ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ: ೧.] ಅಯೋಧ್ಯಾಕಾಂಡವು: sec ವಾಕ್ಕುಳ್ಳವನು. ದೃಢವಾದ ಮೈಕಟ್ಟುಳ್ಳವನು. ದೇಶಕಾಲ ಸ್ಥಿತಿ ಗಳನ್ನು ಚೆನ್ನಾಗಿ ಬಲ್ಲವನು. ಒಂಬಾವರಿ ನೋಡಿದಮಾತ್ರದಿಂದಲೇ ಇತ ರರ ಮನೋಧರಗಳನ್ನು ಗ್ರಹಿಸತಕ್ಕ ಸೂಕ್ಷಬುದ್ಧಿಯುಳ್ಳವನು. ಸಾ ಧುಗಳಲ್ಲಿ ಈತನಿಗೆ ಸಮಾನರಾದವರೊಬ್ಬರೂ ಇಲ್ಲ. ಲೋಕದಲ್ಲಿ ಈತ ನೊಬ್ಬನೇ ಸಾಧುತ್ವಕ್ಕಾಗಿ ನಿರ್ಮಿಸಲ್ಪಟ್ಟವನೆಂದು ಜನಗಳೆಲ್ಲರೂ ಎಣಿಸು ವರು. ಈ ಮೇಲೆ ಹೇಳಿದ ಗುಣಗಳೇ ಅಲ್ಲದೆ, ಇನ್ನೂ ಅನೇಕ ಸುಗುಣಗಳಿಂದ ಕೂಡಿರುವ ಆ ರಾಜಕುಮಾರನು, ತನ್ನ ಸದ್ದು ಣಗಳಿಂದ ಪ್ರಜೆಗಳ ಹೊ ರಗಿನಪ್ರಾಣವೋ ಎಂಬಂತೆ ಸತ್ವಜನಪ್ರಿಯನಾಗಿರುವನು. ಕೇವಲವಿದ್ಯೆ ಯಿಂದಾಗಲಿ, ಕೇವಲವ್ರತಗಳಿಂದಾಗಲಿ ಸಮಾವರ್ತನವನ್ನು ಹೊಂದಿ ರುವವರಂತಲ್ಲದೆ, ವಿಖ್ಯಾವ್ರತಗಳೆರಡರಿಂದಲೂ ಸಮಾವರ್ತನವನ್ನು ಹೊ೦ ದವನು, ಚತುರ್ವೇದಗಳನ್ನೂ ಅರ್ಥದೊಡನೆ ಸಾಂಗವಾಗಿ ಅಧ್ಯಯನ ಮಾಡಿರುವನು. * ಶಸಾಸಗಳೆರಡರಲ್ಲಿಯೂ ತನ್ನ ತಂದೆಯಾದ ದಶ ರಥನನ್ನೂ ಮೀರಿಸಿರುವನು. ಆತನ ತಂದೆತಾಯಿಗಳ ವಂಶವೆರಡೂ ಬಹ ಛ ಶುದ್ಧವಾದುದರಿಂದ, ಆತ ನಿರೋಷಿಯಾಗಿರುವನು. ಎಂತಹ ಓಪ ತ್ತಿನಲ್ಲಿಯೂ ಆತನ ಮನಸ್ಸು ಕದಲದು. ಎಂತಹ ಕಷ್ಟದಶೆಯಲ್ಲಿಯೂ ಆ ತನು ಸತ್ಯವನ್ನು ತಪ್ಪವವನಲ್ಲ. ಮನೋವಾಕ್ಕಾಯಗಳೆಂಬ ತ್ರಿಕರಣಗಳ ಯ ಏಕರೀತಿಯಾಗಿ ವರ್ತಿಸುವವನು, ಧರಾ ರಗಳನ್ನು ತಿಳಿಸತಕ್ಕ ಬ್ರಾಹ್ಮಣರಿಂದ ಚೆನ್ನಾಗಿ ತಿಕ್ಷಿಸಲ್ಪಟ್ಟು, ಮನಶುದ್ಧಿಯನ್ನು ಹೊಂದಿರ ತಕ್ಕವನು. ಧಾರಕಾಮಗಳನ್ನು ಕಾಲೋಚಿತವಾಗಿ ಉಪಯೋಗಿಸುವ ಕ್ರಮವನ್ನು ಚೆನ್ನಾಗಿ ಬಲ್ಲವನು. ಆತನಿಗೆ ಯಾವುದರಲ್ಲಿಯೂ ಮಮತೆಯಿಲ್ಲ. “ಬಲಿಷ್ಠ' ಎಂಬುದಕ್ಕೆ, ಬಲವಾದ ಮೈಕಟ್ಟುಳ್ಳವನೆಂಬುದೂ, 'ಸಾಧು' ಎಂಬುದಕ್ಕೆ ದೇಶಕಾಲಜ್ಞನೆಂಬುದೂ ಪತ್ಯಾಯಗಳೆಂದು ಗ್ರಹಿಸಬೇಕು.

  • ಆಮಂತ್ರಕವಾದುದು ಶಸ್ತವ, ಮಂತ್ರವಾದುದು ಅಸ್ತ್ರವು, + “ನಪೂರಾಷ್ಟಮಧ್ಯಾಹ್ಯಾ ಪರಾಹ್ವಾನಪರ್ರಾ ಕುರಾತ' ಎಂಬ ಕೃತಿ ಯಂತೆ ಪೂರೈಾಹ್ಯಾದಿಕಾಲಗಳಲ್ಲಿಯೇ ಆಯಾ ಧಾರಕಾಮಗಳನ್ನು ನಡೆಸಬೇ ಕೆಂದು ವಿಧಿಯು.

ಅ ಆ