ್ಚುಮೊಳೆ ಮುದ್ರಣ :ಈ ಕಲೆಯಲ್ಲಿ ಮುದ್ರಣವಾಗುವ ವಿಷಯ ಪ್ರಮುಖವಾದದ್ದಉ,ರೂಪರೇಷೆಗೆ ಅಂದಕ್ಕೆ ದ್ವಿತೀಯ ಸ್ಥಾನ. ಇದರಲ್ಲಿ ವರ್ಣಮಾಲೆಯ ಅಕ್ಷರಗಳು ಹೆಚ್ಚಾಗಿ ಬಳಕೆಯಾಗುತ್ತವೆ. ಎಲ್ಲ ಮುದ್ರಣಕಾರರೂ ಸಾಧಾರಣವಾಗಿ ಮುದ್ರಣಕಲೆಗೆ ಸಂಬಂಧಿಸಿದ ಕೆಲವು ಸಾಮಾನ್ಯ ನಿಯಮಗಳನ್ನು ಅನುಸರಿಸಬೇಕು.ಮುದ್ರಕನ ರೋಮನ್ ವರ್ಣಮಾಲೆಯಲ್ಲಿ. ಕ್ಯಾಪಿಟಲ್,ಸಣ್ಣಕ್ಯಾಪಿಟಲ್ ಸಣ್ಣ ಅಕ್ಷರಗಳು,ಅಂಕಿಗಳು,ಓರೆ(ಇಟ್ಯಾಲಿಕ್) ಕ್ಯಾಪಿಟಲ್ ಅಕ್ಷರಗಳು ಮತ್ತು ಓರೆ ಸಣ್ಣ ಅಕ್ಷರಗಳು ಮುಂತಾದ ಸು.200 ವಿಧವಾದ ಅಚ್ಚಮೊಳೆಗಳಿವೆ. ನಮ್ಮ ದೇಶದ ಭಾಷೆಗಳಲ್ಲಿ ಪೂರ್ಣಾಕ್ಷರಗಳು ಅರ್ಧ ಅಕ್ಷರಗಳು ತಲೆಕಟ್ಟುಗಳು ಒತ್ತುಗಳು ಅಂಕಿಗಳು ಮುಂತಾದ ವಿವಿಧ ಮೊಳೆಗಳಿವೆ.ಅಲ್ಲದೆ ಶಬ್ದಗಳ ಮಧ್ಯದಲ್ಲಿ ಸೇರಿಸುವ (ಸ್ವೇಸ್)ಸಾಲುಗಳ ಮಧ್ಯದಲ್ಲಿ ಸೇರಿಸುವ(ಲೆಡ್ಸ್)ತೆರಪುಗಳೂ ರೇಖೆಗಳನ್ನು ಮುದ್ರಿಸುವ ರೂಲುಗಳೂ ಆಲಂಕಾರಿಕ ಅಂಚುಗಳೂ ಚಿತ್ರಗಳನ್ನು ಮುದ್ರಿಸುವ ಮರದ ಅಥವಾ ಲೋಹದ ಫಲಕಗಳೂ ಮುದ್ರಕನಿಗೆ ಬೇಕಾದ ಸಾಮಗ್ರಿಗಳಲ್ಲಿ ಸೇರಿವೆ.ತೆರಪುಗಳು ವಿನಾ ಇತರ ಎಲ್ಲವೂ ಒಂದೇ ಮಟ್ಟದಲ್ಲಿರಬೇಕು. ಅಚ್ಚುಮೊಳೆ ವರ್ಣಮಾಲೆಯಲ್ಲಿ ಅನೇಕ ತರದ ಆಕೃತಿಗಳನ್ನು(ಸ್ಟೈಲ್) ಕಲಾನಿಪುಣರು ತಯಾರಿಸಿದ್ದಾರೆ.ಕೆಲವು ಸಾಮಾನ್ಯ ದುಂಡಾಕೃತಿಯವು.ಕೆಲವು ಸಂಕುಚಿತ(ಕಂಡೆನ್ಸ್ ಡ್)ಆಕೃತಿಯವು. ಮತ್ತೆ ಕೆಲವು ಉಬ್ಬಿದ ಆಕೃತಿಯವು(ಎಕ್ಸ್ ಪ್ಯಾಂಡೆಡ್).ಕೆಲವು ಅಕ್ಷರಗಳ ರೂಪರೇಷಗಳು ಸಾಮಾನ್ಯ ಗಾತ್ರದಲ್ಲಿರುತ್ತವೆ.ಇನ್ನು ಕೆಲವು ತೆಳುವಾಗಿರುತ್ತವೆ. ಮತ್ತೆ ಕೆಲವು ದಪ್ಪವಾಗಿರುತ್ತವೆ(ಬೋಲ್ಡ್). ಮುದ್ರಸಬೇಕಾದ ವಿಷಯಕ್ಕೆ ಸೂಕ್ತಶೈಲಿಯ ಅಚ್ಚುಮೊಳೆಗಳನ್ನು ಚುನಾಯಿಸಿಕೊಂಡು ಜೋಡಣೆ ಮಾಡುವುದೇ ಒಂದು ಕಲೆ.ಈ ಕಲೆಯಲ್ಲಿ ಪ್ರಯೋಗದ ಆಧಾರದ ಮೇಲೆ ನಿರ್ಮಿಸಲ್ಪಟ್ಟ ಕೆಲವು ತತ್ವ್ತಗಳನ್ನು ಅನುಸರಿಸುವುದುಂಟು. ಮೊಳೆಗಳನ್ನು ಎಲ್ಲ ವಿಧವಾದ ಎಂದರೆ ಬೈಬಲ್,ವಿಶ್ವಕೋಶ ಮುಓತಾದುವುಗಳಿಗೆ ಉಪಯೋಗಿಸುವ ಸಣ್ಣ ಗಾತ್ರದಿಂದ(6 ಪಾಯಿಂಟ್ ಮೊಳೆಗಳು)ಭಿತ್ತಿ ಪತ್ರಗಳಿಗೆ (ಪೋಸ್ಟರ್) ಉಪಯೋಗಿಸುವ ದೊಟ್ಟ ಗಾತ್ರದ 2’’-3’’ದಲ್ಲಿಯೂ ತಯಾರಿಸುತ್ತಾರೆ. ಮುದ್ರಸಬೇಕಾದ ಪುಸ್ತಕ ಅಥವಾ ಕಾಗದದ ಹಾಳೆಯ ಅಗಲಕ್ಕೆ ಅನುಗುಣವಾಗಿ, ಅಚ್ಚು ಮೊಳೆಯ ಸಾಲುಗಳು ಸಹ ಇರುತ್ತವೆ.ಕಾಗದದಲ್ಲಿ ಅಚ್ಚಾದ ಮೇಲೆ ಅದರೆ ಸುತ್ತಲೂ ಕೈಯಾಡಿಸಲಿಕ್ಕೂ ಅಂದವಾಗಿ ಕಾಣುವುದಕ್ಕೂ ಸಾಕಾದಷ್ಟು ಖಾಲಿ ಅಂಚು(ಮಾರ್ಜಿನ್) ಸ್ಥಳವಿರಬೇಕು. ಒಂದು ಪುಸ್ತಕದ ಬೆನ್ನಿಗಿಂತ ತಲೆಯ ಮೇಲೆ ಜಾಸ್ತಿ ಸ್ಥಳ ಇರಬೇಕು. ಮೇಲ್ಭಾಗ ಮುಂಭಾಗಕ್ಕಿಂತ ಕೆಳಗಡೆ ಹೆಚ್ಚಿಗೆ ಸ್ಥಳವಿರಬೇಕು.ಒಂದೇ ಹಾಳೆಯಲ್ಲಿ ಮುದ್ರಿಸುವಾಗ ಎರಡೂ ಪಕ್ಕಗಳಲ್ಲಿ ಒಂದೇ ಸಮನಾದ ಸ್ಥಳ ಬಿಟ್ಟಿರಬೇಕು.ತಲೆಯ ಬಾಗಕ್ಕಿಂತ ಕೆಳಗಡೆ ಜಾಸ್ತಿ ಸ್ಥಳವಿರಬೇಕು. ವಿಶೇಷ ಸಂಪುಟಗಳಲ್ಲಿ ಬ಻ಚ್ಚಾದ ಪುಟಗಳ ಸುತ್ತಲೂ ಈ ಖಾಲಿ ಸ್ಥಳ ಹೇರಳವಾಗಿರಬೇಕು. ಅಚ್ಚಿನ ಮೊಳೆ ಜೋಡಿಸುವಾಗ ಮೊಳೆಯ ಗಾತ್ರಕ್ಕೆ ತಕ್ಕಂತೆ ಸಾಲುಗಳು ಉದ್ದವನ್ನು ನಿರ್ಧರಿಸಬೇಕಾಗುತ್ತದೆ.ಅಕ್ಷರವೂ ಸಣ್ಣದಾಗಿದ್ದು ಸಾಲೂ ಉದ್ದವಾಗಿದ್ದರೆ ಓದುಗನ ಕಣ್ನಿಗೆ ಹೆಚ್ಚು ಶ್ರಮವಾಗುತ್ತದೆ.ಆದ್ದರಿಂದ ಅಕ್ಷರ ಸಣ್ಣದಾಗಿದ್ದಲ್ಲಿ ಸಾಲುಗಳ ಉದ್ದ ಹೆಚ್ಚಾಗಿಯೂ ಇರಬೇಕಾಗುತ್ತದೆ.ತೀರ ದಪ್ಪವಾದ ಅಕ್ಷರಗಳಲ್ಲಿ ಅಚ್ಚಾಗುವ ಭಿತ್ತಿಪತ್ರಗಳ ಸಾಲಿನ ಉದ್ದ ಮೂರು ನಾಲ್ಕು ಅಡಿಗಳಿದ್ದರೂ ಬಾಧಕವಿಲ್ಲ ಅದುದರಿಂದಲೇ 10 ಪಾಯಿಂಟ್ ಮೊಳೆಗಳಲ್ಲಿ ಅಚ್ಚಾಗುವ ದಿನಪತ್ರಿಕೆ ಮಾಸಪತ್ರಿಕೆಗಳಲ್ಲಿ ಪ್ರತಿಪುಟದಲ್ಲೂ ತೀರಾ ಚಿಕ್ಕ ಸಾಲುಗಳನ್ನುಳ್ಳ ಹಲವಾರು ಕಾಲಂಗಳನ್ನು ಅಳವಡಿಸಿರುತ್ತಾರೆ. ಮುದ್ರಿಸಿದ ಪುಸ್ತಕ ಹೆಚ್ಚು ಸುಲಭಗ್ರಾಹ್ಯವೂ ಆಗಬೇಕಾದರೆ ಪ್ರತಿಸಾಲಿನ ಮಧ್ಯೆ ಸಾಕಷ್ಟು ಜಾಗವಿರಬೇಢಕು.ಅದಕ್ಕಾಗಿ ಒಂದೇ ಗಾತ್ರದ ಲೆಡ್ಗಳನ್ನು ಬಳಸಲಾಗುತ್ತದೆ. ಹಾಗಿಲ್ಲದ್ದಲ್ಲಿ ಸಾಲುಗಳ ಮಧ್ಯದ ಜಾಗ ತೀರ ಕಡಿಮೆಯಾಗಿ ಓದುಗನಿಗೆ ತೊಂದರೆಯಾಗುತ್ತದೆ. ರೋಮನ್ ಲಿಪಿಯ ಕ್ಯಾಪಿಟಲ್ ಅಚ್ಚುಮೊಳೆಗಳನ್ನು ಪ್ರಾರಂಭದ ಒಂದೆರಡು ಶಬ್ದಗಳಿಗೆ,ಪುಸ್ತಕದ ಅಥವಾ ಇತರ ವಿಭಾಗದ ಶೀರ್ಷಿಕೆ ಮುಂತಾದುವುಗಳಿಗೆ ಮಾತ್ರ ಉಪಯೋಗಿಸಬಹುದು.ಅದ್ಯೋತ ಅದನ್ನೇ ಉಪಯೋಗಿಸಬಾರದು.ಅನಿವಾರ್ಯ ಸಂದರ್ಭಗಳಲ್ಲಿ ಕ್ಯಾಪಿಟಲ್ ಮತ್ತು ಸಣ್ಣ ಕ್ಯಾಪಿಟಲ್ ಗಳನ್ನು ಸೇರಿಸಿ ಉಪಯೋಗಿಸಬಹುದು. ಪುಸ್ತಕದ ಆಕೃತಿ,ಅದರಲ್ಲಿ ಮುದ್ರಿತವಾದ ವಿಷಯದ ಆಕೃತಿ ಸಾಮಾನ್ಯವಾಗಿ ಆಯಾಕಾರವಾಗಿರಬೇಕು.ಮೇಲೆ ಹೇಳಿದಂತೆ ಅಚ್ಚಿನ ಮೊಳೆ ಜೋಡಿಸುವಾಗ ಪುಸ್ತಕದ ಮೊದಲನೆಯ ಪ್ಯಾರಾದ ಪ್ರಥಮ ಶಬ್ದದ ಪ್ರಥಮಾಕ್ಷರವನ್ನು ಮುಓಬರವ ಅಕ್ಷರಗಳಗಿಂತ