ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪ ಶ್ರೀಮದ್ಭಾಗವತನ [ಅಧ್ಯಾ, ೨೨. ಸಂಪೂರ್ಣವಾಗಿ ಜ್ಞಾನಲೋಪವಾಗುವುದು. ಇದೇ ಮರಣವೆಂದು ತಿಳಿ ! ಆದರೆ, ಮರಣಕಾಲದಲ್ಲಿ ಅತ್ಯಂತ ಜ್ಞಾನಲೋಪವಾದರೂ ತಿರುಗಿ ದೇಹಾಂ ತರಪ್ರಾಪ್ತಿಯಲ್ಲಿ ಆದೇ ಮನಸ್ಕೂ, ಇಂದ್ರಿಯಗಳೂ ಅನುವರ್ತಿಸಿ ಬರುವಾಗ, ಹಿಂದಿನ ಜನ್ಮದ ಸ್ಮರಣವಿರಬೇಕಲ್ಲವೆ? ಎಂದರೆ, ಪ್ರಾಣಿಗಳಿಗೆ ಹುಟ್ಟಿದಾಗಲೇ ತಮ್ಮ ತಮ್ಮ ದೇಹದಲ್ಲಿ ತಾವೆಂಬ ಆತ್ಮವೆಂಬ ಅಭಿಮಾ ನವು ಹುಟ್ಟುವುದರಿಂದ, ದೇಹವನ್ನು ಆತ್ಮವೆಂದು ಸ್ವೀಕರಿಸುವುದೇ ಜನ್ಮ ವೆನ್ನುವರು ! ಹೀಗೆ ಆತ್ಮಸ್ವರೂಪವನ್ನೆ ತಿಳಿಯಲಾರದ ಪುರುಷನಿಗೆ ಆ ಆತ್ಮಕ್ಕುಂಟಾಗತಕ್ಕೆ ಹಿಂದುಮುಂದಿನ ಜನ್ಮಗಳಾಗಲಿ,ಹಿಂದಿನ ದೇಹವು ಬಿಟ್ಟು ಹೋದುದಾಗಲಿ, ಈಗ ಹೊಸದೇಹವು ಲಭಿಸಿದುದಾಗಲಿ ಹೇಗೆ ತಾನೇ ತಿಳಿಯುವುದು ? ಹೊಸಸ್ಪಷ್ಟವನ್ನು ಕಂಡವನಿಗೆ ಹಿಂದಿನ ಸ್ವಪ್ನಗೆ ಳೆಲ್ಲವೂ ಮರೆತುಹೋಗುವಂತೆಯೂ, ಮನಸ್ಸಿನಲ್ಲಿ ಹೊಸದಾಗಿ ಯಾವುದಾ ದರೂ ಕೋರಿಕೆಯು ಹುಟ್ಟಿದಾಗ, ಹಿಂದಿದ್ದ ಮನೋರಥಗಳು ಗಮನಕ್ಕೆ ಬಾರೆದಂತೆಯೂ, ಹೊಸದಾಗಿ ದೇಹವನ್ನು ಹೊಂಕಿ, ಅದರಲ್ಲಿ ವಿಶೇಷ ಭಿಮಾನವುಳ್ಳವನಿಗೆ, ಹಿಂದಿನ ಸ್ಮರಣೆಯು ತಪ್ಪಿ ಹೋಗುವುದೇನಾಶ್ಚ ರೂವು? ದೇಹಿಯು ಹಿಂದೆ ಎಷ್ಟೋ ಜನ್ಮಗಳನ್ನು ಕಳೆದಿದ್ದರೂ, ಆಯಾಜಮ್ಮವು ಬಂದಾಗ, ತಾನು ಆ ಜನ್ಮದಲ್ಲಿಯೇ ಹೊಸದಾಗಿ ಹುಟ್ಟಿದಂತೆ ಭಾವಿಸು ತಿರುವನು. ಮುಖ್ಯವಾಗಿ ನಿರ್ವಿಕಾರನಾದ ಆತ್ಮನಿಗೆ, ಒಂದೊಂದು ಜನ್ಮದಲ್ಲಿಯೂ, ಶರೀರ, ಇಂದ್ರಿಯಗಳು, ಅಂತಕರಣವೆಂಬಿವು ಮೂರೂ ಅನುವರ್ತಿಸಿ ಬಂದು, ಹೊರಗೆ ದೇವಮನುಷ್ಯಾದ್ಯಾಕಾರಭೇದಗಳನ್ನೂ, ಒಳಗೆ ಭಯ ಲೋಭಾದಿವಿಕಾರಗಳನ್ನೂ ಕಾಣಿಸುತ್ತಿರುವುವು. ದುಷ್ಟು ತರಂತೆ ಇವುಗಳೇ ಆತ್ಮಸಿಗೆ ಅನರಹೇತುಗಳೂ - ಗುವುವು. ಉ ದೈವಾ! ಪಂಚಭೂತಪರಿಣಾಮಗಳೆನಿಸಿಕೊಂಡ ಪ್ರಾಣಿಶರೀರಗಳೆಲ್ಲವೂ, ಕ್ಷಣಕ್ಷಣಕ್ಕೂ ಪೂರೈಸ್ಥಿತಿಯನ್ನು ಬಿಟ್ಟು ವಿಕಾರಹೊಂದುತ್ತಲೇ ಇರು ವುವು. ಕಾಲವೆಂಬುದು ನಮಗೆ ತಿಳಿಯದಹಾಗೆಯೇ ಅತಿಸೂಕ್ಷ್ಮಗತಿಯಿಂ ದೋಡುತ್ತಿರುವುದರಿಂದ, ಆ ಸೂಕ್ಷ ಕಾಲಗಳಲ್ಲಿ ನಡೆಯತಕ್ಕ ವಿಕಾರಗಳು ನಮಗೆ ತಿಳಿಯಲಾರವು. ಅಗ್ನಿಯಲ್ಲಿ ಹಿಂದಿನ ಜ್ವಾಲೆಗಳು ಹೋಗಿ ಬೇರೆ