ಪುಟ:ಕಥಾ ಸಂಗ್ರಹ - ಭಾಗ ೨.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀಏಪಹಾರದ ಕಕ್ರ 65 ಆ ಮೇಲೆ ದಾರಿ ತಪ್ಪಿದುದರಂತೆ ಹಿಂದಿರುಗಿ ರಾಮನ ಬಳಿಗೆ ಬರುತ್ತ ಕೈಗೆ ಸಿಕ್ಕಿತೆಂಬ ಷ್ಟರಲ್ಲಿ ಚಕ್ಕನೆ ಹಾರಿ ಸ್ವಲ್ಪ ದೂರದಲ್ಲಿ ನಿಲ್ಲುತ್ತ ತನ್ನ ನಡತೆಯಿಂದ ರಾಮನಿಗೆ ಆಶೆ ಯನ್ನು ಹೆಚ್ಚಿಸುವುದಾಗಿ ಹೋಗುತ್ತ ಇದೇ ಮೇರೆಗೆ ಆಶ್ರಮಕ್ಕೆ ಬಹುದೂರವಾಗಿ ಕಾಡಿನಲ್ಲಿ ಅವನನ್ನು ಸೆಳೆದು ಕೊಂಡು ಹೋಯಿತು. ರಾಮನು ನಡುವಗಲ ಮಾರ್ತಾಂಡನ ಬಲು ಬಿಸಿಲಿನಲ್ಲಿ ತಿರುತಿರುಗಿ ಬಾಯರಿ ಬೆಂಡಾಗಿ ಬೇಸತ್ತು ಬಸವಳಿದು ಕಡೆಗೆ-ಈ ಮೃಗವಂತು ನನ್ನ ಕೈಗೆ ಸಿಕ್ಕುವುದಿಲ್ಲ. ಇದನ್ನು ಕೊಂದು ಇದರ ತೊಗಲನ್ನಾದರೂ ತೆಗೆದು ಕೊಂಡು ಹೋಗಿ ಜಾನಕಿಗೆ ಕೊಡುವೆನೆಂದು ತನ್ನ ಮನಸ್ಸಿನಲ್ಲಿ ನಿರ್ಧರಿಸಿದವನಾಗಿ ಬಿಲ್ಲಿಗೆ ನಾರಿಯನ್ನೇರಿಸಿ ಅಲ ಗನ್ನು ಹೂಡಿ ಗುರಿಗಟ್ಟಿ ಮೃಗವನ್ನು ಹೊಡೆಯಲು ; ಆಗ ಮಾರೀಚನು ಮೊದಲಿದ್ದ ಜಿಂಕೆಯ ರೂಪನ್ನು ಬಿಟ್ಟು ಕೂಗಿಕೊಳ್ಳುವ ರಾಮನ ಧ್ವನಿಯಂತೆ-ಹಾ ಸೀ ತೇ? ಹಾ ಲಕ್ಷ್ಮಣಾ! ಎಂದು ಗಟ್ಟಿಯಾಗಿ ಆರ್ತಧ್ವನಿ ಮಾಡುತ್ತ ಪ್ರಾಣಗಳನ್ನು ಬಿಟ್ಟನು. ಇತ್ತ ಎಲೆವನೆಯಲ್ಲಿದ್ದ ಜನಕಜೆಯು ಆ ಧ್ವನಿಯನ್ನು ಕೇಳಿ ಕೂಡಲೆ ಬಹು ದುಃಖಿತಳಾಗಿ ಮಹಾವ್ಯಥೆಯಿಂದ ಲಕ್ಷ್ಮಣನನ್ನು ಕುರಿತು--ಎಲೈ ಮೈದು ನನೇ, ನಿನಗೆ ಪ್ರಿಯನಾದ ಅಣ್ಣನ ದುಃಖಧ್ವನಿಯನ್ನು ಕೇಳಿದೆಯಾ ? ಆ ಮೃಗವು ಮಾಯಾವಿಯಾದ ರಾಕ್ಷಸನೋ ? ಏನೋ ? ನಾನು ತಿಳಿಯದೆ ದುರಾಶಾವಶಳಾಗಿ ನನ್ನ ಪ್ರಿಯನನ್ನು ಅಟ್ಟಿ ಕೆಟ್ಟೆನು, ನನ್ನ ಮನೋವಲ್ಲಭನು ಏನಾಗಿರುವನೋ ? ನಡೆ ! ಬೇಗ ಹೋಗು: ನಿಮ್ಮಣ್ಣನಿಗೆ ಸಹಾಯವನ್ನು ಮಾಡಿ ಆತನನ್ನು ಬೇಗ ಇಲ್ಲಿಗೆ ಕರೆದು ಕೊಂಡು ಬಂದರೆ ಸು. ಇಲ್ಲದಿದ್ದರೆ ಈ ಕ್ಷಣವೇ ಪ್ರಾಣವನ್ನು ಬಿಡು ವೆನೆಂದು ಹೇಳಿ ಲಕ್ಷ್ಮಣನನ್ನು ಕಳುಹಿಸಲು ; ಆತನು ಕಾಡಿನಲ್ಲಿ ರಾಮನನ್ನು ಹುಡು ಕುತ್ತ ಹೋಗುತ್ತಿದ್ದನು. ಇತ್ತಲಾ ದುಷ್ಟನಾದ ರಾವಣನು ಸನ್ಯಾಸಿವೇಷವನ್ನು ತಾಳಿಕೊಂಡು ಬಂದು ರಾಮನ ಎಲೆವನೆಯನ್ನು ಹೊಕ್ಕು ಸೀತೆಯನ್ನು ಬಲಾತ್ಕಾರದಿಂದ ಹಿಡಿದೆತ್ತಿ ರಥದ ಮೇಲೆ ಕೂರಿಸಿಕೊಂಡು ಆಕಾಶಮಾರ್ಗದಲ್ಲಿ ಬರುತ್ತಿರುವಾಗ ಸೀತೆಯು--ಹಾ ರಾಮಾ ! ಹಾ ಲಕ್ಷ್ಮಣಾ ! ನೀವಿಲ್ಲದ ವೇಳೆಯಲ್ಲಿ ದುರಾತ್ಮನಾದ ಈ ರಕ್ಕಸನು ಮಂದಭಾಗ್ಯಳಾದ ನನ್ನನ್ನು ಹಿಡಿದೆತ್ತಿ ಕೊಂಡು ಹೋಗುತ್ತಿರುವನು. ದಿಕ್ಕಿಲ್ಲವಲ್ಲಾ! ಅಯ್ಯೋ ! ಎಂದು ಮೊರೆಯಿಟ್ಟು ರೋದಿಸುತ್ತಿರುವ ಶಬ್ದವನ್ನು ಜಟಾಯುವೆಂಬ ಗೃಧ್ರರಾಜನು ಕೇಳಿ ಅತಿಕೋಪದಿಂದ-ಎಲೈ ನೀಚನಾದ ರಾವಣನೇ, ಜಗದಭಿ ರಾಮನಾದ ರಾಮನ ರಮಣಿಯಾದ ಸೀತೆಯನ್ನು ಅಪಹರಿಸಿಕೊಂಡು ಎಲ್ಲಿಗೆ ಹೋಗು ತಿರುವೆ ? ನಿಲ್ಲು ! ನಿಲ್ಲು ! ಲೋಕಮತೃವಾದ ಜನಕಜೆಯನ್ನು ಬೇಗ ಬಿಟ್ಟರೆ ಸರಿ. ಇಲ್ಲವಾದರೆ ನಿನ್ನನ್ನು ಹಿಂಡಿ ಪ್ರಾಣಗಳನ್ನು ತೆಗೆಯುವೆನೆಂದು ಆಕಾಶಕ್ಕೆ ಹಾರಿ ತನ್ನ ಮಹಾಪಕ್ಷಗಳಿಂದ ರಾವಣನ ರಥ ರಥಾಶ್ವ ಕೇತು ದಂಡಗಳನ್ನು ಮುರಿಬಡಿದು ನೆಲಕ್ಕೆ ಕೆಡಹಿ ಕೊಕ್ಕುಗಳಿಂದ ರಾವಣನ ಮೈಯ ನ್ನು ಕಚ್ಚಿ ಮಾಂಸಖಂಡಗಳನ್ನು ಕಿತ್ತು ರಕ್ತದ ಕೋಡಿಯನ್ನು ಹರಿಸಲು ; ಆಗ ರಾವಣನು ಮಾಯೆಯನ್ನವಲಂಬಿಸಿ