ಪ್ರಥಮಾಂಕಂ. ೧೧ ಸುವುದು, ಕಾಮುಕರ ಕೆಲಸವೇಹೊರತು, ನಿನ್ನಂತವನಿಗೆ ಯೋಗ್ಯವಲ್ಲ. ಇಂದ್ರ- ವಿನಯದಿಂದ) ಮುನೀಂದ್ರಾ ! ಇದು ನನ್ನ ಮನಸ್ಸಂತೋಷ ಕ್ಲಾಗಿ, ನಾನುನಡೆಸಿದ ಉತ್ಸಾಹಕಾರವೇಹೊರತು, ನಿಮ್ಮಂತಹ ಮಹಾತ್ಮರಲ್ಲಿ ತಿರಸ್ಕಾರಬುದ್ಧಿಯಿಂದ ನಾನು ಇವನನ್ನು ಗೌರ ವಿಸಿದವನಲ್ಲ : ಈಗ ನಾನು ನಡೆಸಿದ ಶಾರದೋತ್ಸವವು ಕೇವಲ ಭೋಗಪ್ರಧಾನವಾದುದರಿಂದ, ಈ ಕಾಮದೇವನು ಇದಕ್ಕೆ ತಕ್ಕ ಸಾಧನಸಾಮಗ್ರಿಗಳನ್ನೊದಗಿಸಿ, ಕಾಲೋಚಿತವಾಗಿ ಮಾ ಡಿದ ಸಹಾಯಕ್ಕಾಗಿ ನಾನು ಸಂತೋಷಪಟ್ಟು, ಆ ನನ್ನ ಸಂ ತೋಷಕ್ಕೆ ಸೂಚಕವಾಗಿಯೂ, ಈ ಮನ್ಮಥನ ಶ್ರಮಕ್ಕೆ ಪ್ರತಿ ಫಲವಾಗಿಯೂ ನಾನು ಇವನನ್ನು ಸನ್ಮಾನಿಸಿದೆನು. ಈ ಸ್ವಲ್ಪ ವಿಚಾರಕ್ಕಾಗಿ ತಾವು ನನ್ನಲ್ಲಿ ಕೋಪಿಸದೆ ಮತ್ನಿ ಸಬೇಕು. ನಾಗದಂ-ಮಹೇಂಾ : ಪಾತ್ರಾಪಾಗಳನ್ನರಿತು, ಅವರವರ ಸ್ಥಿತಿಗೆ ತಕ್ಕಂತೆ ಗೌರವಿಸಬೇಕೇಹೊರತು, ಆಪಾತ್ರದಲ್ಲಿ ಅಧಿಕಗೌ ರವವನ್ನು ತೋರಿಸುವುದು ಅವರ ಕಾರಣವೆಂಬುದನ್ನು ನೀನು ಯೋಚಿಸಬೇಡವೆ ? ಈ ಕನಸಿಗೆ 'ಸ್ವಲ್ಪ ಮಾತ್ರ ಅವಕಾಶವ ನ್ನು ತೋರಿಸಿದರೆ, ಇವನು ಅವರ ತಲೆಯನ್ನು ಮೆಟ್ಟಿ ನಿಲ್ಲು ವನು. ಇದಕ್ಕಾಗಿಯೇ ತಪಸ್ಸಿದ್ದಗಾದ ಯೋಗಿಗಳು ಇವನನ್ನು ಮನಸ್ಸಿಸಿಂದಲೂ ಸ್ಮರಿಸಲಾರರು! ನಿನ್ನ ಸ್ಥಿತಿಯೇನು ! ಅವನ ಸ್ಥಿತಿಯೇನು? ಯಜ್ಞಾರಾಧ್ಯನೆನಿಸಿಕೊಂಡ ಸೀನು, ನಿನ್ನ ಗೌರ ವವನ್ನು ತಿಳಿಯದೆ, ಕಾಡುಕಪಿಯನ್ನು ತಂದು ಭದ್ರಾಸನದಲ್ಲಿ ಕುಳ್ಳಿರಿಸಿದಂತೆ, ಇವನನ್ನು ನಿನ್ನ ಅರ್ಧಾಸನದಲ್ಲಿ ಕುಳ್ಳಿರಿಸುವು ದೆಂದರೇನು ? ಕರಡಿಯ ಕಂಠಕ್ಕೆ ಕಾಂಚನಮಾಲಿಕೆಯನ್ನಿ ಟ್ಯಂತೆ, ಸಾಕ್ಷಾತ್ಪರಮಪುರುಷನ ಪಾದಾರವಿಂದಗಳಲ್ಲಿ ಅರ್ಪಿ ಸುವುದಕ್ಕೆ ಯೋಗ್ಯವಾದ ಮಂದಾರಮಾಲಿಕೆಯನ್ನು ತಂದು? ವನ ಕಂಠಕ್ಕೇರಿಸುವುದೆಂದರೇನು?ಇದು ವಿವೇಕಿಗಳ ಕಾರವಲ್ಲ!
ಪುಟ:ಶ್ರೀಮತೀ ಪರಿಣಯ ನಾಟಕಂ.djvu/೨೨
ಗೋಚರ