ಪುಟ:ಅಶೋಕ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

» ಅಶೋಕ ಅಥವಾ ಪ್ರಿಯದರ್ಶಿ, ws/IP + • • •vry , 1, 1• • • • •

  • * * * * * * * ೪ • • •+ v 14yyVV / VV

ಧರ್ಮಪ್ರಸಂಗದಲ್ಲಿ ಕಾಲಕಳೆಯುವದು, ಮಾನವಜಾತಿಯ ಕಲ್ಯಾಣಕ್ಕಾಗಿ ಧರ್ಮವಿ ಧಿಗಳನ್ನು ಪ್ರಸಾರಗೊಳಿಸುವದು, ಪ್ರಾಣಿಹಿಂಸೆಯನ್ನು ನಿವಾರಿಸುವದು, ಪರದೇಶಗಳಿಗೆ ಧರ್ಮ ಪ್ರಚಾರಕರನ್ನು ಕಳಿಸುವದು, ಈ ಕೆಲಸಗಳನ್ನು ಮಾಡುವನು. ಒಂದು ಕಡೆಗೆ ಅಪರಾಧಿಗಳಿಗೆ ಶಿಕ್ಷೆ ಕೊಡುವನು; ಕಾಮದಾರರ ಕೆಲಸಗಳ ಮೇಲೆ ತೀಕ್ಷ್ಯ ದೃಷ್ಟಿಯನ್ನಿ ಡುವನು, ಇನ್ನೊಂದು ಕಡೆಗೆ ರೋಗಪೀಡಿತರಿಗೂ ಪಶುಗಳಿಗೂ ಚಿಕಿತ್ಸಾಲಯ ಔಷ ಧಾಲಯಗಳನ್ನು ಕಟ್ಟಿಸುವನು; ಔಷಧದ ಗಿಡಮೂಲಿಕೆಗಳನ್ನು ಸಂಗ್ರಹಿಸುವದರಲ್ಲಿ ಜನ ರನ್ನು ನಿಯಮಿಸುವನು. ಈ ಪ್ರಕಾರದ ವಾಸನಾರಹಿತನಾದ ಚಕ್ರವರ್ತಿಯು ಭರತ ಖಂಡದ ಇತಿಹಾಸದಲ್ಲಿ ದೊರೆಯುವದು ಅಪೂರ್ವವ- ಜಗತ್ತಿನ ಇತಿಹಾಸದಲ್ಲಿ ಕೂಡ ಎರಡು ಸಾವಿರ ವರ್ಷಗಳ ಪೂರ್ವದಲ್ಲಿ ಒಮ್ಮೆ ಮಾತ್ರ ಆಗಿಹೋದನು. ೧೭ನೆಯ ಅಧ್ಯಾಯ. ಅಶೋಕನ ಸಂಬಂಧವಾಗಿ ಬೇರೆ ಬೇರೆ ಕಥೆಗಳು. ದುವರೆಗೆ ನಾವು ಅಶೋಕನ ವಿಷಯವಾಗಿ ಐತಿಹಾಸಿಕ ಸಂಗತಿಗಳನ್ನು ಸಾಧ್ಯವಿದ್ದ ಮಟ್ಟಿಗೆ ಆಲೋಚಿಸಿದೆವು; ಈಗ ಆತನ ಕುಟುಂಬದವರ ವಿಷಯವಾಗಿ ಪ್ರಚಲಿತವಾಗಿರುವ ಒಂದೆರಡು ಕಥೆಗಳನ್ನು ಹೇಳಿ ಗ್ರಂಥ ವನ್ನು ಮುಗಿಸುವೆವ, ಅಶೋಕಾವಧಾನದಲ್ಲಿ ಅಶೋಕನಿಗೆ ಬಹುಜನ ಅರಸಿಯರಿದ್ದರೆಂದು ಉಲ್ಲೇಖಿಸಿದೆ. ಅವರಲ್ಲಿ ಮುಖ್ಯಳಾದ ಅರಸಿಗೆ ಅಸಂಧಿಮಿತ್ರಯೆಂದು ಹೆಸರು, ಅಶೋಕನು ಉಜ್ಜಯಿನಿಯಲ್ಲಿರುವ ( ದೇವಿ ” ಎಂಬ ಒಬ್ಬ ಶ್ರೇಷ್ಠ ಕಸ್ಯೆಯನ್ನು ಮದುವೆಯಾಗಿದ್ದನೆಂದು ಮಹಾವಂಶದಲ್ಲಿ ಹೇಳಿದೆ. ೭ನೆಯ ಸ್ತಂಭಲಿಪಿಯನ್ನೋದಲು ದೇವಿಯೆಂಬದು ಒಂದು ವ್ಯಕ್ತಿಯ ಹೆಸರಾಗಿರದೆ ಅದು ಉಪಾಧಿಯೆಂದು' ಗೊತ್ತಾಗಿರು ವದು, ಅದು ಮುಖ್ಯಪಟ್ಟರಾಣಿಗೆ ಮಾತ್ರ ಉಪಯೋಗಿಸಲ್ಪಡುತ್ತಿತ್ತು, ಮೇಲೆ ಹೇಳಿದ ಶಾಸನದಲ್ಲಿ ಅಶೋಕನು ಬೇರೆ ರಾಣಿಯರ ಮಕ್ಕಳಿಗಿಂತ ದೇವಿಯ ಮಕ್ಕಳ ಯೋಗ್ಯತೆ ಯನ್ನೂ, ಮುಖ್ಯತ್ವವನ್ನೂ ಒಪ್ಪಿರುವನು. ಅಶೋಕನ ಆಳಿಕೆಯ ೧೨ನೆಯ ವರ್ಷ ಅಸಂಧಿಮಿತೆಯು ಮರಣಹೊಂದಿದಳು, ಮುಂದೆ ' ವರ್ಷಗಳಾದ ಬಳಿಕ ಅಶೋಕನು ತಿಷ್ಯರಕ್ಷಿತೆಯನ್ನು ಮದುವೆಯಾದನು. ೭ನೆಯ ಸ್ತಂಭಲಿಪಿಯಲ್ಲಿ ತಿವರನ ತಾಯಿಯಾದ