ದ್ವಿತೀಯಾಂಕ೦. ೨೩ ೨-ನೆಯವಳು-ಸಖಿ!ಹೌದು!ಆಗ ಇಂದ್ರಸಭೆಯಲ್ಲಿ ನಾರದನೂ, ಈಗ ಪರ ತನೂ, ಆ ಮನ್ಮಥನ ಮೇಲಿನ ಕೋಪದಿಂದ ನಮ್ಮನ್ನೇನು ಮಾಡುವನೋ ಎಂದು ನನಗೂ ಬಹಳ ಭಯವಾಗಿದ್ದಿತು. ದೈ ವಾಧೀನವಾಗಿ ಈ ಎರಡು ಗಂಡಗಳೂ ತಪ್ಪಿದುವು. ಮುಂದೆ ಇ ನೈನನದ್ಧವಾಗುವುದೋ ! ಅದರಿಂದ ನಾವು ಬೇರೆ ಯಾರ ಕ ಣ್ಣಿಗೂ ಬೀಳದಹಾಗೆ, ಶೀಘ್ರದಲ್ಲಿ ಮನೆಗೆ ಹೋಗಿ ಸೇರುವುದೇ ಮೇಲು! ಬಾ ! ಹೋಗುವೆವು, (ಎಂದು ಹೋಗುವರು.) w+ಇದು ವಿಷ್ಕಂಭವು.ru ಆಸ್ಥಾನ-ಅಂಬರೀಷರಾಜನ ಸಭಾಮಂಟಪ. (ಮಂತ್ರಿಸೇನಾಧಿಪತಿಗಳೂ, ವಸಿಷಾದಿಮಹರ್ಷಿಗಳೂ ನೆರೆದಿರುವರು.) ತೆರೆಯಲ್ಲಿ-ರಾಜಾಧಿರಾಜ ಅಂಬರೀಷಮಹಾರಾಜ ಪರಾಕ್ ಎಚ್ಚರಿಕೆ, (ದಂಡ ಧಾರಿಯಾದ ಕಂಚುಕಿಯ ದಾರಿಯನ್ನು ತೋರಿಸುತ್ತಬರುವನು.) ಛತ್ರಚಾಮರಾಗಿಬಿರುದುಗಳೊಡನೆ ರಾಜನು ಸಭಾಸ್ಥಾನವನ್ನು ಪ್ರವೇಶಿಸುವನು. ಸಭೆಯಲ್ಲಿದ್ದವರೆಲ್ಲರೂ ಎದ್ದು ನಿಲ್ಲುವರು. ರಾಜನು ಎಲ್ಲರಿಗೂ ಅಭಿನಂದಿಸಿ, ಸಿಂಹಾಸನದ ಬಳಿಯಲ್ಲಿ ನಿಲ್ಲು ವನು. ) ರಾಜ೦-ಪೂಜ್ಯರೆ ! ಕುಲಕ್ರಮಾಗತವಾದ ಈ ಧಾಸನವನ್ನೇರಿ ರಾಜ ಕಾವ್ಯವನ್ನಾರಂಭಿಸುವುದಕ್ಕೆ ಮೊದಲು, ದೇವದೇವನಾದ ಶ್ರೀ ಹರಿಯನ್ನು ಧ್ಯಾನಿಸುವೆವು. ವಸಿಷ್ಠರು-ಆಹಾ ! ಅದಕ್ಕೆ ತಡೆ ಯೇನು ? ಯಾವಕಾಠ್ಯಗಳಲ್ಲಿಯೂ ಮೊದ ಲು ನಡೆಸಬೇಕಾದ ಪೂರೈರಂಗವೇ ಇದು ! (ಎಲ್ಲರೂ ಕೈ ಮುಗಿದು ಪ್ರಾರ್ಥಿಸುವರು. ರಾಗ. ದೇವದೇವ ಮುರಾರೀ ( ಜಯ | ಪಾವನಾತ್ಮಕ ಶ್ರೀ | ಶ್ರೀವನಿತಾವರ | ಸಕಲಾಧಾರ || ದೇವ | ತಾಳ,
ಪುಟ:ಶ್ರೀಮತೀ ಪರಿಣಯ ನಾಟಕಂ.djvu/೩೪
ಗೋಚರ