ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪of `ಅಧ್ಯಾ. ೧.] ಏಕಾದಶಸ್ಕಂಧವು. ನಿಶಿತನಾಗಿ, ನನ್ನ ನಿಜಲೋಕಕ್ಕೆ ತೆರಳಬಹುದು” ಎಂದು ಸಂಕಲ್ಪಿಸಿ ಕೊಂಡನು. ಓ ರಾಜಾ ! ಆ ಭಗವಂತನಾದರೋ ಸಮಸ್ತ ಪ್ರಾಣಿಗಳ ಹೃದಯದಲ್ಲಿಯೂ ತಾನೇ ಅಡಗಿದ್ದು, ಅವುಗಳನ್ನು ಆಯಾಕಾರದಲ್ಲಿ ನಿಯಮಿಸತಕ್ಕೆ ಸತ್ಯೇಶ್ವರನು, ಮತ್ತು ಸತ್ಯಸಂಕಲ್ಪ ನಾದುದರಿಂದ, ಅವನು ಮನಸ್ಸಿನಲ್ಲಿ ಉದ್ದೇಶಿಸಿದೊಡನೆಯೇ ಆಯಾ ಕಾವ್ಯಗಳು ಹಾಗೆಯೇ ನಡೆದುಹೋಗುವುವು. ಇಂತಹ ಮಹಾಮಹಿಮೆಯುಳ್ಳ ಶ್ರೀಕೃಷ್ಣನು, ಹಿಂದೆ ನಡೆದ ಒಂದಾನೊಂದು ಬ್ರಾಹ್ಮಣಶಾಪವನ್ನು ವ್ಯಾಜವಾಗಿಟ್ಟು ಕೊಂಡು, ಅದರಮೂಲಕವಾಗಿ ಸಮಸ್ಯೆಯಾದವರನ್ನೂ ನಿರ್ಮೂಲ ಮಾಡಿ ತನ್ನ ಲೋಕಕ್ಕೆ ತೆರಳಿದನು. ಆ ಭಗವಂತನು ಕೃಷ್ಣಾವತಾರದಲ್ಲಿ ತೋರಿಸಿದ ಲೋಕಾದ್ಭುತಗಳಾದ ಶೀಲಸೌಂದತ್ಯಾದಿಗಳನ್ನು ಎಷ್ಟೆಷ್ಟು ವರ್ಣಿಸಿದರೂ ಸಾಲದು. ಆತನ ರೂಪಸಂಪತ್ತಿಯ ಮುಂದೆ ಲೋಕದಲ್ಲಿ ಎಂತಹ ದಿವ್ಯರೂಪವೂ ಕಣ್ಮಳಿಸಲಾರದು. ಆತನ ಕಟಾಕ್ಷಸೌಂದಕ್ಕೆ ಎಂತಹ ದೃಷ್ಟಿಚಾಕಚಕ್ಯವೂ ಎಣೆಯಾಗಲಾರದು. ಅವನ ಮಧುರವಾ ಕೈಗಳು ಸ್ಮರಣೆಗೆ ಬಂದಾಗಲೆಲ್ಲಾ ಮನಸ್ಸನ್ನು ಮೋಹಗೊಳಿಸುವುವು. ಅವನ ಗಮನಸೌಂದಯ್ಯವು ನೋಡಿದವರ ಮನಸ್ಸನ್ನು ಸ್ತಬ್ಧವಾಗಿ ಮಾಡುವುದು. ಹೀಗೆ ಕೃಷ್ಣನು, ತನ್ನ ನಿರತಿಶಯ ಸೌಂದಯ್ಯವಿಲಾಸಗ ಳಿಂದ ಸಮಸ್ತಲೋಕದ ಮನಸ್ಸನ್ನೂ , ದೃಷ್ಟಿಯನ್ನೂ, ತನ್ನಲ್ಲಿಗೆ ಆಕ ರ್ಷಿಸುತ್ತಿದ್ದನು. ಹೀಗೆ ಅತಿಮನೋಹರಗಳಾದ ರೂಪಚೇಷ್ಯಾದಿಗಳಿಂದ ಅವನ ಕೀರ್ತಿಯು ಸತ್ವಲೋಕವ್ಯಾಪಿಯಾಗಿ ಕಂಗೊಳಿಸಿತು. ಹೀಗೆ ಕೃ ಷ್ಯನು, ತನ್ನ ನಿರತಿಶಯಸೌಂದಯ್ಯವಿಲಾಸಗಳಿಂದ, ಸಮಸ್ತಲೋಕದ ಮನಸ್ಸನ್ನೂ, ದೃಷ್ಟಿಯನ್ನೂ , ತನ್ನಲ್ಲಿಗೆ ಆಕರ್ಷಿಸುತ್ತಿದ್ದುದಲ್ಲದೆ, ತನ್ನ ಯಶಸ್ಸನ್ನು ಲೋಕದಲ್ಲಿ ವಿಸ್ತರಿಸಿ, ಆ ಕೀರ್ತಿಯೇ ಮನುಷ್ಯರಿಗೆ ಸಂಸಾ ರೋತ್ತಾರಕವಾಗಲೆಂದು ಸಂಕಲ್ಪಿಸಿ, ಆಮೇಲೆ ತನ್ನ ನಿಜಸ್ಥಾನಕ್ಕೆ ಹೋಗಿ ಸೇರಿದನು” ಎಂದನು. ಆಗ ಪರೀಕ್ಷಿದ್ರಾಜನು ಶುಕಮುನಿಯನ್ನು ಕುರಿತು “ಓ ಮಹರ್ಷಿ ! ಯಾದವರೆಲ್ಲರೂ ವಿಶೇಷವಾಗಿ ಬ್ರಾಹ್ಮಣರಲ್ಲಿ ಭಕ್ತಿಯುಳ್ಳವರು. ಮತ್ತು