ಪುಟ:ಕಥಾ ಸಂಗ್ರಹ - ಭಾಗ ೨.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

46 ಕಥಾಸಂಗ್ರಹ-೪ ನೆಯ ಭಾಗ ಪಡೆದ, ಇಂಥ ದುರಂತದುಃಖಕ್ಕೆ ಗುರಿಯಾದೆನು. ಲೋಕದಲ್ಲಿ ಮಕ್ಕಳನ್ನು ಹೆತ್ತು ಹೀಗೆ ವ್ಯಥೆಯನ್ನೂ ಮಹಾದುಃಖವನ್ನೂ ಅನುಭವಿಸುವುದಕ್ಕಿಂತ ಹೆಂಗಸರು ಬಂಜೆ ಯರಾಗಿರುವುದೇ ಉತ್ತಮವು. ಇದರಿಂದ ಮಕ್ಕಳಿಲ್ಲ ಎಂಬ ವಾರ್ತೆಯೊಂದೇ ಹೊರತು ಅನ್ಯಥಾ ಯಾವ ದುಃಖವೂ ಇರುವುದಿಲ್ಲ, ನನ್ನ ಸವತಿಯಾದ ಕೈಕೇ ಯಿಯು ತಾನು ಪತಿಯ ಪ್ರೀತಿಗೆ ಪಾತ್ರಳಾಗಿದ್ದೇನೆಂಬ ಗರ್ವದಿಂದ ಆಗಾಗ್ಗೆ ಕೆಟ್ಟ ಮಾತುಗಳನ್ನಾಡಿ ನನ್ನನ್ನು ಬಹುವಾಗಿ ನಿಂದಿಸುತ್ತಿರುವಳು. ಈ ವರೆಗೂ ನಿನ್ನನ್ನು ನೋಡುತ್ತಿದ್ದುದರಿಂದ ಆ ಮಹಾ ವ್ಯಸನವನ್ನು ಸಹಿಸಿಕೊಂಡಿದ್ದೆನು. ಇನ್ನು ಮೇಲೆ ನೀನು ಕಾಡಿಗೆ ಹೋಗಿ ಆಕೆಯ ಮಗನಿಗೆ ರಾಜ್ಯಾಭಿಷೇಕವಾಗುವುದರಿಂದ ನಾನು ಅವಳ ಕೈಕೆಳಗೆ ಬಿದ್ದಿರಬೇಕಾಗಿ ಬಂದಿತು. ನನಗೆ ಇದಕ್ಕಿಂತಲೂ ಹೆಚ್ಚಾದ ಮತ್ತೊಂದು ದುಃಖವಿರುವುದೇ ? ಎಲೆ ತಂದೆಯೇ, ರಾಮನೇ, ನೀನು ಅರಣ್ಯ ವಾಸಕ್ಕೆ ಹೋದ ಕೂಡಲೆ ನನಗೆ ಮರಣವು ಸಿದ್ದವಾಗಿರುವುದು, ಹದಿನಾಲ್ಕು ಸಂವತ್ಸರಗಳ ಪರ್ಯ೦ತರವೂ ನಿನ್ನನ್ನಗಲಿ ನಾನೆಂತು ಬದುಕಲಿ ? ಚಂದ್ರಮಂಡಲಕ್ಕೆ ಸಮಾನವಾದ ನಿನ್ನ ಮುಖವನ್ನು ನೋಡದೆ ನಾನು ಜೀವಿಸುವುದು ಹೇಗೆ ? ಪತಿಯ ಪ್ರೀತಿಯ ಇಲ್ಲದೆ ನಿನ್ನನ್ನೂ ತೊರೆದು ಕೃಪಣಳಾಗಿ ನಾನು ಬಾಳುವುದುಂಟೇ ? ನೀನು ಚೆನ್ನಾಗಿ ಬದುಕಬೇಕೆಂಬ ಉದ್ದೇಶದಿಂದ ನಾನು ಮಾಡಿದ ದೇವತಾ ಪ್ರಾರ್ಥ ನೆಗಳೂ ವ್ರತೋಪವಾಸಗಳೂ ದಾನಧರ್ಮಗಳೂ ಇವೆಲ್ಲವೂ ಬೂದಿಯಲ್ಲಿ ಮಾಡಿದ ಹೋಮದಂತೆ ನಿಷ್ಪಲವಾದುವು. ನಿನ್ನ ಅರಣ್ಯವಾಸದ ಸುದ್ದಿಯನ್ನು ಕೇಳಿದರೂ ನನ್ನ ಎದೆಯು ಸೀಳಿಹೋಗದೆ ಇರುವುದರಿಂದ ಪಾಪಿಯಾದ ವಿಧಿಯು ನನ್ನ ಹೃದಯ ವನ್ನು ವಜ್ರದಿಂದ ಮಾಡಿರಬಹುದೆಂದು ನೆನಸುತ್ತೇನೆ. ಅರಣ್ಯದಲ್ಲಿ ಸಿಂಹವು ಹೆಣ್ಣು ಹುಲ್ಲೆಯನ್ನು ಎಳೆದೊಯ್ದಂತೆ ಯಮನು ನನ್ನನ್ನು ತನ್ನ ಪಟ್ಟಣಕ್ಕೆ ಏತಕ್ಕಾಗಿ ಎಳೆದೊಯ್ಯುವುದಿಲ್ಲವೋ ? ದುಃಖಕಾಲದಲ್ಲಿ ಮರಣವುಂಟಾಗುವುದಿಲ್ಲ ಎಂದು ಹಿರಿ ಯರು ಹೇಳುವ ಮಾತು ಈಗ ನನ್ನಲ್ಲೇ ನಿದರ್ಶನಕ್ಕೆ ಬಂದಿತು, ಮುದ್ದಾದ ಕರು ವನ್ನು ಕಾಣದ ಎಳೆಗಂದಿಯೋಪಾದಿಯಲ್ಲಿ ಸಂಕಟವನ್ನನುಭವಿಸುತ್ತ ಪಾಪಿಯಾದ ನಾನು ಬದುಕಿರುವುದಕ್ಕಿಂತ ಸಾಯುವುದೇ ಒಳ್ಳೆಯದು, ಅಥವಾ ನಾನೂ ನಿನ್ನೆ ಡನೆ ವನಕ್ಕೆ ಬರುವೆನು ಕರೆದುಕೊಂಡು ಹೋಗೆಂದು ಮೊರೆಯಿಟ್ಟು ಹಂಬಲಿಸಿ ಕಣ್ಣೀರುಗಳನ್ನು ಸುರಿಸುತ್ತ ಅನಾಥೆಯಂತೆ ಪ್ರಲಾಪಿಸುತ್ತಿರಲು ;

  • ಆಗ ಲಕ್ಷಣನು ಕೌಸಲೈಯನ್ನು ಕುರಿತು ಹೆಂಗಸಿಗೆ ಅಧೀನನೂ ಮುದ್ದು ಕನೂ ಬುದ್ದಿ ಯಿಲ್ಲ ದವನೂ ಆದ ತಂದೆಯ ಮಾತನ್ನು ಕೇಳಿ ಈ ರಾಮನು ರಾಜ್ಯ ಶ್ರೀಯನ್ನು ಬಿಟ್ಟು ವನವಾಸಕ್ಕೆ ಹೋಗುವುದು ಯಾವ ಧರ್ಮವು ? ರಾಜ್ಯಾಭಿಷೇ ಕಕ್ಕೆ ಯೋಗ್ಯನಾದ ಜೈಷ್ಣ ಕುಮಾರನನ್ನು ವನವಾಸಕ್ಕೆ ಕಳುಹಿಸುವುದಾದರೆ ಈತನಲ್ಲಿ ಯಾವ ದೋಷವನ್ನೂ ಅಪರಾಧವನ್ನೂ ಕಂಡಿದ್ದಾನೆ ? ತೋರಿಸಿಕೊಡಲಿ. ಇಲ್ಲದಿದ್ದರೆ ಅವನ ಮಾತನ್ನು ನಂಬುವುದು ಹೇಗೆ ? ಲೋಕದಲ್ಲಿ ಬುದ್ಧಿ ಶೂನ್ಯರಾದ ವೃದ್ದರೂ ಸ್ತ್ರೀಪರವಶರೂ ಎಷ್ಟು ವಿಧವಾದ ಅನಾಹುತಗಳನ್ನು ಮಾಡಲೊಲ್ಲರು ?