ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯೨ ಶ್ರೀಮದ್ರಾಮಾಯಣವು. {ಸರ್ಗ, ೨. ತೋಷದಿಂದ ರಾಜನನ್ನು ನೋಡಿ 14 ಭಲೆ ! ಭಲೆ ! ” ಎಂದು ಈ ದ್ವೇಷಿಸುತ್ತಿರಲು, ಅವರಿಗೆ ರಾಮನಲ್ಲಿರುವ ವಿಶ್ವಾಸಾತಿಶಯಕ್ಕೆ ಸೂಚ ಕವಾದ ಆ ಮಹಾಧ್ವನಿಯು, ನಾಲ್ಕು ಕಡೆಗಳಿಂದಲೂ ಉಂಟಾದ ಪ್ರತಿ ಧ್ವನಿಯೊಡಗೂಡಿ, ಆ ಸಭಾಸ್ಕಾನಮಂಟಪವೆಲ್ಲವನ್ನೂ ನಡುಗಿಸುವಂತೆ ವ್ಯಾ ಪಿಸಿತು. ಆಗ ಅಲ್ಲಿದ್ದ ವಸಿಷ್ಠರೇ ಮೊದಲಾದ ಮಹರ್ಷಿಗಳೂ, ರಾಜರೂ, ಇತರಪುರಜನರೊಡಗೂಡಿ,ಯುಕ್ತಾಯುಕ್ರವಿಮರ್ಶನಪೂರಕವಾಗಿ ತಮ್ಮೊ ಳಗೆ ತಾವು ಚೆನ್ನಾಗಿ ಚರ್ಚಿಸಿ, ತಮ್ಮ ತಮ್ಮ ಮನಸ್ಸಿನಲ್ಲಿಯೂ ಬೇರೆಬೇರೆ ಚೆನ್ನಾಗಿ ಪರಾಲೋಚಿಸಿ, ಏಕಾಭಿಪ್ರಾಯದಿಂದ ನಿರ್ಧರಮಾಡಿಕೊಂ ಡು, ದಶರಥರಾಜನನ್ನು ಕುರಿತು « ಎಲೈ ರಘುವಂಶೋತ್ತಮನೆ! ನೀ ನು ಅನೇಕ ಸಹಸ್ರವರ್ಷಗಳವರೆಗೆ ಬದುಕಿ, ಈಗ ಬಹಳವಾರ್ಧಕದತೆಯ ನ್ನು ಹೊಂದಿರುವೆ. ಆದುದರಿಂದ ಈಗ ರಾಮನಿಗೆ ಯವರಾಜಾ ಷೇಕವನ್ನು ಮಾಡುವದೇ ಉತ್ತಮವು. * ಮಹಾಬಾಹುವಾಗಿ, ರಘು ವಂಶದ ವೀರರಲ್ಲಿ ಪ್ರಮುಖನಾಗಿ, ಮಹಾಬಲಾಡ್ಯನೆನಿಸಿಕೊಂಡಿರುವ

  • ಇದಕ್ಕೆ 'ಇಚ್ಛಾಮೋ ಹಿ ಮಹಾಬಾಹುಂ ರಘುವೀರಂ ಮಹಾಬಲಂ1ಗಳೇನ ಮಹತಾ ಯಾಂತಂ ರಾಮಂ ಛತ್ರಾವೃತಾನನ೦li” ಎಂಬುದು ಮೂಲಶ್ಲೋಕವು. ಇದ ರಲ್ಲಿರುವ ವಿಶೇಷಾರಗಳೇನೆಂದರೆ: “ನಾನೇ ರಕ್ಷಕನಾಗಿರುವಾಗ ರಾಮನಿಗೆ ಅಭಿಷೇಕ ಮಾಡುವುದೇಕೆ?” ಎಂದು ದಶರಥನು ಶಂಕಿಸಬಹುದೋ ಎಂಬ ಸಂದೇಹದಿಂದ, ಅಲ್ಲಿ ದವರೆಲ್ಲರೂ 'ನಾವು ರಕ್ಷಣಾತ್ಮವಾಗಿ ರಾಮಾಭಿಷೇಕವನ್ನು ಕೊರತಕ್ಕವರಲ್ಲ!ರಾಮನ ಸ್ವಾಭಾವಿಕಸೌಂದಯ್ಯವನ್ನು ಈಗ ಕಣ್ಣಾರೆ ಕಂಡನುಭವಿಸುತ್ತಿರುವೆವು.ಮುಂದೆ ಆತನು ಪಟ್ಟಾಭಿಷಿಕ್ತನಾದಮೇಲೆ, ಆಗಿನ ಸೌಂದಯ್ಯ ವಿಶೇಷವನ್ನೂ ಅನುಭವಿಸಬೇಕೆಂದಿರು ವೆವು” ಎಂಬ ಅಭಿಪ್ರಾಯವನ್ನು ಈ ಶ್ಲೋಕದಿಂದ ತಿಳಿಸುವರೆಂದು ಗ್ರಹಿಸಬೇಕು (ಇಚ್ಛಾಮಃ) ಅಪೇಕ್ಷಿಸುವೆವು” ಎಂಬ ಬಹುವಚನದಿಂದ ತಾವೆಲ್ಲರೂ ಏಕಕಂಠದಿಂದ ಒಪ್ಪಿರುವೆವೆಂಬ ಭಾವವು ಸೂಚಿತವಾಗುವುದು, ಮತ್ತು (ಇಚ್ಛಾಮೋಹಿ) ಅಭಿಷೇಕ ಪಟ್ಟಬಂಧಾದಿಗಳಿಂದ ಕೂಡಿರುವ ರಾಮನನ್ನು ನೋಡಬೇಕೆಂಬ ಇಚ್ಛಾಮಾತ್ರವೇ ನಮ್ಮ ಗಿರುವುದೇಕೊರತು, ಆ ಕಾರನಿರಹಣವು ನಿನಗಧೀನವಾಗಿರುವುದು ! ಮತ್ತು (ಇ ಚ್ಯಾಮೋಹಿ) (ಶ್ರೇಯಾಂಸಿ ಬಹುವಿಘಾನಿ” ಎಂಬಂತೆ, ಸತ್ಕಾರಗಳಿಗೆ ಅನೇಕ ವಿ ಕಗಳು ಬರುವುದುಂಟು!ಏಷ್ಟಗಳು ಬಂದರೂ, ಬಾರದಿದ್ದರೂ ನಮ್ಮ ಮನಸ್ಸಿನ