ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Mos ಶ್ರೀಮದ್ಭಾಗವತನ [ಅಧ್ಯಾ, ೧ ಕೊಂಡು, ಆ ಯುದ್ಧಕ್ಕಾಗಿ ಬಂದು ಸೇರಿದ ಕ್ಷತ್ರಿಯರಲ್ಲಿ, ಒಬ್ಬರಿಂ ದೊಬ್ಬರನ್ನು ಕೊಲ್ಲಿಸಿ, ತಾನು ತಟಸ್ಥನಾಗಿದ್ದಂತೆಯೇ ಭೂಭಾರವನ್ನು ಪರಿಹರಿಸಿದನು. ಮತ್ತು ಆ ಕೃಷ್ಣನು ತನ್ನ ಬಾಹುಬಲದಿಂದ ರಕ್ಷಿತರಾದ ಯಾದವರ ಮೂಲಕವಾಗಿಯೂ ಅಲ್ಲಿ ಅನೇಕರಾಜರನ್ನು ಕೊಲ್ಲಿಸಿದನು. ಓ ಪರೀಕ್ಷಿದ್ರಾಜಾ ! ಆ ಭಗವಂತನ ಮಾಯಾಪ್ರಭಾವವನ್ನು ಹೀಗೆಂದು ನಿಶ್ಚಯಿಸುವುದಕ್ಕೆ ಯಾರಿಗೆ ತಾನೇ ಸಾಧ್ಯವು ? ಭಾರತಯುದ್ಧದ ನೆವ ದಿಂದ ಇಷ್ಟೆಲ್ಲವನ್ನೂ ಮಾಡಿದ್ದರೂ, ತನ್ನ ಮನಸ್ಸಿಗೆ ತೃಪ್ತಿಯಿಲ್ಲದೆ, ಆ ಶ್ರೀಕೃಷ್ಣನು, ಒಮ್ಮೊಮ್ಮೆ ತನ್ನೊಳಗೆ ತಾನು ಹೀಗೆಂದು ಯೋಚಿಸು ತಿದ್ದನು. ಇದುವರೆಗೆ ಅನೇಕ ದುಷ್ಟರಾಜರು ಹತರಾದುದರಿಂದ, ಬಹಳ ಮಟ್ಟಿಗೆ ಭೂಮಿಯ ಭಾವವು ತಗ್ಗಿದ್ದರೂ, ಇನ್ನೂ ಭೂಭಾರವು ಹೆಚ್ಚಾ ಗಿರುವಂತೆಯೇ ನನಗೆ ತೋರುವುದು. ಏಕೆಂದರೆ, ನಮ್ಮ ಯಾದವರಿಗೆ ಮೇಲೆಮೇಲೆ ಗತ್ವವು ಹೆಚ್ಚುತ್ತಿರುವುದು. ಇವರ ಗರವು ಇತರರಿಗೆ ಸಹಿ ಸಲಸಾಧ್ಯವಾಗಿರುವುದು. ಇವರನ್ನುಳಿಸಿದರೆ, ನನ್ನ ಅವತಾರಕ್ಕೆ ಮುಖ್ಯೋ ದೇಶವಾದ ಭೂಭಾರಪರಿಹಾರವು ಪೂರ್ಣವಾಗಿ ನೆರವೇರಿದಂತಾಗುವುದಿಲ್ಲ. ಹೀಗೆ ಆರೆಗೆಲಸದಲ್ಲಿ ಬಿಟ್ಟು ಹೋಗುವುದು ಉಚಿತವಲ್ಲ ! ಈ ಯಾದವ ಕುಲಕ್ಕೆ ನಾಶವಾಗಲಿ, ಅಪಜಯವಾಗಲಿ ಬೇರೊಬ್ಬರಿಂದ ಸಾಧ್ಯವಾದ ಕಾರವಲ್ಲ. ಏಕೆಂದರೆ, ಇವರೆಲ್ಲರೂ ಗಾಂಧರಾಗಿದ್ದರೂ, ನನ್ನ ಆಶ್ರಯ ದಲ್ಲಿರತಕ್ಕವರು. ನನ್ನನ್ನು ನಂಬಿದವರಿಗೆ ಯಾರಿಂದಲೂ ಯಾವ ವಿಧ ದಲ್ಲಿಯೂ ಅಶುಭವುಂಟಾಗುವ ಸಂಭವವಿಲ್ಲ. ಈ ನನ್ನ ಆಶ್ರಯಬಲ ದಿಂದಲೇ ಯಾದವರಿಗೆ ದಿನದಿನಕ್ಕೂ ವೀರಶರಾದಿವಿಭವಗಳು ಹೆಚ್ಚಿ ಬರುತ್ತಿರುವುವು. ಇದನ್ನಡಗಿಸುವುದಕ್ಕೆ ನಾನೇ ಏನಾದರೂ ಉಪಾಯ ವನ್ನು ಮಾಡಬೇಕು, ಏನುಪಾಯವನ್ನು ಮಾಡಲಿ ! ಇರಲಿ ! ಇದಕ್ಕೆಂ ದು ಮಾರ್ಗವುಂಟು. ಇವರಲ್ಲಿಯೇ ಒಬ್ಬರಿಗೊಬ್ಬರಿಗೆ ಕಲಹವನ್ನೆಬ್ಬಿಸು ವೆನು. ಬಿದಿರುಮಳೆಯಲ್ಲಿ ಹುಟ್ಟಿದ ಬೆಂಕಿಯು, ಮೊತ್ತಕ್ಕೆ ಆ ಪೊದೆಯನ್ನೇ ವಹಿಸಿಬಿಡುವಂತೆ, ಅವರಲ್ಲಿ ಹುಟ್ಟಿದ ಕಲಹವೇ ಅವರಿಗೆ ನಾಶಹೇತು ವಾಗುವುದು. ಆಗ ನನ್ನ ಉದ್ದೇಶವು ಪೂರ್ಣವಾಗುವುದರಿಂದ, ನಾನು