ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

JOS ಶ್ರೀಮದ್ಭಾಗವತನ [ಅಧ್ಯಾ: ೧೧. ಬೇರೆ ವಿಷಯಗಳಲ್ಲಿ ತನ್ನ ವಾಕ್ಕನ್ನು ವ್ಯಯಮಾಡಬಾರದು. ಉದ್ದವಾ ? ಮೇಲೆ ಹೇಳಿದ ವಿಚಾರಗಳಿಂದ, ವಿವೇಕಿಯಾದವನು ದೇಹಕ್ಕಿಂತಲೂ ಆ ತ್ಯವು ಬೇರೆಂಬುದನ್ನು ತಿಳಿದು, ಅದರಿಂದ ತನ್ನಲ್ಲಿ ದೇವತ್ವ, ಮನುಷ್ಯತ್ಸಾ ದಿ ಭೇದಭಾಂತಿಯನ್ನು ನೀಗಿ, “ಜೋಗುಣರಹಿತವಾಗಿ ಕೇವಲ ಸತ್ಯಮ ಯವಾದ ಮನಸ್ಸನ್ನು ನನ್ನಲ್ಲಿಯೇ ನೆಲೆಗೊಳಿಸಿ, ಆ ಭಕ್ತಿಸಾಧನೆಯಿಂದ ೮7ಕಿಕಕರಗಳಲ್ಲಿ ನಿವೃತ್ತನಾಗಬೇಕು. ಉದ್ಯವಾ ' ಆದರೆ ಹಾಗೆ ಮನ ಸೃನ್ನು ಬ್ರಹ್ಮಾಧ್ಯಾನದಲ್ಲಿಯೇ ನಿಘಿಸಿಡುವುದು ಸಿನಗೆ ಅಸಾಧ್ಯವಾಗಿ ತೋರಿದ ಪಕ್ಷದಲ್ಲಿ ನೀನು ನಡೆಸತಕ್ಕ ವರ್ಣಾಶ್ರಮೋಚಿತಗಳಾದ ಸಮಸ್ಯ ಕರ್ಮಗಳನ್ನಾದರೂ, ನನ್ನಲ್ಲಿಯೇ ಅರ್ಪಿಸತ್ತಿರು. ಮತ್ತು ಆ ಕರೆಗಳಿಗೆ ನೀನೇ ಕರ್ತನೆಂಬ ಭಾವವನ್ನೂ ಇಟ್ಟುಕೊಳ್ಳದೆ, ಅದಕ್ಕೆ ಬೇರೆ ಫಲವನ್ನೂ ಆಪೇಕ್ಷಿಸದೆ ನಡೆಸುವನಾಗು ಮತ್ತು ಆಗಾಗ! ಶ್ರದ್ದೆಯಿಂದ, ನನ್ನ ವಿಷ ಯವಾದ ಕಥೆಗಳನ್ನು ಕಿವಿಯಿಂದ ಕೇಳುತ್ತ, ಬಾಯಿಂದ ಕೀರ್ತಿಸುತ್ತಮ ನಸ್ಸಿನಿಂದ ಸ್ಮರಿಸುತ್ತ, ನಡತೆಯಿಂದ ಅಭಿನಯಿಸುತ್ತ ಕಾಲವನ್ನು ಕಳೆಯು ತಿರು, ಮತ್ತು ನನ್ನ ಸ್ನೇ ನಂಬಿ, ಧಾರಕಾಮಗಳಲ್ಲಿಯೂ ನನ್ನ ಸಂಬಂ ಧವುಳ್ಳುದನ್ನೇ ಆಶ್ರಯಿಸು. ಆಗ ನಿನಗೆ ನಿಶ್ಚಲವಾದ ಭಕ್ತಿಯು ತಾನಾಗಿ ಹುಟ್ಟುವುದು ನನ್ನಲ್ಲಿ ಭಕ್ತಿಯ ಹುಟ್ಟುವುದಕ್ಕೆ ಸಹವಾಸವೂ ಒಂದು ಮುಖ್ಯ ಕಾರಣವು. ಮೇಲೆ ಹೇಳಿದಂತೆ ಭಕ್ತಿಯಿಂದ ಯಾವನು ನನ್ನನ್ನು ಸೇವಿಸುವನೋ ಅಂತವನು ನನ್ನ ಸ್ಥಾನವನ್ನು ಸುಖವಾಗಿ ಹೊಂದುವನೆಂ ದು ಸತ್ಪುರುಷರು ನಿರ್ಧರಿಸಿರುವರು.” ಎಂದನು. ಉದ್ದವನು ತಿರುಗಿ ಪ್ರಶ್ನೆ ಮಾಡುವನು (ಓ ಪುಣ್ಯಕೀರ್ತಿ!ಕೃಷ್ಣಾ! ಸಾಧುಗಳ ಸಹವಾಸವೇ ಭಕ್ತಿಗೆ ಮೂಲವೆಂದು ಹೇಳಿದೆಯಲ್ಲವೆ? ನಿನಗೆ ಪ್ರಿಯತಮರಾದ ಆಂತಹ ಸಾಧುಗಳಾರು ? ಮತ್ತು ಎಂತಹ ಭಕ್ತಿಯನ್ನು ಸಾಧಿಸಿದರೆ ನೀನು ಪ್ರಸನ್ನನಾಗುವೆ? ನಾರದಾದಿಗಳು ಯಾವವಿಧವಾದ ಭಕ್ತಿಯನ್ನು ಸಾಧಿಸುತ್ತಿದ್ದರೂ, ಅದನ್ನು ನನಗೆ ತಿಳಿಸಬೇಕು. ಪ್ರಕೃತಿ ಪುರುಷರಿಗೆ ನಿಯಾಮಕನೂ, ಲೋಕೇಶ್ವರನೂ ಆದ & ಕೃಷ್ಣಾ! ನಿನ್ನ ಅವಿಚ್ಛಿನ್ನ ಭಕ್ತನಾಗಿ ನಿನ್ನನ್ನೇ ಸರಏಧದಿಂದಲೂ ಮರೆಹೊಕ್ಕಿರುವ