ವಿಷಯಕ್ಕೆ ಹೋಗು

ಪುಟ:ಶ್ರೀಮತೀ ಪರಿಣಯ ನಾಟಕಂ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಶ್ರೀಮತೀಪರಿಣಯಂ ಸಭೆಯಲ್ಲಿ ಈ ಮನ್ಮಥನಿಗೆ ಆಗ್ರಪೂಜೆಯೆ ? ಕೇವಲಕಾಮಮ ದುಂದ ಉನ್ಮತ್ತರಾದ ಪ್ರಾಕೃತಜನರಂತೆ, ನೀನು ನಿನ್ನ ಗೌರ ವವನ್ನೂ , ಪದವಿಯನ್ನೂ ಯೋಚಿಸದೆ, ಕಾಮುಕರನ್ನು ವಂ ಚಿಸತಕ್ಕ ಈ ಮನ್ಮಥನ ಆಟಕ್ಕೆ ಮರುಳಾಗಿ, ಅವನನ್ನು ಕರೆತಂ ದು ನಿನ್ನ ಅರ್ಧಾಸನದಲ್ಲಿ ಕುಳ್ಳಿರಿಸಿಕೊಳ್ಳುವೆಯಾ ? ಮಹೇಂ ಪ್ರಾ! ನೀನು ಈಗ ಕುಳಿತಿರತಕ್ಕ ಸ್ಯಾನವೆಂತದೆಂಬುದನ್ನು ಬ ಲೈಯಾ ? ಭೂಲೋಕದಲ್ಲಿ ಪರಮಧಾತ್ಮರೆನಿಸಿಕೊಂಡ ಸಗರಾದಿಚಕ್ರವರ್ತಿಗಳು, ಎಷ್ಟೋ ಕಷ್ಟಪಟ್ಟ ಈ ಪದವಿ ಯನ್ನು ಪಡೆಯಲಾರದೆ ವಿಫಲಪ್ರಯತ್ನರಾಗಿರುವರು. ಒಂದ ಲ್ಲ ! ಎರಡಲ್ಲ !! ಭೂರಿದಕ್ಷಿಣೆಗಳುಳ್ಳ ನೂರಶ್ವಮೇಧಯಾಗರ ಳನ್ನು ಸಂಪೂರ್ಣವಾಗಿ ಮುಗಿಸಿದವರಿಗಲ್ಲದೆ ಇದು ಲಭಿಸಲಾ ರದು ! ನಿನ್ನ ಅನೇಕ ಜನ್ಮಗಳ ಸುಕ್ಕ ತವಿಶೇಷದಿಂದ ನಿನಗೆ ಈ ಪದವಿಯ ಲಭಿಸಿರುವುದೆಂದು ತಿಳಿ : ಹೀಗಿರುವಾಗಲೂ ನೀನು ನಿನ್ನ ಯೋಗ್ಯತೆಯನ್ನು ತಿಳಿಯದೆ, ಈ ಮನ್ಮಥನಾಟಕ್ಕೆ ಮರುಳಾಗಿ, ಇವನಿಗೆ ಸಲ್ಲದ ಗೌರವವನ್ನು ತಂದಿಡುವೆಯಲ್ಲಾ! ಅದೂ ಹೋಗಲಿ ! ಇವನನ್ನು ನೀನು ಮಿತನೆಂದು ಕರೆದು ಆ ಲಿಂಗಿಸಿದೆಯಲ್ಲವೆ ? ಹಿಂದೆ ಈ ಮನ್ಮಥನ ದುಷ್ಕರಣೆಯಿಂ ದಲೇ ಸಿನಗೂ, ನಿನ್ನಂತೆ ಇಂದ್ರ ಪದವಿಯನ್ನೇರಿದ ನಹುಷನಿ ಗೂ ಸಂಭವಿಸಿದ ದುರವಸ್ಥೆಯನ್ನು ಆಗಲೇ ಮರೆತುಬಿಟ್ಟೆಯಾ ? ವೃ!! ನೆನೆ ! ನೀಲ ಗೌತಮಧರ ಪತ್ನಿಯೊಳಹಲ್ಯಾದೇವಿಯೊಳ್ ಮೋಹದಿಂ | ಮುನಿಶಾಪಕ್ಕೆಡೆಯಾದುದಂ ನಹುಷನುಂ ನಿನ್ನಂತೆ ಪೌಲೋಮಿಯಂ || ಮನದೊಳ್ ವಹಿಸಿ ಸರ್ಪರೂಪದಿನಧ.ಪಾತಕ್ಕೆ ಪಕ್ಕಾದುದಂ ನೆನೆ ! ಸಂಕ್ರಂದನ! ನೀನನರವಿನಿತಕ್ಕಂ ಮೂಲನೀ ಮನ್ಮಥಂ || ಹೀಗೆ ನಿನಗೆ ಆಂತಶತ್ರುವಾಗಿ, ಮಹಾನರವನ್ನು ತಂದಿಟ್ಟ ಈ ಮನ್ಮಥನನ್ನು ಪರಮಾಪ್ತನೆಂದು ತಿಳಿದಿರುವೆಯಾ ? ದೇ ವೇಂದ್ರಾ! ಹೀಗೆ ಈ ಕಾಮನನ್ನೆ ಪರದೈವವೆಂದು ಭಾವಿ