ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೮ ಶ್ರೀಮದ್ರಾಮಾಯಣವು. [ಸರ್ಗ, ೨ ... ದಶರಥನು ರಾಮಾಭಿಷೇಕಕ್ಕಾಗಿ ಪ್ರಜೆಗಳೊಡನೆ ++ ಆಲೋಚಿಸಿದದು. ಆಮೇಲೆ ದಶರಥರಾಜನು, ಗಂಭೀರವಾದ ಅತ್ಯವುಳ್ಳುದಾಗಿಯೂ, ಭೇರೀಧ್ವನಿಯಂತೆ ದಿಕ್ಕುಗಳನ್ನು ಮೊಳಗಿಸತಕ್ಕುದಾಗಿಯೂ, ಬಹಳ ಮೃ ದುವಾಗಿಯೂ, ತನ್ನ ರಾಜಪದವಿಗೆ ಅನುರೂಪವಾಗಿಯೂ, ಎಣೆಯಿಲ್ಲದ ಮಾಧುರವುಳ್ಳುದಾಗಿಯೂ ಇರುವ ಕಂಠಸ್ವರದಿಂದ ಮಹಾಮೇಫು ದಂತೆ ಗಂಭೀರವಾಗಿ, ತನ್ನ ಇದಿರಾಗಿದ್ದ ರಾಜಾಧಿರಾಜರನ್ನು ನೋಡಿ, ಆ ಸಭೆ ಕರಿಗೆ ಹಿತಕರವಾಗಿಯೂ, ಉತ್ಸಾಹ ಹುಟ್ಟಿಸತಕ್ಕುದಾಗಿಯೂ, ರಸಯುಕ್ಕೆ ವಾಗಿಯೂ ಇರುವಂತೆ ಒಂದಾನೊಂದು ಮಾತನ್ನು ಹೇಳುವನು. 'ಎಲೈ ರಾಜರೆ ! ವಿಶಾಲವಾದ ಈ ರಾಜ್ಯವನ್ನು ನಮ್ಮ ಹಿರಿಯರಾದ ರಘು ವೆ ಮೊದಲಾದ ರಾಜಶ್ರೇಷ್ಠರು, ಪತ್ರವಾತ್ಸಲ್ಯವನ್ನಿಟ್ಟು ಬಹಳಪ್ರೇಮದಿಂದ ಕಾಪಾಡುತ್ತ ಬಂದರೆಂಬುದು ನಿಮ್ಮೆಲ್ಲರಿಗೂ ತಿಳಿದೇ ಇರುವುದು. ನಾನೂ ಅದೇವಂಶದಲ್ಲಿ ಹುಟ್ಟಿದವನಾದುದರಿಂದ, ವಂಶಪರಂಪರೆಯಿಂದ ಪರಿಪಾ ಲಿತವಾಗಿ ಬಂದ ಸುಖಾಶ್ರಯವಾದ ಈ ಭೂಮಂಡಲಕ್ಕೆ, ಮೇಲೆಮೇಲೆ ಶ್ರೇಯಸ್ಸನ್ನುಂಟುಮಾಡಬೇಕೆಂಬುದೇ ನನ್ನ ಕೋರಿಕೆ ! ನಾನೂ ನಮ್ಮ ಹಿರಿಯರು ನಡೆದ ಮಾರ್ಗವನ್ನೇ ಅನುಸರಿಸಿ,ಬಹುಜಾಗರೂಕನಾಗಿ ನನ್ನಿಂದ ಸಾಧ್ಯವಾದಮಟ್ಟಿಗೂ ಪ್ರಜೆಗಳನ್ನು ಕಾಪಾಡುತ್ತ ಬಂದಿರುವೆನು, ಪ್ರಜಾ ಕ್ಷೇಮಚಿಂತೆಯಲ್ಲಿಯೇ ನಿರತನಾಗಿದ್ದ ನನ್ನ ಈ ದೇಹವು.ನಮ್ಮ ರಾಜ್ಯಚಿಹ್ನ ವಾದ ಶ್ವೇತಚ್ಛತ್ರದ ನೆರಳಿನಲ್ಲಿಯೇ ಇಷ್ಟು ಮುಪ್ಪನ್ನ ಹೊಂದಿತು. ಅನೇಕ ಸಹಸ್ರ ವರ್ಷಗಳ ಆಯುಸ್ಸನ್ನು ಪಡೆದುಬಂದು ಜೀವಿಸುತ್ತಿರವ ನನ್ನ ದೇಹ ವೆಲ್ಲವೂ ಬಹಳಜೀರ್ಣವಾಗಿ ಹೋಯಿತು.ಮುಂದೆಯಾದರೂ ಸ್ವಲ್ಪ ವಿಶ್ರಾಂ ತಿಸುಖವನ್ನನುಭವಿಸಬೇಕೆಂದಿರುವೆನು. ರಾಜ್ಯದಲ್ಲಿ ಧರಸಂಸ್ಥಾಪನವೆಂಬ ಕಾರವು ಸಾಮಾನ್ಯವಲ್ಲ. ಬಹಳ ಮಹತ್ತಾದುದು. ಇಂದ್ರಿಯಗಳನ್ನು ನಿಗ್ರಹಿಸುವ ಸಾಮರ್ಥ್ಯವಿಲ್ಲದವರು ಇದನ್ನು ತಡೆದು ನಿಲ್ಲಲಾರರು. ರಾಜ ಯೋಗ್ಯವಾದ ಶೌಲ್ಯಾದಿಪ್ರಭಾವವುಳ್ಳವರೇ ಇದಕ್ಕೆ ಅರ್ಹರೇಹೊರತು, ಸಾಮಾನ್ಯರಿಂದ ಸಾಧ್ಯವಲ್ಲ. ನಾನು ಈ ಭಾರವನ್ನು ಇದುವರೆಗೂ ಹೊತ್ತು,