ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಆ ತ್ರಿಮುಮಾಯುನನು (ಸರ್ಗ 3, ಲುಮೇಲಿನ ಯುಕ್ತಿವಾದಗಳಿಂದ ಬೃಹಸ್ಪತಿಯಂತೆ ಮಾತಾಡುವನು. ಅ೦ ಡವಾದ ಹುಬ್ಬುಗಳಿಂದಲೂ,ವಿಸ್ತಾರವಾದ ಮತ್ತು ಕೆಂಪಾದ ಕಣ್ಣುಗಳಿಂ ದಲೂ, ಲೋಕಾಭಿರಾಮನೆನಿಸಿಕೊಂಡ ಆ ರಾಮನು, ಸಾವಿಗಂಜದ ಕೌಲ್ಯದಿಂದಲೂ, ತಾನು ಯಾವ ಆಪಾಯಕ್ಕೂ ಸಿಕ್ಕದೆ ಶತ್ರುಗಳನ್ನಾಕ್ರ ಮಿಸತಕ್ಕ ಪರಾಕ್ರಮದಿಂದಲೂ, ಸಾಕ್ಷಾತ್ವಿಷ್ಣು ದೇವನಂತೆಯೇ ತೋರು ವನು.ಪ್ರಜೆಗಳನ್ನು ಪಾಲಿಸತಕ್ಕ ರೀತಿಯನ್ನು ಅವನು ಚೆನ್ನಾಗಿ ಬಲ್ಲನು.ಇಂ ಪ್ರಯಚಾಪಲ್ಯಗಳಿಗೆ ಆತನು ಎಂದಿಗೂ ಎಡೆಗುಡತಕ್ಕವನಲ್ಲ. ಎಲೈ ರಾಜ ನೆ! ಹೆಚ್ಚಾಗಿ ಹೇಳಿದುದರಿಂದೇನು? ಆ ರಾಮನು ಮೂರು ಲೋಕಗಳನ್ನೂ ತಾನೊಬ್ಬನೇ ಪಾಲಿಸತಕ್ಕ ಸಾಮರವುಳ್ಳವನು! ಅವುಗಳಲ್ಲಿ ಏಕದೇಶವಾ ದ ಈ ಭೂಮಿಯನ್ನು ಪಾಲಿಸುವುದು ಅವನಿಗೆಷ್ಟು ಮಾತ್ರವೆಂದೆಣಿಸಿರುವೆ? ಆತನ ಕೋಪವಾಗಲಿ, ಅಥವಾ ಆತನ ಅನುಗ್ರಹವಾಗಲಿ ನಿರರ್ಥ ಕವಾಗಿ ಹೋಗತಕ್ಕವುಗಳಲ್ಲ. ಅವುಗಳ ಫಲವನ್ನು ಸಂಪೂರ್ಣವಾಗಿ ತೋರಿ ಸಿಯೇಬಿಡುವುವು. ಅವನು ನ್ಯಾಯರೀತಿಯಿಂದ ಯಾರು ವಧ್ಯರೆಂದು ಕಾಣಿ ಸುವರೋ ಅವರನ್ನು ಕೊಂದೇಬಿಡುವನು. ಅವಧ್ಯರೆಂದು ತೋರಿ ಬಂದರೆ ಅಂತವರಲ್ಲಿ ಕೋಪವನ್ನು ಕೂಡ ತೋರಿಸತಕ್ಕವನಲ್ಲ. ತನಗೆ ಯಾ ರಲ್ಲಿ ಅನುಗ್ರಹವುಂಟಾಗುವುದೋ ಅಂತವರ ಇಷ್ಟಾರಗಳೆಲ್ಲವನ್ನೂ ತಪ್ಪದೆ ಕೈಗೂಡಿಸುವನು. ಶಮಪ್ರಧಾನಗಳಾಗಿ, ಸಮಸ್ತಪ್ರಜೆಗಳೂ ಅಭಿನಂದಿಸ ತಕ್ಕವುಗಳಾಗಿ, ಸತ್ವಲೋಕಪ್ರಿಯಗಳಾಗಿರುವ ಇಂತಹ ಕಲ್ಯಾಣಗುಣಗಳಿಂ ಹ, ಸಹಸ್ರಕಿರಣಗಳಿಂದ ಸೂರೈನು ಹೇಗೋ ಹಾಗೆ ಪ್ರಕಾಶಿಸುತ್ತಿರು ವನು. ಹೀಗೆ ಲೋಕೋತ್ತರಗುಣಗಳಿಂದ ಕೂಡಿದವನಾಗಿಯೂ, ಸತ್ಯದ ಇಕ್ರಮವುಳ್ಳವನಾಗಿಯೂ, ರಿಕ್ಷಾಲಕರಿಗೆ ಸಮಾನನಾಗಿಯೂ ಇರುವ ರಾಮನನ್ನು ಈ ಭೂಮಿಯೇ (ಭೂಪ್ರಜೆಗಳೆಲ್ಲರೂ) ತನಗೆ ನಾಥನನ್ನಾಗಿ ಅಪೇಕ್ಷಿಸುವುದು. ಎಲೈರಘುವಂಶೋತ್ತಮನೆ?ಈತನು ನಿನ್ನ ಮತ್ತು ಪ್ರಜೆ ಗಳ ಶ್ರೇಯಸ್ಸಿಗಾಗಿಯೇ ಇಲ್ಲಿ ಹುಟ್ಟಿರುವನೆಂದು ತಿಳಿ ! ಮರೀಚಿಪುತ್ರ ನಾದ ಕಶ್ಯಪನಂತೆ ಇತನು ನಿನ್ನ ಹೊಟ್ಟೆಯಲ್ಲಿ ಹುಟ್ಟಿ, ಸ ಮಸ್ತವಿಧಗಳಾದ ಸತ್ಪುತ್ರಲಕ್ಷಣಗಳಿಂದ ಕೂಡಿರುವುದು, ನಿನ್ನ ಜನ್ಮಾಂ