ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೨ ಮಾಡಿದ್ದು ಣೋ ಮಹಾರಾಯ. ಗುಂಪು ಗುಂನಾಗಿ ಬರುತ್ತಲೇ ಇತ್ತು. ಚಿತ್ರ ಒಡ್ಡಿ ಸಿದ್ಧವಾಗಿತ್ತು. ಸ್ಮಶಾನದಲ್ಲಿ ಮಾಡಬೇಕಾದ ಕರ್ಮಗಳೆಲ್ಲ ವೂ ಮುಗಿದ ತರುವಾಯ ಶವವನ್ನು ಚಿತಿಯಮೇಲಿಟ್ಟರು. ಅದರಮೇಲೆ ಗೊತ್ತಾದ ಸ್ಥಾನದಲ್ಲಿ ನಮ್ಮ ಮ ನನ್ನೂ ಮಲ ಗಿಸಿದರು. ಸಹಗಮನ ಮಾಡುವ ಸತಿಯು ಬೆಂಕಿಯನ್ನು ತಡೆಯಲಾರದೆ ಚಿತ್ತ ಚಂಚಲವಾದಾಗ್ಯೂ ಅವಳು ಎದ್ದು ಈ ಚೆಗೆ ಬಾರದಂತೆ ಬೇಕಾದ ಕಟ್ಟುಗಳನ್ನು ಹಾಕಿ ಭಾರವನ್ನು ಹೇರಿದರು. ಅಗ್ನಿಯು ನಾಲ್ಕು ದಿಕ್ಕಿನಲ್ಲಿಯೂ ಸತ್ತಿಕೊಳ್ಳು ವುದಕ್ಕೆ ಮೊದಲಾಯಿತು. ಆ ಚಿತಿಯ ಮೇಲೆ ದೂರದಿಂದ ಎಂ ಣೆಯನ್ನು ಆಗಾಗ್ಗೆ ಚೆಲ್ಲುತ್ತಾ ಬಂದರು. ಮಹಾ ಪತಿವ್ರತೆ ಎಂ ಬ ಕೂಗೂ ಜನರ ಹಾಹಾಕಾರವೂ ಹೆಚ್ಚಾಯಿತು. ದಾರಿಯು ದಕ್ಕೂ ನಮ್ಮನ್ನು ಹೆಚ್ಚಿ ಇಟ್ಟುಕೊಂಡು ಬಂದಳದ ದೂ ಳನ್ನು ಗೋರಿಗೋರಿ ತೆಗೆದು ಕಂಣಿಗೆ ಒತ್ತಿಕೊಳ್ಳುವವರು ಎ ಪ್ರೊ, ಹಣೆಗೆ ಇಟ್ಟುಕೊಳ್ಳುವವರ , ಜಯಜಯ ಮಹಾ ತಾಯಿ ಆದಿಲಕ್ಷ್ಮಿ ಜಯಜಯ, ಎಂದು ಕೂಗತಕ್ಕವರೆಸ್ಕೋ, ಇಂಧಾ ಮಹಾತ್ಮಳು ಹೋದಳಲ್ಲ ಎಂದು ಅಷ್ಟು ದುಃಖ ದಿಂದಲೂ ಅಷ್ಟು ಭಕ್ತಿಯಿಂದಲೂ ಕಂಣಿನಲ್ಲಿ ನೀರ ಹಾರುತಾ ಗೊ' ಎನ್ನು ವನರನ್ನೋ, ಗೊತ್ತಿಲ್ಲದತಿ ಕೋಲಾಹಲ ಹು ಟಿತು. ಅಲ್ಲಿದ್ದ ಎಲ್ಲರ ದೃಷ್ಟಿಯೂ ಆ ಚಿತಿಯಮೇಲೆ ನೆ ಮೈುಹೋಗಿತ್ತು. ಆದರೆ ಆಗ ಅದ್ಭುತವಾದ ಸಂಗತಿಯೊಂದು ನಡೆಯಿತು. ಅಲ್ಲಿ ನೆರೆದಿದ್ದ ಜನವೆಲ್ಲಾ ನೋಡುತಿರುವಾಗಲೇ ಸ್ವಲ್ಪ