ವಿಷಯಕ್ಕೆ ಹೋಗು

ಪುಟ:ಶ್ರೀಮತೀ ಪರಿಣಯ ನಾಟಕಂ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮಶೀಪರಿಣಯಂ ವಿದೂ-ಭರತಾಚಾರಾ ! ತಿಳಿದು ತಿಳಿದೂ ನನ್ನನ್ನು ಹೀಗೆ ಪ್ರಶ್ನೆ ಮಾಡಿ ಹಂಗಿಸುವೆಯಲ್ಲಾ ಈಗಲೇ ನಿನ್ನ ತಿಷ್ಯನು ಬಂದು, ದೇವದಂ ಪತಿಗಳೆಲ್ಲರೂ ಅಲ್ಲಿಗೆ ಬಂದು ಸೇರುವುದಾಗಿ ಹೇಳಿರುವನು. ನೀ ನೂ ನಿನಗೆ ಮೊದಲೇ ನಿನ್ನ ಪತ್ನಿ ಯನ್ನು ಅಲ್ಲಿಗೆ ಕರೆದುಕೊಂಡು ಹೋಗುವಂತೆ ಹೇಳಿ ಕಳುಹಿಸಿರುವೆ ! ಹೀಗೆ ಸೀವೆಲ್ಲರೂ ಅಲ್ಲಿ ನಿಮ್ಮ ನಿಮ್ಮ ಪತ್ನಿ ಯರೊಡಗೂಡಿ, ಮಹೋತ್ಸವಾನಂದ ನನ್ನನುಭವಿಸುವಾಗ, ನಿಮ್ಮ ನಡುವೆ ನಾನೊಬ್ಬನುಮಾತ್ರ, ಅನಾಥ ಬ್ರಹ್ಮಚಾರಿಯಾಗಿ ನಿಂತು, ನಿಮ್ಮ ನಿಮ್ಮ ಸಂಭ್ರಮ ಗಳನ್ನು ನೋಡುತ್ತ, ಪರದೇತಿಯಂತೆ ಕಣ್ಣು ಕಣ್ಣು ಬಿಡುತ್ತಿ ರಬೇಕಲ್ಲವೆ? ಈಗಲೂ ನೀನು ಎಲ್ಲಿಯಾದರೂ ಒಂದು ಹೆಣ್ಣನ್ನು ತಂದು ನನಗೆ ಮದುವೆಮಾಡಿದಪಕ್ಷದಲ್ಲಿ, ನಾನೂ ಸಂತೋ ಷದಿಂದ ಅಲ್ಲಿಗೆ ಬಂದು ನಿಮ್ಮೊಡನೆ ಕುಣಿದಾಡುವೆನು. ಸೂತ್ರ-(ನಗುತ್ತ ಓ ವೃದಬ್ರಾಹ್ಮಣಾ ! ಈ ವಯಸ್ಸಿನಲ್ಲಿಯೂ ನಿನಗೆ ಹೆಣ್ಣಿನಾಸೆಯೆ ? ನಿಮ್ಮಂತಹ ವೈದ್ಯರು ಈ ವಯಸ್ಸಿನಲ್ಲಿ ಮ ದುವೆಮಾಡಿಕೊಂಡು, ಯಾವ ಸುಖವನ್ನು ಪಡೆಯಬಲ್ಲರು ? ವೈದ್ಯವಿವಾಹವಿಷಯವಾದ ಚಾಟಕ್ಕಿಯನ್ನು ಕೇಳಿಲ್ಲವೆ ? ಕಂ || ಕರೆದೊಳ್ ಪಿಡಿದೊಲವಿಂದೆ ಪುರ ಸ್ಮರಿಸುತೆ ಸುಸ್ಸೇಹದಿಂದೆ ಪೆರ್ಚಿಸಿದೊಡಮೇಂ | ಕರದೀಪಿಕೆಯಂತಿರೆ – ದರ ನಾರಿ ಪರಪ್ರಯೋಜನಾರ್ಧಮೆ ! ಸಲ್ಲುಂ || ಆದುದರಿಂದ ಆಬಾಲ್ಯಬ್ರಹ್ಮಚಾರಿಯಾಗಿದ್ದ ನಿನಗೆ, ಈಗ ಮದುವೆಯ ಚಿಂತೆಯೆ? ಬಾ! ಹೋಗುವೆವು. (ಎಂದು ಕೈಹಿಡಿದು ಕರೆದುಕೊಂಡು ಹೋಗುವನು.) ಇದು ಪ್ರಸ್ತಾವನೆ.