ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೬ ಶ್ರೀಮದ್ಭಾಗವತವು - [ಅಧ್ಯಾ..೮. ಬೇರೆ ಆನೆಗಳಿಂದ ಕೊಲ್ಲಲ್ಪಡುವಂತೆ, ಸ್ತ್ರೀಯರಿಗೆ ಆಸೆಪಟ್ಟವನು,ತನಗಿಂತ ಲೂ ಬಲಾಡ್ಯರಾದವರಿಂದ ಸಂಹರಿಸಲ್ಪಡುವನೆಂದೂ, ವಿವೇಕಿಯಾದವನು ಅಂತಹ ಚಾಪಲ್ಯಕ್ಕೆ ವಶನಾಗಬಾರದೆಂದೂ ಆ ಆನೆಯ ದೃಷ್ಟಾಂತ ದಿಂದಲೇ ಗ್ರಹಿಸಿದೆನು ಕಾಡಿನಲ್ಲಿ ಜೇನುನೊಣಗಳು ಕಷ್ಟಪಟ್ಟು ಸಂಗ್ರಹಿಸಿಟ್ಟ ಜೇನನ್ನು , ಬೇಡರು (ಜೇನುತೆಗೆಯುವವರು : ಉಪಾಯದಿಂದ ಅಪಹರಿಸಿಕೊಂಡು ಹೋಗುವುದನ್ನು ನೋಡಿ, ಮನುಷ್ಯನು ಲೋಭಬುದ್ಧಿಯಿಂದ ತಾ ನೂ ಅನುಭವಿಸದೆ, ಮತ್ತೊಬ್ಬರಿಗೂ ದಾನಮಾಡದೆ ಕಷ್ಟದಿಂದ ಸಂಗ್ರಹಿಸಿಟ್ಟ, ಧನವು ಇತರರ ಪಾಲಾಗುವುದೆಂದು ತಿಳಿದೆನು. ಮತ್ತು ಆ ಜೇನುಹುಳುಗಳು ಎಷ್ಟೋ ಕಷ್ಟಪಟ್ಟು ಸಂಪಾದಿಸಿದ ಜೇನು, ಬೇಡ ನಿಗೆ ಅನಾಯಾಸವಾಗಿ ಲಭಿಸುವಂತೆ, * ಗೃಹಸ್ಥರು ಕಷ್ಟದಿಂದ ಸಂಗ್ರ ಹಿಸಿದ ಭೋಜನವನ್ನು , ಯೋಗಿಯಾದವನು ಅವನಿಗಿಂತ ಮೊದಲೇ ಅನಾ ಯಾಸವಾಗಿ ಭುಜಿಸಬಹುದೆಂಬುದನ್ನೂ, ಆ ಬೇಡನ ದೃಷ್ಟಾಂತದಿಂದಲೇ ಗ್ರಹಿಸಿಕೊಂಡನು. ಜಿಂಕೆಯು ಬೇಟೆಗಾರರ ಗಾನಧ್ವನಿಗೆ ಮರುಳಾಗಿ, ಅವರ ಕೈಗೆ ಸಿಕ್ಕಿ ಸಾಯುವುದನ್ನು ನೋಡಿ, ಯೋಗಿಯಾದವನು ಭಗವದ್ವಿಷ ಯವಲ್ಲದ ಗ್ರಾಮ್ಯಗೀತಗಳಿಗೆ ಕಿವಿಗುಡಬಾರದೆಂಬುದನ್ನು ಗ್ರಹಿಸಿಕೊಂಡ ನು. ಇದರಂತೆಯೇ ಜಿಂಕೆಯ ಗರ್ಭದಿಂದ ಜನಿಸಿದ ಋಶ್ಯಶೃಂಗನೆಂಬವನು, ಮೊದಮೊದಲು ಲೌಕಿಕ ಸುಖವೆಂಬುದನ್ನೇ ಕಾಣದವನಾಗಿದ್ದರೂ,ವೇಶ್ಯಾ ಸ್ತ್ರೀಯರ ಗ್ರಾಮ್ಯಗೀತನರ್ತನಾದಿಗಳಿಗೆ ಮೋಹಗೊಂಡು, ಅವರ ಕೈ ಯಾಟದ ಬೊಂಬೆಯಂತಾದುದನ್ನು ನೋಡಿ, ಯೋಗಿಯಾದವನು ಅಂತವು ಗಳನ್ನು ಕಣ್ಣೆತ್ತಿಯೂ ನೋಡಬಾರದೆಂದು ಗ್ರಹಿಸಿಕೊಂಡನು.


---- -----...... * (“ಬ್ರಹ್ಮಚಾರೀಚ ಚಕ್ಕನ್ನ ಸ್ವಾಮಿನಾವಧಿ ತಯರನ್ನ ಮಡಾತು ಭುಕ್ಕಚಾಂದ್ರಾಯಗಂ ಚರೇಕ್” ಎಂಬ ಶಾಶ್ಚ ವಿಧಿಯಂತೆ ಗೃಹ

ರು ಯು ಮೊದಲು ಅನ್ನ ದಕ್ಕಿ. ಆಮೇಲೆ ತಾವು ಭುಜಿಸುವರೆಂದು ಗ್ರಾಹಕ ~ ~ ~ ~~-~-