ಪುಟ:ಕಥಾ ಸಂಗ್ರಹ - ಭಾಗ ೨.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ 35 ಇತ್ತ ಅಯೋಧ್ಯಾನಗರದಲ್ಲಿ ರಾಮಲಕ್ಷ್ಮಣರು ತಾಯಿತಂದೆಗಳ ಸೇವೆ ಯನ್ನು ಮಾಡುತ್ತ ದೇಶದ ಜನಗಳಿಗೂ ಪಟ್ಟಣದ ಜನಗಳಿಗೂ ಮಂತ್ರಿಸೇನಾಪತಿ ಗಳೇ ಮೊದಲಾದ ಪರಿವಾರದ ಜನಗಳಿಗೂ ತಮ್ಮ ಸದ್ಗುಣಗಳಿಂದ ಹಿತವನ್ನು ೦ಟು ಮಾಡುವವರಾಗಿ ಮೆರೆಯುತ್ತಿದ್ದರು. ಹೀಗಿರಲು ದಶರಥರಾಜನು ತನ್ನ ಜೈಷ್ಣ ಕುಮಾರನಾದ ರಾಮನ ದಯಾಧರ್ಮಾದಿ ಮಹಾ ಗುಣಗಳಿಗಾಗಿ ಬಹು ಸಂತೋಷ. ಪಟ್ಟು ನನ್ನ ಸಿಂಹಾಸನವನ್ನೇರುವುದಕ್ಕೂ ಈ ಕೋಸಲರಾಜ್ಯವನ್ನು ನೀತಿಯಿಂದ ಪರಿಪಾಲಿಸುವುದಕ್ಕೂ ಪೂರ್ಣಚಂದ್ರನು ಸಮುದ್ರವನ್ನು ಹೆಚ್ಚಿಸುವಂತೆ ರಘುವಂಶ ವನ್ನು ವೃದ್ಧಿ ಪಡಿಸುವುದಕ್ಕೂ ಈತನೇ ಅರ್ಹನೆಂದು ನಿಶ್ಚಯಿಸಿ ಒಂದು ದಿನ ಮಂತ್ರಿ ಸೇನಾಪತಿ ಪುರಜನ ವಯೋವೃದ್ಧರು ಜ್ಞಾನವೃದ್ಧರು ಪರೋಹಿತವಶಿಷ್ಠ ಇವರೇ ಮೊದಲಾದವರನ್ನೆಲ್ಲಾ ಕರಿಸಿಕೊಂಡು ಯಥೋಚಿತವಾಗಿ ಸಭಾಮಂದಿರದಲ್ಲಿ ಕುಳ್ಳಿ ರಿಸಿ ಆದರಿಸಿ ಅವರೆಲ್ಲರನ್ನೂ ಕುರಿತು-ಅಯ್ಯಾ ಪರಿಷಜ್ಜನರೇ, ಈ ವರೆಗೂ ನಿಮ್ಮೆಲ್ಲರ ಪ್ರೀತಿಗೂ ಪಾತ್ರನಾಗಿ ರಾಜ್ಯಭಾರವನ್ನು ವಹಿಸಿಕೊಂಡಿದ್ದ ನಾನು ಈಗ ಮುದುಕ ನಾದೆನು. ಇನ್ನು ಮೇಲೆ ನಾನು ದೇವೇಂದ್ರನ ಓಲಗದ ಚಾವಡಿಯನ್ನು ಏರತಕ್ಕ ವನು. ಅದು ಕಾರಣ ನನ್ನ ನಾಲ್ಕು ಮಂದಿ ಮಕ್ಕಳಲ್ಲಿ ಶೂರನಾಗಿಯ ಸುಗುಣಗ ಳುಳ್ಳವನಾಗಿಯೂ ಇರುವ ಹಿರಿಯವನಾದ ರಾಮನೇ ನನ್ನ ಈ ಸಾಮ್ರಾಜ್ಯಕ್ಕೆ ಒಡೆ ಯನಾಗತಕ್ಕವನು, ಈ ಭಾಗದಲ್ಲಿ ಗುಣದೋಷವಿಚಾರಶೀಲರಾದ ನೀವೆಲ್ಲರೂ ಒಪ್ಪಿದರೆ ಶುಭಲಗ್ನದಲ್ಲಿ ಈ ರಾಮನಿಗೆ ಪಟ್ಟಾಭಿಷೇಕವನ್ನು ಮಾಡುವುದು ಉತ್ತ ಮವು ಎಂದು ಹೇಳಿದನು. ಆಗ ಈ ಮಾತುಗಳನ್ನು ಕೇಳಿದ ಅವರೆಲ್ಲರೂ ಬಹಳವಾಗಿ ಸಂತೋಷಪಟ್ಟು ದಶರಥರಾಜನನ್ನು ಕುರಿತು-ಎಲೈ ಮಹಾರಾಜನೇ, ನೀನು ಹೇಳಿದ ಮಾತು ಬಹು ಶ್ರೇಷ್ಠವಾದುದು. ಈ ರಾಮಚಂದ್ರನ ಬೆಳ್ಳಡೆಯ ನೆಳಲು ಈ ದೇಶದ ಪ್ರಜೆಗಳಾದ ನಮ್ಮೆಲ್ಲರಿಗೂ ಶೀತಲವಾದ ಕಲ್ಪವೃಕ್ಷದ ನೆರಳಾಗಿ ಪರಿಣ ಮಿಸಲಿ, ಮನು ದಿಲೀಪ ಮಾಂಧಾತ ಪುರೂರವನ್ನು ಕಾರ್ತವೀರ್ಯಾರ್ಜುನ ಸಗರ ಭಗೀರಥ ನಳ ನಹುಷ ಇವರೇ ಮೊದಲಾದ ಚಕ್ರವರ್ತಿಗಳ ನೆನಹನ್ನು ಈ ರಾಮಚ೦ ದ್ರನು ತನ್ನ ಧರ್ಮಪ್ರವರ್ತಕವಾದ ನಡತೆಗಳಿಂದ ಮರೆಯಿಸುವನು, ಈ ಭೂವನಿ ತೆಯು ಈ ರಾಮನನ್ನು ನಿಜಪತಿಯನ್ನಾಗಿ ವರಿಸುವಳು, ಭಗವತ್ಕೃಪೆಯಿಂದ ಈತನು ಅರಸಾದರೆ ನಾವೆಲ್ಲರೂ ನಿಶ್ಚಿಂತರಾಗಿ ಸುಖದಿಂದಿರುವೆವೆಂದು ಹೇಳಿದರು. ಆ ಮಾತನ್ನು ಕೇಳಿ ದಶರಥಮಹಾರಾಜನು ಕೂಡಲೆ ಜೋಯಿಸರನ್ನು ಕರಿಸಿ ವೈಶಾಖ ಶುದ್ಧ ಪಂಚಮಿಯ ದಿವಸದಲ್ಲಿ ಪ್ರಶಸ್ತವಾದ ಅಭಿಜಿನ್ನುಹೂರ್ತದಲ್ಲಿ ರಾಮನಿಗೆ ಪಟ್ಟಾಭಿಷೇಕೋಚಿತವಾದ ಲಗ್ನವನ್ನು ನಿರ್ಣಯಿಸಿ ಆ ಪಟ್ಟಣವನ್ನೆಲ್ಲಾ ಶೃಂಗರಿಸು ವಂತೆಯ ದೇವಸ್ಥಾನಗಳಲ್ಲಿ ಉತ್ಸವಾರಾಧನೆಗಳು ನಡೆಯುವಂತೆಯ ವಶಿಷ್ಠ ಮಹರ್ಷಿಗಳು ಹೇಳಿದಂತೆ ಪಟ್ಟಾಭಿಷೇಕದ ಸಾಮಾನುಗಳನ್ನು ಸಿದ್ಧ ಪಡಿಸುವಂತೆಯಡಿ ಮಂತ್ರಿಗಳಿಗೆ ಅಪ್ಪಣೆಯನ್ನಿತ್ತು ಆ ಮೇಲೆ ರಾಮನನ್ನು ಕರೆಯಕಳುಹಿಸಿ-ನಾಳಿನ ಮಧ್ಯಾಹ್ನದಲ್ಲಿ ಸಂಪ್ರಾಪ್ತವಾಗುವ ಸುಲಗ್ನದಲ್ಲಿ ಈ ಕೋಸಲರಾಜ್ಯಾಧಿಪತ್ಯಾರ್ಥ