ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ. ೧೨.] ಏನಾದರಕ್ಕಂಧರ, ೨a ಸುಗ್ರೀವ, ಜಾಂಬವಂತ, ಹನುಮಂತನೇ ಮೊದಲಾದವರೂ, ಗಜೇಂದ್ರ ನೂ, ಜಟಾಯುವೆಂಬ ಗೃಢವೂ ಉತ್ತಮಗತಿಯನ್ನು ಹೊಂದಲಿಲ್ಲವೆ? ಹಾಗೆಯೇ ತುಲಾಧಾರನೆಂಬ ವೈಶ್ಯನೂ, ಧರೆ ವ್ಯಾಧನೆಂಬ ಬೇಡನೂ, ಕುಬೈಯೆಂಬ ವೇಶ್ಯೂ, ಗೋಪಸಿಯರೂ, ಮುನಿಪತ್ನಿ ಯರೂ, ಬ್ರಾಹ್ಮಣಸಿಯರೂ ನನ್ನ ಸ್ಥಾನವನ್ನು ಹೊಂದಿರುವರು. ಇವರೆಲ್ಲರೂ ವೇದವನೋದಿದವರಲ್ಲ! ಮಹಾತ್ಮರನ್ನು ಉಪಾಸಿಸಿದವರೂ ಅಲ್ಲ:ವ್ರತಗಳ ನ್ಯಾಚರಿಸಿದವರಲ್ಲ! ತಪಸ್ಸು ಮಾಡಿದವರಲ್ಲ' ಹಾಗಿದ್ದರೂ ಇವರಿಗೆ ಸತ್ಯ ಹವಾಸಬಲದಿಂದಲೇ ನನ್ನ ಸ್ಥಾನವು ಲಭಿಸಿತು. ಇದಲ್ಲದೆ ಮೇಲೆ ಹೇಳಿದ ವರಲ್ಲಿ, ಗೋಪಸ್ತ್ರೀಯರು ಕೇವಲ ಕಾಮಭಾವದಿಂದಲೇ ನನ್ನನ್ನು ಅನವರ ತವೂ ಧ್ಯಾನಿಸುತ್ತೆ, ಅದರಿಂದಲೇ ಮುಕ್ತಿಯನ್ನು ಪಡೆದರು. ಹಾಗೆಯೇ ಗೋಕುಲದಲ್ಲಿದ್ದ ಪಶುಗಳೂ, ವೃಕ್ಷರೂಪುಂದಿದ್ದ ಯಮಳಾರ್ಜುನರೂ, ಕಾಳಿಯನೇ ಮೊದಲಾದ ಸರ್ಪಗಳೂ, ಕುವಲ ತಮೋಗುಣಪ್ರಚುರೆಗಳಾ ಗಿದ್ದರೂ, ಭಯದಿಂದಲೋ, ದ್ವೇಷದಿಂದಲೋ, ಅಸೂಯೆಯಿಂದಲೋ ನನ್ನ ನ್ನು ಸ್ಮರಿಸುತ್ತಿದ್ದು, ಅದರಿಂದಲೇ ಸಿದ್ಧಿ ಹೊಂದಿ, ಅನಾಯಾಸವಾಗಿ ನನ್ನ ಸ್ಥಾನವನ್ನು ಸೇರಿದರಲ್ಲವೆ ? ಯೋಗ, ಸಾಂಖ್ಯ, ತಪಸ್ಸು, ದಾನ, ಧರ, ಯಜನ, ಯಾ ಜನ, ಅಧ್ಯಯನ, ಸನ್ಯಾಸಾದಿಗಳಿಂದ ಎಷ್ಟೇ ಪ್ರ ಯತ್ನಿಸಿದರೂ ಸುಲಭವಲ್ಲದ ನನ್ನನ್ನು ಅವರು ಬಹುಸುಲಭವಾಗಿ ಸೇರಿಬಿಟ್ಟ ರು. ಉದ್ಯವಾ! ಆದರೇನು? ಆ ಗೋಪಸ್ತ್ರೀಯರಿಗೆ ವನ ದ ಅಮೆರಾಗವು ಮಾತ್ರ ಸಾಧಾರಣವಲ್ಲ'ಹಿಂದೆ ಅಕರನು ನನ್ನ .ನವಣನಾದ ಬಲ ರಾಮನನ್ನೂ ಮಧರೆಗೆ ಕರೆದುಕೊಂಡುಹೋದಾಗ, ಆ ಗೋಪಿಯರ ವ್ಯಸ ನವನ್ನು ಕೇಳಬೇಕ?ನನ್ನಲ್ಲಿ ಅವರಿಗಿದ್ದ ದೃಢಾನುರಾಗದಿಂದ,ಬೇರೆ ಯಾವ ವಿಧದಿಂದಲೂ ಅವರ ಮನಸ್ಸಿಗೆ ನೆಮ್ಮದಿಯಿಲ್ಲದಂತಾಯಿತು. ಬೃಂದಾ ವನದಲ್ಲಿ ನನ್ನೊಡನಿದ್ದಾಗ ಯಾವರಾತ್ರಿಗಳು ಅವರಿಗೆ ಅರ್ಧಕ್ಷಣದಂತೆ ಕಳೆದುಹೋದವೋ, ಆ ರಾತ್ರಿಗಳೇ ನನ್ನ ವಿಯೋಗಕಾಲದಲ್ಲಿ ಅವರಿಗೆ ಕಲ್ಪಪ್ರಾಯವಾಗಿ ತೋರುತ್ತಿದ್ದುವು. ಆ ಗೋಪಿಯರ ಮನಸ್ಸು ನನ್ನಲ್ಲಿ ಯೇ ತಟ್ಟಿದ್ದುದರಿಂದ, ಸಮಾಧಿಯಲ್ಲಿರುವ ರೋಗಿಗಳಿಗೂ, ಸಮು