ಪುಟ:ಕಥಾ ಸಂಗ್ರಹ - ಭಾಗ ೨.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಜನೇಯನು ಸೀತೆಯನ್ನು ಕಂಡು ಲಂಕಾಪಟ್ಟಣವನ್ನು ಸುಟ್ಟು ದು 83 ನೆಗೆದು ಬರುತ್ತಿರುವ ಕಾಲದಲ್ಲಿ ಮೈನಾಕವೆಂಬ ಪರ್ವತವು ಸಮುದ್ರಮಧ್ಯದಿಂದ ಹೊರಟು ಬಂದು ಆ೦ಜನೇಯನನ್ನು ನಾನಾ ಪ್ರಕಾರವಾಗಿ ಉಪಚರಿಸಲು ; ಅವನು ಅದಕ್ಕೆ ಸಂತೋಷಪಟ್ಟು.. ನಾನು ಸೀತೆಯನ್ನು ಕಂಡು ಆ ವರ್ತಮಾನವನ್ನು ಶ್ರೀರಾ ಮನಿಗೆ ಹೇಳುವ ವರೆಗೂ ಅನ್ನೊದಕಗಳನ್ನು ಸ್ವೀಕರಿಸುವುದಿಲ್ಲ ವೆಂದು ಶಪಥಮಾಡಿ. ದೇನೆ. ಆದುದರಿಂದ ನನ್ನ ಕಾರ್ಯವು ಶೀಘ್ರದಲ್ಲಿ ಕೈಗೂಡುವ ಹಾಗೆ ಅನುಗ್ರಹಿಸ ಬೇಕೆಂದು ಹೇಳಿ ಹೊರಟು ಅಲ್ಲಿಂದ ಮುಂದೆ ಹೋಗುತ್ತ ತನ್ನ ಶೌರ್ಯವನ್ನು ಪರೀ ಕಿಸಬೇಕೆಂದು ಇಂದ್ರನು ಕಳುಹಿಸಿದ ಸುರಸೆಯೆಂಬವಳನ್ನು ಉಪಾಯ ದಿಂದ ಜಯಿಸಿ ಮುಂದೆ ಹೋಗುತ್ತಿರಲು ; ತನ್ನನ್ನು ಕೊಂದುಹಾಕುವೆನೆಂದು ಆರ್ಭಟಿಸಿಕೊಂಡು ಬಂದ ಸಿಂಹಿಕೆಯೆಂಬ ರಾಕ್ಷಸಿಯನ್ನು ಎರಡು ಭಾಗವಾಗಿ ಸೀಳಿ ಒಂದು ಭಾಗವನ್ನು ಲ೦ಕಾಪಟ್ಟಣಕ್ಕೂ ಇನ್ನೊಂದನ್ನು ಜಾಂಬವಂತಾದಿಗಳಿರುವ ಸ್ಥಳಕ್ಕೂ ಬಿಸುಟು ಅತಿ ವೇಗದಿಂದ ಹಾರಿ ಮುಂದಕ್ಕೆ ಬಂದು ಲ೦ಕಾಪಟ್ಟಣದ ಬಳಿಯಲ್ಲಿರುವ ಅಂಬನಾಮ ಕಸ ರ್ವತದ ಮೇಲೆ ಇಳಿದು ಲಂಕಾನಗರದ ಸೊಬಗನ್ನು ನೋಡಿ ತಲೆದೂಗಿದನು. ಆ ನಗರದ ಸುತ್ತಲೂ ವಿರಾಜಿಸುತ್ತಿರುವ ಉದ್ಯಾನವನವು-ನಾನಾವಿಧ ಪಲ್ಲವ ಪಷ್ಟ ಫಲಭರಿತಗಳಾದ ಮರುಗ ಮಲ್ಲಿಗೆ ಜಾಜಿ ಸಂಪಿಗೆ ಸುರಗಿ ವಕುಳ ಸೇವಂತಿಗೆ ಪಾಟಲಿ ಕರವೀರ ಮತ್ತು ಕದಳಿ ನಾಳಿಕೇರ ಜಂಬು ನನಸ ಚೂತ ನಿಂಬೆ ದಾಡಿನ ದ್ರಾಕ್ಷಿ ಮಾದರಿ ಅಂಚರ ಖರ್ಜೂರ ಲವಂಗ ಈ ಮೊದಲಾದ ಅತಾವೃ ಕ್ಷಗಳಿಂದ ಕೂಡಿ ಶುಕಸಿಕಶಾರಕಾದಿ ಪಕ್ಷಿಗಳಿಂದ ಒಪ್ಪತ್ತಿರುವುದಾಗಿಯೂ ಕಮಲ ನೀಲೋತ್ಪಲ ಸೌಗಂಧಿಕಾರಿಗಳಿಂದಲೂ ನಿರ್ಮಲೋದಕಗಳಿಂದಲೂ ಮರಕತಶಿಲೆಗಳ ಸೋಪಾನಗಳಿಂದಲೂ ಹಂಸಕಾರಂಡ ಚಕ್ರವಾಕ ಕೌಂಚಾಡಿ ಜಲ ಸಕಿ ಜಾತಗ ಳಿಂದಲೂ ಕೂಡಿ ಶೋಭಾಯಮಾನಗಳಾದ ಸರಸ್ಸುಗಳಿ೦ದ ರಾಜಿಸುತ್ತಿರುವುದಾ ಗಿಯ ಶೈತ್ಯಸೌರಭ್ಯ ಮಾಂದ್ಯ ಯುಕ್ತವಾಗಿ ಬೀಸುತ್ತಿರುವ ವಾಯುವಿನಿಂದಲೂ ಮಕ ರಂದರಸಪಾನವನ್ನು ಮಾಡಿ ಮದಿಸಿರುವ ಭ್ರಮರಗಳ ಝೇಂಕಾರಗಳಿಂದ ಕೂಡಿ ಮನೋಹರವುಳುದಾಗಿಯ ಹುಲ್ಲೆ ಎರಳೆ ಕಸ್ತೂರಿ ಚಮರಿ ಇವೇ ಮೊದಲಾದ ಮೃಗಗಳಿಂದಲೂ ವಿಚಿತ್ರ ರತ್ನ ನಿರ್ಮಿತಗಳಾದ ಕ್ರೀಡಾಪರ್ವತಗಳಿಂದಲೂ ಕೂಡಿ ಅತಿ ರಮಣೀಯತೆಯುಳ್ಳುದಾಗಿಯ ಶೋಭಿಸುತ್ತಿದ್ದಿತು. ಆ೦ಜನೇಯನು ಇಂಥ ಉದ್ಯಾನವನವನ್ನು ನೋಡಿ ಆಶ್ಚರ್ಯವುಳ್ಳವನಾಗಿ ಆ ಮೇಲೆ ಭೂಮಂಡಲದಲ್ಲಿರುವ ಸಕಲಪರ್ವತಗಳೂ ಸಮವಲ್ಲ ವೆಂದು ಪರಮೇಶ್ವರನಿಗೆ ಆವಾಸಸ್ಥಾನವಾದ ರಜತಾದ್ರಿ ಯೋಪಾದಿಯಲ್ಲಿ ಬೆರತುನಿಂತಿದೆಯೋ ಎಂಬಂತೆ ಅತ್ಯುನ್ನತವಾಗಿರುವ ತ್ರಿಕೂಟಾಚ ಲದ ಮೇಲುಗಡೆಯಲ್ಲಿ ನವರತ್ನ ಯುಕ್ತವಾದ ಜೀವರತ್ನ ಗಳಿಂದ ನಿರ್ಮಿತವಾಗಿ ಮೇಘ ಮಂಡಲವನ್ನು ಆಕ್ರಮಿಸಿಕೊಂಡಿರುವ ಕೋಟೆಗಳಿಂದಲೂ ಕನಕಮಯಗಳಾಗಿ ಸೂರ್ಯಮಂಡಲವನ್ನು ಭೇದಿಸಿಕೊಂಡು ಹೋಗಿರುವ ಕೊತ್ತಲುಗಳಿಂದಲೂ ಚ೦ದ್ರ ಮಂಡಲವನ್ನು ಆಕ್ರಮಿಸಿಕೊಂಡಿರುವ ಪ್ರಜ್ಞೆಯ ಆಳ್ವರಿಗಳಿಂದಲೂ ಥಳಥಳಾಯಮಾ ನವಾಗಿ ಮೇರುಶಿಖರಗಳ ಹಾಗೆ ಪ್ರಕಾಶಿಸುತ್ತಿರುವ ರತ್ನಕಲಶಗಳಿಂದಲೂ ಪರಿಶೋಭಿ ಸುತ್ತ ಅಮರಾವತಿಯನ್ನು ಜರಿಯುವಂತಿರುವ ಲಂಕಾ ಪಟ್ಟಣವನ್ನು ನೋಡಿ ಕಣ್ಣಿಟ್ಟಿ