ಪುಟ:ಕಥಾ ಸಂಗ್ರಹ - ಭಾಗ ೨.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಜನೇಯನು ಸೀತೆಯನ್ನು ಕಂಡು ಲಂಕಾಪಟ್ಟಣವನ್ನು ಸುಟ್ಟುದು 91 ನಿಲ್ಲು ! ನಿನ್ನ ಅವಿಚಾರಕ್ಕೆ ಏನು ಹೇಳಬೇಕು? ಹೆಂಗೊಲೆಯನ್ನು ಮಾಡುವವರುಂಟೇ ? ಅಯ್ಯೋ, ಅನ್ಯಾಯವಾಗಿ ಮಹಾಪಾಪಕ್ಕೆ ಒಳಗಾಗುತ್ತಿರುವೆಯಲ್ಲಾ ? ಮರುಳುತ ನವನ್ನು ಬಿಡು ; ಸೌಂದರ್ಯವತಿಯಾದ ನನ್ನ ಮುಂದೆ ಈ ಸೀತೆಯೇ ! ಎಂದು ಹೇಳಿ ಸಮಾಧಾನಪಡಿಸಿ ಅವನನ್ನು ಎಳೆದು ಕರೆದುಕೊಂಡು ಮನೆಗೆ ಹೋದಳು. ಅನಂತರದಲ್ಲಿ ರಾವಣನು ದುಮಾನದಿಂದ ಕೂಡಿ ಹೊರಟುಹೋಗಲು; ಸೀತಾ ದೇವಿಯು ತನ್ನ ಪತಿಯನ್ನು ನೆನಸಿಕೊಂಡು ದುಃಖಿಸುತ್ತ -ಎಲೈ ಭೂದೇವಿಯೇ, ಬಾಯ್ದೆರೆದು ನನ್ನನ್ನು ಒಳಗೊಳ್ಳಲೊಲ್ಲೆಯಾ ? ಈ ಖಳನ ಬಾಧೆಯನ್ನು ತಾಳಿಕೊಂ ಡು ಹೇಗೆ ಜೀವಿಸಲಿ ? ಎಂದು ಬಾಯಿ ಬಿಟ್ಟು ರೋದಿಸುತ್ತ ರಾಮನನ್ನು ಸಂಬೋ ಧಿಸಿ-ಎಲೈ ಪ್ರಾಣನಾಥನೇ, ಜಗತ್ಪತಿಯೇ, ದೀನದಯಾಳುವೇ, ನಿನ್ನನ್ನು ನಂಬಿದ ನನ್ನನ್ನು ಬಿಟ್ಟು ಎಲ್ಲಿರುವೆ ? ಈ ನನ್ನ ಮಹಾವ್ಯಥೆಯನ್ನು ಯಾರೊಡನೆ ಹೇಳಲಿ ? ಎಲ್ಲಿಗೆ ಹೋಗಲಿ ? ಪೂರ್ವದಲ್ಲಿ ಯಾರ ಪತ್ನಿ ಯರನ್ನು ನೋಯಿಸಿದ್ದೆನೋ, ಯಾವ ದೇವರ ಭಕ್ತಿಯಲ್ಲಿ ಕುಂದು ಒಡೆದಿದ್ದೆನೋ, ಯಾವ ಗುರು ಜನರನ್ನು ನೋಯಿಸಿ ದೈನೋ, ಯಾರ ಪ್ರತಿಗಳನ್ನು ಅಗಲಿಸಿದ್ದೆನೋ, ಆ ದುಷ್ಕರ್ಮಫಲವು ಈಗ ನನಗೆ ಅನುಭವಕ್ಕೆ ಬಂದಿತು. ಹಾ! ಮರಣವು ಬಾರದಲ್ಲಾ! ರಾಮನು ಏನಾಗಿರುವನೋ ! ಆ ನರನಾಥನ ಸುದ್ದಿಯನ್ನು ತಿಳಿಯಪಡಿಸುವವರಿವಲ್ಲಾ! ಹಾ! ರಾಮನೇ! ಎಂದು ಹಮ್ಮೆಸಿ ಬಿದ್ದಳು. ಆ ಮೇಲೆ ಸೀತೆಯು ಮರ್ಲೆ ತಿಳಿದೆದ್ದು ಮೆಲ್ಲನೆ ಬಂದು, ಪ್ರಾಣಗಳನ್ನಾದ ರೂ ತೊರೆದು ಕೊಳ್ಳಬೇಕೆಂದು ಕೈಗೆ ಕತ್ತಿಯನ್ನು ತೆಗೆದು ಕೊಳ್ಳಲು ; ಆಗ ತ್ರಿಜಟೆಯು ಧಿಗ್ಗನೆದ್ದು ಬಂದು ಏನಯ್ಯಾ ಸೀತೆಯೇ, ಇದೇನು ! ಇಂಥ ಹುಚ್ಚು ಕೆಲಸವನ್ನು ಮಾಡುತ್ತಿರುವಿಯಲ್ಲಾ ! ಎಂದು ಹೇಳಿ ಅವಳ ಹಸ್ತದಲ್ಲಿದ್ದ ಖಡ್ಗವನ್ನು ಕಿತ್ತು ಕೊಂ ಡ:- ಎಲೈ ಜಾನಕಿಯೇ, ನೀನು ಇನ್ನು ಮೇಲೆ ಸ್ವಲ್ಪವಾದರೂ ಯೋಚಿಸಬೇಡ. ಶ್ರೀರಾಮನು ನಿನ್ನ ಬಳಿಗೆ ಶೀಘ್ರದಲ್ಲಿಯೇ ಬರುವನು ಕೇಳು, ನಾನು ಸ್ವಪ್ಪ ದಲ್ಲಿ ಶ್ರೀರಾಮನು ಲಕ್ಷ್ಮಣಸಮೇತನಾಗಿ ಇಲ್ಲಿಗೆ ಬಂದು ರಾವಣ ಕುಂಭಕರ್ಣಾದ್ಯರನ್ನು ಕೊ೦ದು ನಿನ್ನನ್ನು ಕರೆದು ಕೊಂಡು ಅಯೋಧ್ಯೆಗೆ ಹೊಗಿ ಪಟ್ಟಾಭಿಷಿಕ್ತನಾದುದನ್ನು ಕಂಡೆನು. ಅದು ಕಾರಣ ನೀನು ಯೋಚನೆಯನ್ನು ಬಿಟ್ಟು ಸಂತೋಷ ಚಿತ್ತಳಾಗಿರು ಎಂದು ಹೇಳಲು ; ಸೀತೆಯು ರಾಮನನ್ನು ನೆನೆಸಿಕೊಂಡು ಹಲುಬುತ್ತ ಇರಲು ; ಆಗ ಆಂಜನೇಯನು--ಎಲೈ ರಾಜೀವಲೋಚನೆಯಾದ ದೇವಿಯೇ, ನಿನ್ನ ಪತಿಯ ಅಕ್ಷ ಣನೂ ಕ್ಷೇಮದಲ್ಲಿದ್ದಾರೆ ಎಂದು ಹೇಳಲು ; ಆ ಮಾತನ್ನು ಕೇಳಿ ಸೀತಾದೇವಿಯು ಮೊಗವೆತ್ತಿ ನೋಡಿ ಇದು ಮಾಯಾವಿಗಳಾದ ರಾಕ್ಷಸರ ನುಡಿಯೇ ಸರಿ ಎಂದು ತಲೆಯನ್ನು ಬೊಗ್ಗಿಸಿಕೊಂಡಳು. ಆಗ ಆಂಜನೇಯನು ಪುನಃ-ಎಲೈ ಸೀತೆಯೇ, ಖಳನಾದ ರಾವಣನು ನಿನ್ನನ್ನು ಕಳವಿನಿಂದ ತೆಗೆದು ಕೊಂಡು ಬಂದ ಬಳಿಕ ರವಿಕುಲತಿಲಕನು ಜಟಾಯು ವನ್ನು ಕಂಡು ಅವನಿಂದ ನಿನ್ನ ವೃತ್ತಾಂತವನ್ನು ತಿಳಿದು ಆ ಮೇಲೆ ಸತ್ತು ಹೋದ