ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦. ೨೬೦ ಶ್ರೀಮದ್ರಾಮಾಯಣವು. [ಅವತಾರಿಕೆ ತ್ರನ ವಾಕ್ಯಗಳಿಂದ ಪುರುಷಸೂಕ್ತದಲ್ಲಿ ಹೇಳಲ್ಪಟ್ಟ ಆತನ ಮಹಾಪುರುಷ ತ್ವವೂ, ತ್ವಮನಾದಿರನಿರ್ದೆಶ್ಯ” ಇತ್ಯಾದಿವಾಕ್ಯಗಳಿಂದ, ಆತನ ಅಪ್ಪ ಮೇಯಪ್ರಭಾವವೂ ಸೂಚಿಸಲ್ಪಟ್ಟಿರುವುವಲ್ಲದೆ, ಅಧಿಕಂ ಮೇನಿರೇ ವಿ ಷ್ಟು೦” ದೇವತೆಗಳೆಲ್ಲರೂ ಆಗ ವಿಷ್ಣು ವನ್ನೇ ಮೇಲಾಗಿ ತಿಳಿದರು, ಇತ್ಯಾದಿ ವಾಕ್ಯಗಳಿಂದ,ಇತರದೇವತೆಗಳು ಯಾರೂ ಆತನಿಗೆ ಸಮಾನರಲ್ಲವೆಂದೂ ಸಾ ಧಿಸಲ್ಪಟ್ಟಿದೆ. ಇನ್ನು ಮುಂದೆ ಈ ಆಯೋಧ್ಯಾಕಾಂಡದಲ್ಲಿ, ಹೇಯಗುಣವಿ ರೋಧಿಗಳಾದ ಆತನ ಸುಗುಣಗಳೆಲ್ಲವೂ ವ್ಯಕ್ತಗೊಳಿಸಲ್ಪಡುವುವೆಂದು ಗ್ರಹಿಸಬೇಕು. ಮತ್ತು ಇದರ ಹಿಂದಿನ ಕಾಂಡದಲ್ಲಿ ಕಥಾಪ್ರತಿಪಾದ್ಯರಾ ದ ರಾಮಾದಿಗಳು,ಮುಂದೆ ನಡೆಸಬೇಕಾದ ಥರಾನುಷ್ಠಾನಗಳಿಗೆ ಸಹಕಾರಿ ಗಳಾದ ಗುಣಗಳೂ, (ಎಂದರೆ, ಮಹಾಕುಲೀನತೆ, ಗುಮೊಪಾಸನಾಲಬದಿ ವ್ಯಜ್ಞಾನಸಂಪತ್ತಿ, ತಾಟಕಾದಿವಧೆ, ಶಿವಧನುರ್ಭoಗ, ವಿಷ್ಟು ಧನುಗ್ರ್ರ ಹಣ, ಮೊದಲಾದುವುಗಳಲ್ಲಿ, ಅವನಿಂದ ತೋರಿಸಲ್ಪಟ್ಟ ಅಸಾಧಾರಣಶಕ್ತಿ ಯೂ,ಧರ್ಮಪತ್ನಿ ಪರಿಗ್ರಹಣಾದಿಗಳೂ ಹೇಳಲ್ಪಟ್ಟಿರುವುವು. ಇನ್ನು ಮೇಲೆ ಈ ಅಯೋಧ್ಯಾಕಾಂಡದಲ್ಲಿ, ಅದರಿಂದ ಅನುಷ್ಟಿಸಲ್ಪಟ್ಟ ಪಿತೃವಚನಪರಿ ಪಾಲನಾದಿರೂಪಗಳಾದ ಸಾಮಾನ್ಯಧಗಳೂ, ಕ್ರಮವಾಗಿ ಲಕ್ಷಣ ಭರತಶತ್ರುಘಾದಿಗಳನಡತೆಯಿಂದ ವ್ಯಕ್ತವಾಗುವ ಭಗವಚ್ಚೇಷತ್ವ, ಭಗ ವಾರತಂತ್ರ್ಯ, ಭಾಗವತಾಭಿಮಾನನಿಷ್ಠೆಗಳೆಂಬ ವಿಶೇಷಧಗಳೂ ಹೇ ಛಲ್ಪಡುವುವು. ಮತ್ತು ವಿಷ್ಣುವಿನ ಅಂಶಭೂತನಾದ ರಾಮನಿಗೆ ಬಾಲಕಾಂ ಡದಲ್ಲಿ ಸೀತಾಸ್ವರೂಪದಿಂದಿರುವ ಮಹಾಲಕ್ಷ್ಮಿಯ ಯೋಗವು ಹೇಳಲ್ಪ ಟಿತು. ಈ ಆಯೋಧ್ಯಾಕಾಂಡದಲ್ಲಿ ಭೂದೇವಿಯ ಯೋಗವು ಹೇಳಲ್ಪಡು ವುದು. ಹಿಂದಿನಕಾಂಡದಲ್ಲಿ ಆ ರಾಮನ ಪರತ್ವವು ಹೇಳಲ್ಪಟ್ಟಿರುವುದು. ಈ ಕಾಂಡದಲ್ಲಿ ಆತನ ಪರಮಸೌಲಭ್ಯವು ನಿರೂಪಿಸಲ್ಪಡುವುದು. ಹಿಂದಿನ ಕಾಂಡದಲ್ಲಿ ಲಕ್ಷ್ಮಿವಿಶಿಷ್ಟವಾದ ಪ್ರಾಸ್ಮಸ್ವರೂಪವು ಹೇಳಲ್ಪಟ್ಟಿತು. ಈ ಕಾಂಡದಲ್ಲಿ ಪ್ರಾಪಕವಾದ ಜೀವಸ್ವರೂಪವು ನಿರೂಪಿಸಲ್ಪಡುವುದೆಂ ಭೂ ಗ್ರಹಿಸಬಹುದು. ಇವುಗಳಲ್ಲಿ ಮೊದಲು ಅತಿರಹಸ್ಯವಾಗಿ, ಅತ್ಯವಶ್ಯ ವಾಗಿ ತಿಳಿಯಬೇಕಾದ ಭಾಗವತಾಭಿಮಾನನಿಷ್ಠೆಯೆಂಬ ಧರವನ್ನು ಎಂ