ವಿಷಯಕ್ಕೆ ಹೋಗು

ಪುಟ:ಶ್ರೀಮತೀ ಪರಿಣಯ ನಾಟಕಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ಪರಿಣಯಂ ಪಕ್ವತಂ-ಏನು! ತುಚ್ಯನಾದ ಮನ್ಮಥನು ಮಹಾತ್ಮನಾದ ನಾರದನಿಗೆ ಇದಿರುಮಾತಾಡಿದನೆ? ಆಮೇಲೆ. ೧-ನೆಯವಳು-ಅದರಿಂದ ನಾರದನಿಗೆ ಮಿತಿಮೀರಿದ ಕೋಪವುಂಟಾಗಿ ಆ ಕ್ಷಣವೇ ಆ ಸಭೆಯನ್ನು ಬಿಟ್ಟು ಹೊರಟುಹೋದನು.ಈ ಗದ್ದಲ ದಲ್ಲಿ ಉತ್ಸವವು ನಿಂತುಹೋಯಿತು. ನಾವೂ ಮನೆಗೆ ಹೊರಟು ಬಂದೆವು. ಪಕ್ವತಂ-ಹಾಗಿದ್ದರೆ ಈಗ ನಾರದನು ಎಲ್ಲಿಗೆ ಹೋಗಿರಬಹುದು ? ೧-ನೆಯವಳು ಅದನ್ನು ನಾವೇನುಬಲ್ಲೆವು ? ೨-ನೆಯವಳು-ಒಂದುವೇಳೆ ಅಂಬರೀಷರಾಜನ ಪುರಕ್ಕೆ ಹೋಗಿದ್ದರೂ ಇರ ಬಹುದು. ಪಕ್ವತಂ-ಅದು ಹೇಗೆ ? ೨-ನೆಯವಳು-ನಾರದಮಹರ್ಷಿಯು ಆ ಸಭೆಯನ್ನು ಬಿಟ್ಟು ಹೊರಟುಬ ರುವಾಗ, ಅಂಬರೀಷಮಹಾರಾಜನ ಮಹಿಮೆಯನ್ನು ಬಹಳವಾಗಿ ಕೊಂಡಾಡುತ್ತಿದ್ದನು. ೧ನೆಯವಳು-ಹ ಇದು! ಹಾಗೆಯೇ ಇರಬೇಕು, ಅದರಲ್ಲಿ ಸಂದೇಹವಿಲ್ಲ. ಪಕ್ವತಂ-ದೇವಾಂಗನೆಯರೆ ! ಒಳ್ಳೇದು ! ನೀವು ಹೋಗಿರಿ ! ನನ್ನ ಪರಮ ಮಿತ್ರನಾದ ಆ ನಾರದನನ್ನು ಕಂಡು, ನಡೆದ ಸಂಗತಿಯನ್ನು ಅವನ ಬಾಯಿಂದ ವಿವರವಾಗಿ ಕೇಳಿದಹೊರತು, ನನ್ನ ಮನಸ್ಸು ನಿಲ್ಲದು! ಇನ್ನು ನಾನು ಹೊರಡುವೆನು.(ಹೋಗುವನು.) (ದೇವಾಂಗನೆಯರಿಬ್ಬರೂ ಸಂತೋಷದಿಂದ ಒಬ್ಬರಿಗೊಬ್ಬರು ಕೈಹಿಡಿದು.) ೧-ನೆಯವಳು-ಸಖಿ ! ಮೊದಲು ಈ ಪರೈತಮುಸಿಯನ್ನು ಕಂಡಾಗ, ನನ್ನ ಮೈನಡುಗಿಹೋಯಿತು! ನಾರದನಮೇಲಿನ ಪಕ್ಷಪಾತದಿಂದ ಈ ತನು'ನಮಗೆ ಯಾವ ಶಾಪವನ್ನು ಕೊಡುವನೋ ಎಂದು ನಾನು ಬಹಳವಾಗಿ ಹೆದರುತಿದ್ದೆನು. ಹೇಗೋ ದೈವಾಧೀನದಿಂದ ಆ ಗಂ ಡವು ತಪ್ಪಿತು.