ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ಭಾಗವತವು ಅಧ್ಯಾ. ೧೬ ಮುಕ್ತನಾಗಿ ಮೋಕ್ಷವನ್ನೂ ಹೊಂದಬಹುದು. ಹೀಗೆ ಜೀವಾವಧಿಯಾಗಿ ಬ್ರಹ್ಮಚಯ್ಯವನ್ನು ನಡೆಸಲಾರದೆ, ಬೇರೆ ಆಶ್ರಮವನ್ನು ಅವಲಂಬಿಸಬೇ ಕೆಂಬ ಅಭಿಲಾಷೆಯುಳ್ಳವನು, ತನ್ನ ವೇದಾಧ್ಯಯನವು ಪೂರ್ಣವಾಗಿ ಮು ಗಿದಮೇಲೆ, ಆಚಾಲ್ಯನಿಗೆ ಯಥೋಚಿತವಾದ ಗುರುದಕ್ಷಿಣೆಯನ್ನು ಸಮ ರ್ಪಿಸಿ, ಅವನ ಅನುಜ್ಞೆಯನ್ನು ಪಡೆದು, ವ್ರತಸಮಾವರ್ತನರೂಪವಾದ ಸ್ನಾನವನ್ನು ಮಾಡಬೇಕು. ಆಮೇಲೆ ಗೃಹಸ್ಥಾಶ್ರಮವನ್ನಾದರೂ ಆವ ಲಂಬಿಸಬಹುದು. ವಾನಪ್ರಸ್ಥಾಶ್ರವನ್ನು ಹಿಡಿದು ವನಕ್ಕಾದರೂ ಹೋ ಗಬಹುದು. ಬ್ರಾಹ್ಮಣನಾಗಿದ್ದ ಪಕ್ಷದಲ್ಲಿ, ಬ್ರಹ್ಮಚಯ್ಯಾಶ್ರಮದಿಂದ ಸ ನ್ಯಾಸಾಶ್ರಮವನ್ನಾದರೂ ಅವಲಂಬಿಸಬಹುದು. ಮುಖ್ಯವಾಗಿ ಕೈ ವರ್ಣಿಕನೊಬ್ಬೊಬ್ಬನೂ, ಒಂದಿಲ್ಲದಿದ್ದರೆ ಮತ್ತೊಂದಾಶ್ರಮವನ್ನು ಅವ ಲಂಬಿಸಿರಬೇಕೇಹೊರತು, ಯಾವ ಆಶ್ರಮವೂ ಇಲ್ಲದೆ ಕ್ಷಣಮಾತ್ರವೂ ಇರಬಾರದು. ಮತ್ತು ಯಾವ ಆಶ್ರಮದಲ್ಲಿದ್ದರೂ ನನ್ನ ಭಕ್ತಿಯನ್ನು ಮಾತ್ರ ಬಿಡಬಾರದು. ಇನ್ನು ಗೃಹಸ್ಥಧರಗಳನ್ನು ಹೇಳುವೆನು ಕೇಳು. ಗೃಹಸ್ಥಾಶ್ರಮ ವನ್ನು ಹಿಡಿಯತಕ್ಕವನು, ತನಗೆ ಅನುರೂಪಳಾಗಿಯೂ, ವಯಸ್ಸಿನಲ್ಲಿ ತನಗಿಂತಲೂ ಚಿಕ್ಕವಳಾಗಿಯೂ, ತನಗೆ ಸಮಾನವರ್ಣದವಳಾಗಿಯೂ, ನಿರ್ದುಷ್ಟಳಾಗಿಯೂ ಇರುವ ಸಿಯನ್ನು ವಿಧ್ಯುಕ್ತವಾಗಿ ವಿವಾಹಮಾ ಡಿಕೊಂಡು, ಅವಳೊಡನೆ ಕುಟುಂಬಧರವನ್ನು ನಡೆಸಬೇಕು. ತನಗೆ ಸಮಾನವರ್ಣದಲ್ಲಿ ಕನೈಯು ದೊರೆಯದಿದ್ಯಾಗಮಾತ್ರ, ಕ್ರಮವಾಗಿ ಕೆಳ ಕೆಳಗಿನ ವರ್ಣದವಳನ್ನು ವಿವಾಹವಾಗಬಹುದು. ಈ ಗೃಹಸ್ಥಾಶ್ರಮದಲ್ಲಿ, ಯಜ್ಞ ಮಾಡುವುದು, ವೇದಾಧ್ಯಯನ, ದಾನವೆಂಬೀ ಮೂರುಕಗಳು ಬ್ರಾಹ್ಮಣ ಕ್ಷತ್ರಿಯ ವೈಶ್ಯರೆಂಬ ಮೂರುವರ್ಣದವರಿಗೂ ಸಾಧಾರಣವು. ಯಾಗಮಾಡಿಸುವುದು, ಅಧ್ಯಯನಮಾಡಿಸುವುದು, ಇತರರು ಕೊಟ್ಟಿದಾನ ವನ್ನು ಪ್ರತಿಗ್ರಹಿಸುವುದು, ಈ ಮೂರುಕರಗಳಿಗೆ ಬ್ರಾಹ್ಮಣನಿಗೆ ಮಾತ್ರ ಅಧಿಕಾರವುಂಟು. ಅಲ್ಲಲ್ಲಿ ಹೋಗಿ ಯಾಚಿಸುತ್ತ ಪ್ರತಿಗ್ರಹದಿಂದಲೇ ಜೀವ ನಮಾಡುವುದು ತನ್ನ ತಪಸ್ಸಿಗೂ, ತೇಜಸ್ಸಿಗೂ, ಕೀರ್ತಿಗೂ ವಿಫುತಕಗ