ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪೪ ಶ್ರೀಮದ್ಭಾಗವತವು [ಅಧ್ಯಾ, ೫, ಶುದ್ದಿಯೇ ಹೊರತು ದೋಷವಿಲ್ಲ! ಋತುಕಾಲದಲ್ಲಿ ಪತ್ರೀಸಂಭೋಗವೂ ಕೂಡ ಸಂತಾನಾರವಾಗಿಯೇ ಹೊರತು ರತಿಸುಖಕ್ಕಲ್ಲ. ಈ ಸಂತಾನ ವನ್ನು ಪಡೆಯುವುದರಿಂದ, ಪಿತೃಋಣದಿಂದ ಮುಕ್ತನಾಗುವನು. ಯಾರು ಈ ಥರ ಸೂಕ್ಷವನ್ನು ತಿಳಿಯದೆ, ತಾವೇ ದೊಡ್ಡ ಕರನಿಷ್ಠರೆಂಬ ಹೆಮ್ಮೆ ಯಿಂದ ನಿರ್ಭಯರಾಗಿ ಪಶುಹಿಂಸೆಯನ್ನು ಮಾಡುವರೋ, ಅಂತವರು ಸತ್ತ ಮೇಲೆ, ಪರಲೋಕದಲ್ಲಿ ಆ ಪಶುಗಳಿಂದಲೇ ತಾವು ಭಕಿಸಲ್ಪಡುವ ರು. ಇತರ ಪ್ರಾಣಿಗಳಿಗೆ ದೋಹವನ್ನೆಣಿಸುವುದರಿಂದ, ಅವುಗಳಲ್ಲಿ ಅಂತ ರಾತ್ಮನಾದ ಶ್ರೀಹರಿಯಲ್ಲಿಯೇ ದ್ವೇಷವನ್ನು ತೋರಿಸಿದಂತಾಗುವುದು. ಹೀಗೆ ಮಾಡುವವರಿಗೂ, ಶವಪ್ರಾಯವಾದ ತಮ್ಮ ದೇಹದಲ್ಲಿಯೂ ಆ ದೇಹಾನುಬಂಧಿಗಳಾದ ಪತ್ರಕಳತಾದಿಗಳಲ್ಲಿಯೂ ವಿಶೇಷ ಮೋಹವನ್ನಿ ಡುವವರಿಗೂ, ನರಕವು ತಪ್ಪಿದುದಲ್ಲ ! ಜ್ಞಾನನಿಷ್ಠೆಯಿಂದ ತಮ್ಮ ಮೌಢ ವನ್ನು ಕಳೆಯದೆ, ಧಾರ್ಥಕಾಮಗಳೆಂಬ ತ್ರಿವರ್ಗಗಳನ್ನೇ ಪ್ರಧಾನ ವಾಗಿಟ್ಟುಕೊಂಡು, ಅದರಿಂದ ಕ್ಷಣಮಾತ್ರವೂ ಉಪಶಾಂತಿಯಿಲ್ಲದೆ ದುಡಿ ಯುವವರನ್ನು ಆತ್ಮಘಾತುಕರೆಂದೇ ಹೇಳಬಹುದು. ಹೀಗೆ ಆತ್ಯ ಫಾತುಕ ರಾದ ಅಜ್ಞಾನಿಗಳಾಗಿದ್ದರೂ, ತಮ್ಮನ್ನೇ ಮಹಾಜ್ಞಾನಿಗಳಂತೆ ಎಣಿಸ ತಕ್ಕವರು, ಕೊನೆಗೆ ಕಾಲವಶದಿಂದ ತಮ್ಮ ಮನೋರಥಗಳೆಲ್ಲವೂ ಕೆಟ್ಟು ಹೋದಾಗ, ಆಶಾಭಂಗವನ್ನು ಹೊಂದಿ, ಬದುಕಿರುವಾಗಲೇ ಅನೇಕಕ್ಷೇಶ ಗಳನ್ನು ಹೊಂದುವರು. ಕೊನೆಗಾಲಕ್ಕೆ ಅವರು ತಾವು ಎಷ್ಟೊಕಷ್ಟ ಪಟ್ಟು ಪೋಷಿಸುತ್ತ ಬಂದ ಗೃಹಧನಾದಿಗಳನ್ನೂ, ಹೆಂಡಿರುಮಕ್ಕಳನ್ನೂ ಬಿಡಲಾರದೆ ಬಿಟ್ಟು ಹೋಗಬೇಕಾಗುವುದು. ಮತ್ತು ಅವರು ಬದುಕಿರುವ ವರೆಗೂ ಶ್ರೀಹರಿಯಲ್ಲಿ ವಿಮುಖರಾಗಿದ್ದುದರಿಂದ ಸತ್ತಮೇಲೆ ನರಕದಲ್ಲಿ ಯೂ ಬಿಟ್ಟು ತೊಳಲುವರು.” ಎಂದನು. ಆಮೇಲೆ ವಿದೇಹರಾಜನು ತಿರು ಗಿ ಆ ಮಹರ್ಷಿಯನ್ನೇ ಕುರಿತು. “ಓ ಮಹಾತ್ಮಾ ! ಭಗವಂತನು ಯಾವ ಯಾವ ನಾಮರೂಪ ವರ್ಣಭೇದಗಳುಳ್ಳವನಾಗಿ ಯಾವಯಾವ ವಿಧಿಗ ಳಿಂದ ಪೂಜಿಸಲ್ಪಡುತ್ತಿದ್ದನೆಂಬುದನ್ನು ತಿಳಿಸಬೇಕು.” ಎಂದು ಕೇಳಲು, ಅದಕ್ಕಾಮಹರ್ಷಿಯು ರಾಜಾ ಕೇಳು ! ಕೃತ, ತ್ರೇತಾ, ದ್ವಾಪರ, ಕ