ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪೯ ಅಧ್ಯಾ. ೫] | ಏಕಾದಶಸ್ಕಂಧವು. ಅವರಿಗೆ ಆ ಕೃಷ್ಣನೊಡನೆ ಸಾಯುಜ್ಯವು ಲಭಿಸಿರುವಾಗ, ನಿಮ್ಮಂತೆ ಮನಃಪೂರಕವಾದ ಅನುರಾಗದಿಂದ ಅವನನ್ನು ಸ್ಮರಿಸತಕ್ಕವರಿಗೆ ಉತ್ತ ಮಗತಿಯು ಲಭಿಸುವುದರಲ್ಲಿ ಸಂದೇಹವೇನಿದೆ? ಓ ರಾಜಾ : ನಿನ್ನ ಮಗ ನಾದ ಆ ಶ್ರೀಕೃಷ್ಣನೇ ಸತ್ಯೇಶ್ವರನು! ಆತನೇ ಸರಾತ್ಮಕನು. ಈಗ ಮಾಯಾಮನುಷ್ಯನಾಗಿ ತನ್ನ ಐಶ್ವಶ್ಯವನ್ನು ಮರೆಸಿಟ್ಟುಕೊಂಡಿರುವನು. ಆತನು ಪ್ರಕೃತಿಗಿಂತಲೂ ವಿಲಕ್ಷಣನಾದುದರಿಂದ ಪರನೆಂದೂ, ಸ್ವರೂಪ ಸ್ವಭಾವಗಳಲ್ಲಿ ವಿಕಾರವಿಲ್ಲದವನಾದುದರಿಂದ ಅವ್ಯಯನೆಂದೂ, ಕರೆಯಲ್ಪ ಡುವನು. ಅಂತಹ ಕೃಷ್ಣನಲ್ಲಿ ನೀನು ಇನ್ನು ಮೇಲೆ ನಿನ್ನ ಮಗನೆಂಬ ಬು ಒಯನ್ನು ಬಿಟ್ಟು ಬಿಡಬೇಕು, ಹಾಗಿದ್ದರೆ ಸತ್ಯೇಶ್ವರನಾದ ಆ ಪರ ಮಪುರುಷನು ಹೀಗೆ ಮಾಯಾಮನುಷ್ಯನಾಗಿ ಹುಟ್ಟಿರುವುದೇಕೆ?” ಎಂದು ಕೇಳುವೆಯಾ ? ಕೆಲವು ದೈತ್ಯರು ಕ್ಷತ್ರಿಯರಾಗಿ ಹುಟ್ಟಿ, ಲೋಕಕಂಟಕ ರಾಗಿ ವರ್ತಿಸುತ್ತಿದ್ದುದರಿಂದ, ಭೂಭಾರವು ಹೆಚ್ಚಿ ಹೋಯಿತು. ಅವರನ್ನು ಕೊಂದು ಸಾಧುಗಳನ್ನು ರಕ್ಷಿಸುವುದಕ್ಕಾಗಿಯೇ ಭಗವಂತನು ಈ ಮಾ ಯಾಮನುಷ್ಯರೂಪದಿಂದ ಕೃಷ್ಣನಾಗಿ ನನ್ನ ಗರ್ಭದಲ್ಲಿ ಅವತರಿಸಿರುವನು. ನಾನಾಬಗೆಯ ಅದ್ಭುತಕಾರಗಳಿಂದ ಲೋಕದಲ್ಲಿ ತನ್ನ ಕೀರ್ತಿಯನ್ನು ವಿಸ್ತರಿಸುತ್ತಿರುವನು. ಅವನಲ್ಲಿ ನೀನು ಪುತ್ರನೆಂಬ ಬುದ್ಧಿಯನ್ನು ಬಿಟ್ಟು ಬಿಡಬೇಕು.” ಎಂದನು, ಓ ಪರೀಕ್ಷಿದ್ರಾಜಾ ! ನಾರದನು ಹೇಳಿದ ಈ ತತೋಪದೇಶವನ್ನು ಕೇಳಿದುದು ಮೊದಲು,ವಸುದೇವದೇವಕಿಯರಿಬ್ಬರೂ, ಕೃಷ್ಣನಲ್ಲಿ ತಮ್ಮ ಮಗನೆಂಬ ಮೋಹವನ್ನು ಬಿಟ್ಟು, ಆತನೇ ಪರಮಪುರು ಷನೆಂಬ ಭಾವದಿಂದ ಗೌರವಿಸುತಿದ್ದರು. ಓ ರಾಜಾ ! ಪುಣ್ಯಕರವಾದ ಈ ಇತಿಹಾಸವನ್ನು ಯಾವನು ಶ್ರದ್ಧೆಯಿಂದ ಮನಸ್ಸಿನಲ್ಲಿ ಧಾರಣಮಾಡುವ ನೋ, ಅವನು ಆ ಜನ್ಮದಲ್ಲಿಯೇ ಮುಕ್ತಿ ವಿರೋಧಿಗಳಾದ ಪುಣ್ಯಪಾಪ ಕರಗಳನ್ನು ಕಳೆದು ಆ ಭಗವಂತನ ಸಾಯುಜ್ಯವನ್ನು ಹೊಂದುವನು.ಇದು ಐದನೆಯ ಅಧ್ಯಾಯವು.