ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಸ್ತು. ಶ್ರೀಸೀತಾಲಕ್ಷಣಸಮೇತಶ್ರೀರಾಮಚಂದ್ರಪರಬ್ರಹ್ಮಣೇ ನಮ

ಅ ವ ತಾರಿ ಕೆ. ಇದುವರೆಗೆ ಎಂದರೆ, ಬಾಲಕಾಂಡದಲ್ಲಿ, ಶ್ರೀರಾಮನ ಮಹಾಕುಲ ಪ್ರಸೂತತ್ವವೂ, ಆತನ ಕಲ್ಯಾಣಗುಣಗಳೂ, ಆತನ ಧನುಶ್ವಿದ್ಯಾಪ್ರವೀ ಣತೆಯೂ, ಆತನ ಅನನ್ಯಸಾಧಾರಣಗಳಾದ ಅದ್ಭುತಪರಾಕ್ರಮಗಳೂ, ಸೂಚಿಸಲ್ಪಟ್ಟಿವೆ. ಹಾಗೆಯೇ ಲಕ್ಷಣನಿಗೇಬಾಲ್ಯಾತ್ಮಕೃತಿ ಸುಗ್ಯ” ಎಂಬಂತೆ, ಅಣ್ಣನಾದ ರಾಮನಲ್ಲಿರುವ ಭಕ್ತಿಶಯವೂ, ಶತ್ರುಘ್ನು ನಿಗೆ ತಸ್ಯಚಾಸೀತ್ಯಥಾ ಪ್ರಿಯಃ” ಎಂಬಂತೆ, ಅಣ್ಣನಾದ ಭರತನಲ್ಲಿರತಕ್ಕ ನಿರ ತಿಶಯವಾದ ಪ್ರೇಮವೂ ಕಾಣಿಸಲ್ಪಟ್ಟಿವೆ. ಮತ್ತು ವಿವಾಹಿತರಾದ ಸೀತಾ ರಾಮರಲ್ಲಿ ಶೃಂಗಾರರಸತರಂಗಿತವಾದ ಪರಸ್ಪರಾನುರಾಗಸಂಪತ್ತಿಯೂ ವರ್ಣಿಸಲ್ಪಟ್ಟಿದೆ. ಕಥಾಬೀಜಭೂತಗಳಾಗಿ ಪ್ರತಿಪಾದಿಸಲ್ಪಟ್ಟಿರುವ ಆ ಮಹಾಪುರುಷರ ಕಲ್ಯಾಣಗುಣಗಳೆಲ್ಲವೂ, ಈ ಆಯೋಧ್ಯಾಕಾಂಡದಲ್ಲಿ ಪರಿ ಪಕ್ಷಗಳಾಗಿ, ಆಯಾ ಅನುಷ್ಠಾನವಿಶೇಷಗಳಮೂಲಕವಾಗಿ ವ್ಯಕ್ತಪಡಿಸ ಲ್ಪಡುವುವು. ರಾಮಾವತಾರಕ್ಕೆ ಮುಖ್ಯಪ್ರಯೋಜನಭೂತವಾದ ದುಷ್ಯ ಶಿಕ್ಷಣ, ಶಿಷ್ಯರಕ್ಷಣ, ಧಮ್ಮ ಸಂಸ್ಥಾಪನಗಳೆಂಬೀ ಮೂರು ಪ್ರಧಾನಕಾರ