ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೮ ಶ್ರೀಮದ್ರಾಮಾಯಣವು [ಸರ್ಗ. ೧, ದರಮೇಲೆ, ಸಾಂತರಾಮಿಯಾಗಿ, ನಿತ್ಯವಸ್ತುವೆನಿಸಿದ ಸಾಕ್ಷಾನ್ನಾರಾಯ ಣನೇ ರಾಮರೂಪದಿಂದ ಈ ಮನುಷ್ಯಲೋಕದಲ್ಲಿ ಅವತರಿಸಿರುವನಲ್ಲವೆ ಹೀಗಿರುವಾಗ ಆತನ ಗುಣಾತಿಶಯಗಳನ್ನು ಹೇಳತಕ್ಕುದೇನ ? ತಂದೆಯ ಪ್ರಿ” ತಿಯೂ ಹಾಗಿರಲಿ ! ಆತನ ತಾಯಿಯಾದ ಕೌಸಿಯೂಕೂಡ, ವಜ್ರಪಾ ಣಿಯಾದ ಇಂದ್ರನೊಡನೆ ಅದಿತಿಯು ಹೇಗೋ ಹಾಗೆ ಮಹಾತೇಜಸ್ವಿಯಾದ ಆ ರಾಮನೊಡಗೂಡಿ ಪ್ರಕಾಶಿಸುತ್ತಿರುವಳು. ಆ ರಾಮನು ಸ್ವಾಭಾವಿಕ ವಾಗಿಯೇ ಅತ್ಯುತ್ತಮವಾದ ರೂಪವುಳ್ಳವನು. ಔದಾಯ್ಯಾದಿ ಗುಣಗಳೆಲ್ಲವೂ ಆತನಲ್ಲಿ ಪರಿವ್ರವಾಗಿ ತುಂಬಿರುವುವು. ಮಹಾವೀರವುಳ್ಳವನು. ಗುಣಗ ಇಲ್ಲಿಯ ದೋಷಗಳನ್ನೇ ಹುಡುಕುವ ಆಸೂಯೆಯೆಂಬ ದುರು ಇವು ಆತ ನಲ್ಲಿ ಲೇಶಮಾತ್ರವಾದರೂ ಇಲ್ಲ. ಭೂಲೋಕದಲ್ಲಿ ಎಲ್ಲಿ ಹುಡುಕಿದರೂ ಇಂತಹ ಪ್ರತ್ರರತ್ನವು ಇದುವರಿಗೆ ಜನಿಸಿದುದಿಲ್ಲ. ಒಂದು ದೀಪದಿಂದ ಹತ್ತಿ ಸಿಟ್ಟ ಮತ್ತೊಂದು ದೀಪದಂತೆ, ತಂದೆಯಾದ ದಶರಥನಲ್ಲಿ ಕಾಣುವ ರೂ ಪಾರಿಗುಣಗಳೆಲ್ಲವೂ ಈತನಲ್ಲಿ ತುಂಬಿರುವುವು. ಈತನಲ್ಲಿ ಕೋಪವೆಂಬುದು ಸ್ವಲ್ಪ ಮಾತ್ರವೂ ಇಲ್ಲ. ಯಾವಾಗಲೂ ಶಾಂತಸ್ವಭಾವವುಳ್ಳವನು. ಆದು ದರಿಂದಲೇ ಆತನೊಡನೆ ಯಾರೂ ಪರುಷವಾಗಿ ಮಾತನಾಡುವುದಿಲ್ಲ. ಒಂ ದುವೇಳೆ ಯಾರಾದರೂ ತನ್ನೊಡನೆ ಕೂರವಾಕ್ಯಗಳನ್ನಾಡಿದರೂ, ತಾಳೆ ಯಿಂದಲೇ ಅವರಿಗೆ ಪ್ರತ್ಯುತ್ತರವನ್ನು ಕೊಡುವನು. ಯಾವಾಗಲೂ ಬಹು ಮೃಯವಾದ ಮಾತುಗಳನ್ನಾಡತಕ್ಕವನು, ಯಾರಾದರೂ ಒಬ್ಬರು, ಏನೋ ದಾರವಾಗಿಯಾಗಲಿ, ಫಲ: ಪೇಯಿಂದಾಗಲಿ, ಉಪೇಕ್ಷೆಯಿಂದಾಗಲಿ, ನಿರಂಧಕ್ಕಾಗಲಿ, ಮನಸ್ಸಿಲ್ಲದೆಯಾಗಲಿ, ಒಂದಾವರಿ ತನಗೆ ಯಾವುದೋ ಒಂದುಪಕಾರವನ್ನು ಮಾಡಿದ್ದರೆ, ಅದು ಅತಿಸ್ವಲ್ಪವಾಗಿದ್ದರೂ, ಆ ಒಂ ದುಪಕಾರವನ್ನೇ ಮಹತ್ತಾಗಿ ಭಾವಿಸಿ, ಯಾವಾಗಲೂ ಅದನ್ನು ಮರೆಯದೆ ಸಂತೋಷಿಸುತ್ತಿರುವ ಸ್ವಭಾವವುಳ್ಳವನು. ಮತ್ತು ಆತನು ಕಾಮಕ್ರೋ ಧಾಹಿಗಳೆಲ್ಲವನ್ನೂ ತಲೆಯೆತ್ತದಹಾಗೆ ಅಡಗಿಸಿಟ್ಟು, ಮನಸ್ಸನ್ನು ವಶ ಪಡಿಸಿಕೊಂಡಿರುವ ಮಹಾಜ್ಞಾನಿಯಾದುದರಿಂದ, ತನ್ನ ವಿಷಯದಲ್ಲಿ ಯಾರು ಎಷ್ಟೆಷ್ಟು ಅಪಕಾರಗಳನ್ನು ಮಾಡಿದ್ದರೂ, ಅದನ್ನು ಮನಸ್ಸಿನಲ್ಲಿ