ಪುಟ:ಕಥಾ ಸಂಗ್ರಹ - ಭಾಗ ೨.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ಕಥಾಸಂಗ್ರಹ-೪ ನೆಯ ಭಾಗ ವಂತೆ ತಿಳಿಸೆಂದು ಆಜ್ಞಾಪಿಸಲು ; ಕೂಡಲೆ ಯಕ್ಷ ಕಿನ್ನರಾದಿಗಳ ಸೇನಾಸಮುದ್ರವು ದಶಕಂಠನೊಡನೆ ಯುದ್ಧ ಮಾಡಲೋಸುಗ ಬಂದು ನಿಂತಿತು. ಆಗ ರಾಕ್ಷಸರ ಬಲವು ಬಂದು ಯಕ್ಷರ ಬಲಕ್ಕೆದುರಾಗಿ ನಿಂತು.ದಶಾನ ನನೂ ಧನಪತಿಯ ಭಾತೃಗಳೆಂದು ನಾವೀವರೆಗೂ ಮನ್ನಿಸಿದರೆ ನೀವಿಂತು ಕೊಬ್ಬಿ ದಿರಾ ? ಎಂದಬ್ಬರಿಸಿ ಮುಂದುವರಿದು ಯಕ್ಷಸೇನೆಗೆ ಬರಸಿಡಿಲೆರಗುವಂತೆರಗಿ ಮುರಿ ಬಡಿವುತ್ತಿರಲು ; ಜವನೋಕರಿಸಿದನೋ ಎಂಬಂತೆ ಬಿದ್ದಿರುವ ಮೆದುಳಳಿಂದಲೂ ಮಜಾ ಮಾಂಸಗಳಿಂದಲೂ ಕುಣಿಕುಣಿದಾಡುವಟಿಗಳಿಂದಲೂ ತಲೆಬುರುಡೆಗಳಿಂದ ಲೂ ನದೀರೂಪವಾಗಿ ಪ್ರವಹಿಸುತ್ತಿರುವ ರಕ್ತದಿಂದಲೂ ನಿಮೇಷಕಾಲದಲ್ಲಿ ವ್ಯಾಪ್ತ ವಾದ ಆ ರಣರಂಗವು ನೋಡುವುದಕ್ಕೆ ಭಯ೦ಕರವಾಗಿದ್ದಿತು. ಯಕ್ಷಾನೀಕಿನಿಯ ಕೂಡ ಧೈರ್ಯಗೆಡದೆ ರಾಕ್ಷ ಸಸತಾಕಿನಿಯನ್ನು ಬಹಳವಾಗಿ ಕೊಂದಿತು. ಆಗ ದಶ ವದನನು ಯಕ್ಷರ ಗುಂಪಿನ ಮೇಲೆ ತನ್ನ ಬಾಣಪರಂಪರಾವೃಷ್ಟಿ ಯನ್ನು ಸುರಿಸಲು ; ಆ ಬಾಣಹತಿಯಿಂದ ಅನೇಕರು ಕೈಕಾಲ್ಮುರಿದು ಕಿವಿಮಗುಗಳು ಹರಿದು ತಲೆಗ ಳೊಡೆದು ಚೂರುಗಳಾಗಿ ನಾಶವಾದುದನ್ನು ಉಳಿದವರೆಲ್ಲರೂ ನೋಡಿ ದಿಕ್ಕು ದಿಕ್ಕಿಗೆ ಓಡಿಹೋಗಲು ; ಕೂಡಲೆ ಕುಬೇರನು ಮಾಣಿಭದ್ರನೆಂಬ ತನ್ನ ಸೇನಾಪತಿಯೊಡನೆ ಕೂಡಿ ಯುದ್ಧಕ್ಕೆ ಬರಲು ; ಆಗ ದಶಗ್ರೀವನು ಬಂದು ಕುಬೇರನಿಗೆದುರಾಗಿ ನಿಂತನು. ಪ್ರ ಹಸ್ತನು ಬಂದು ಮಾಣಿಭದ್ರನನ್ನೆದುರಿಸಿ ನಿಂತನು. ಆ ಮೇಲೆ ಮಾಣಿಭದ್ರನು ಪ್ರಹಸ್ತನೊಡನೆ ಯುದ್ಧಕ್ಕೆ ಆರಂಭಿಸಿ, ಅವನ ಗದಾಘಾತದಿಂದ ಕಿವಿ ಕಣ್ಮಗುಗ ಳಲ್ಲಿ ರಕ್ತವು ಸುರಿಯುವುದಕ್ಕೆ ಆರಂಭಿಸಲು ; ಬಲಹೀನನಾಗಿ ಭೂಮಿಯ ಮೇಲೆ ಬಿದ್ದು ಮೈಮರೆತನು. ದಶಮುಖನು ಬ್ರಹ್ಮ ವರಪ್ರಭಾವದಿಂದ ಯುದ್ಧದಲ್ಲಿ ಕುಬೇ ರನನ್ನು ಸೋಲಿಸಿ ಆತನಿಗೆ ಬ್ರಹ್ಮನು ಕೊಟ್ಟಿದ್ದ ವಿಮಾನವನ್ನು ಕಿತ್ತುಕೊಂಡು ತನ್ನ, ಸಕಲ ಸೇನೆಯೊಡನೆ ಕೂಡಿ ಹೊರಟು ಆಕಾಶಮಾರ್ಗದಲ್ಲಿ ಬರುತ್ತ ಶರವಣವೆಂಬ ಸ್ಥಳ ವನ್ನು ನೋಡಿ ಕೈಲಾಸಗಿರಿಯ ಮೇಲ್ಗಡೆಗೆ ವಿಮಾನವನ್ನು ಹತ್ತಿಸಲು ; ಅದು ಮುಂದಕ್ಕೆ ನಡೆಯದೆ ಕಾಲ್ಕು ರಿದ ಕೋಳಿಯಂತೆ ನಿಂತಿತು. - ಆಗ ದಶಮುಖನು-ಈ ವಿಮಾನವು ಇಲ್ಲಿ ಮಾತ್ರ ನಿಲ್ಲುವುದಕ್ಕೆ ಕಾರಣ ವೇನು ? ಯಕ್ಷರ ಮಾಯವೋ ? ಅಥವಾ ಇದರ ನಡೆಯುಡುಗಿತೋ ? ಬುದ್ಧಿಶಾಲಿ ಯಾದ ಎಲೆ ಮಾರೀಚನೇ, ಇದರ ನಿಜಸ್ಟಿಯನ್ನು ಹೇಳೆಂದು ಕೇಳಲು ; ಆ ಮಾರೀ ಜನು--ಈ ವಿಮಾನವು ವೈಶ್ರವಣನಿಗಲ್ಲದೆ ಮತ್ತೊಬ್ಬರಿಗೆ ನಡೆಯದಿರಬಹುದೆಂದು ಹೇಳುತ್ತಿರುವಷ್ಟರಲ್ಲಿ-ಈ ಕೈಲಾಸಪರ್ವತಾಗ್ರದಲ್ಲಿ ಬ್ರಹ್ಂದ್ರಾದಿ ದೇವತೆಗ ಳಿಗೂ ಯಕ್ಷ ಕಾಕ್ಷಸ ಕಿನ್ನರ ಕಿಂಪುರುಪಾದಿ ಕಾಮಚಾರಿಗಳಿಗೂ ಮಹಾದೇವನ ಪ್ರಭಾವದಿಂದ ಗಮಿಸುವುದು ಅಶಕ್ಯವಾಗಿರುವುದು ; ಹಿಂದಿರುಗು. ಮುಂದಕ್ಕೆ ಹೋದರೆ ಕೆಡುವೆ ಎಂದು ದಶವದನನನ್ನು ಕುರಿತು ನಂದೀಶ್ವರನು ಹೇಳಿದನು, ಆಗೆ ದಶಕಂಠನು ಶಂಕರನ ಎರಡನೆಯ ರೂಪಿಯಾದ ನಂದಿಕೇಶ್ವರನ ಮುಖವನ್ನು. ನೋಡಿ--ನಿನ್ನ ಮೋರೆಯು ಕೋತಿಯ ಸೋಡಿಗೆ ಸರಿಯಾಗಿರುವುದರಿಂದ ಬುದ್ದಿ.