ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಮಾಡಿದ್ದುಣೋ ಮಹಾರಾಯ, ಈ ಜೋಯಿಸನಿಗೆ ತಿಮ್ಮಮ್ಮನೆಂಬ ಒಬ್ಬ ಹೆಂಣುಮಗಳು ಇದ್ದಳು. ಇವಳನ್ನೆ ಸದಾಶಿವದೀಕ್ಷಿತನಿಗೆ ಕೊಟ್ಟು ಅಗ್ರ ಬೆಳೆ ವಿತ್ತು. ಕೃವ್ಯನೆಂಬ ಒಬ್ಬ ಗಂಡು ಮಗನಿದ್ದನು. ಇವನು ವಿಶೇಷ ವಾಗಿ ಬುದ್ದಿಶಾಲಿಯಲ್ಲ. ಇಲಾಟವನ್ನು ಆಡಿಕೊಳ್ಳುತಾ ಅಲೆ ಯುತಾ ಇದ್ದನು. ಸ್ವಲ್ಪ ದಿವಸದಲ್ಲಿ ನೀಲಕಂಠ ಸನಿಗೆ ದೇಹಕ್ಕೆ ಉವಧೆ ಯುಂಟಾಗಿ ಅವಸಾನಕಾರಿ ಸಂಭವಿಸಿತು. ಆಗ ಅಳಿಯನಾದ ಸದಾಶಿವದೀಕ್ಷಿತನನ್ನು ಖಂಡಿತವಾಗಿ ಕರೆದು ತರು ವಂತೆ ಒಬ್ಬ ಆಳನ್ನು ಮೈಸೂರಿಗೆ ಕಳುಹಿಸಿದರು. ಆಳು ತಂದು ಕೊ ಕಾಗದದಲ್ಲಿ ಚಿರಂಜೀವಿ ನನ್ನ ಸದಾಶಿವದೀಕ್ಷಿತರಿಗೆ ಅನೆಕಾಶೀರ್ವಾದ. ಈ ಬಹುಳ ೧೧ ಶುಕ್ರವಾರದವರೆಗೆ ಇಲ್ಲಿ ಸರಗೂ ಕ್ಷೇಮ ನಿನ್ನ ಪ್ರೇಮಕ್ಕೆ ಬರಿಸಬೇಕು. ಅದಾಗಿ, ನನ್ನ ಶರೀರದಲ್ಲಿ ಈಗ ತಿಂಗಳಿ೦ದ ಕೇವಲವಾಗಿ ಆಲಸಿಕೆ ಯಾಗಿದೆ. ಜ್ವರಬಂದು ಬಹಳಮಟ್ಟಿಗೆ ನಿತ್ರಾಣಮಾಡಿತು. ಶೋ ಭಕಾಣಿಸಿದೆ. ನನ್ನ ಪ್ರೀತಿಯನ್ನು ನೋಡಲಾಗಿ ದೇಹ ಉಳಿಯು ತೆಂಬ ಭರವಸವು ನನಗೆ ತೋರುವುದಿಲ್ಲ. ಇಲ್ಲಿ ಮನೆಯಲ್ಲಿ ಯಾರೂ ದಿಕ್ಕಿಲ್ಲವೆಂಬ ಸಂಗತಿ ತಿಳಿದೇ ಇದೆ. ನಮ್ಮ ಅಕ್ಕ ಮುದುಕಿ, ನಮಗೂ ನಿಮಗೂ ಸಂಬಂಧ ಬೆಳೆದ ವರುಷದಿಂದಲೋ ಚಿ| ಕೃಷ್ಣನ ಸ್ಥಿತಿ ಗೊತ್ತಾಗಿಯೇ ಇದೆ. ಈ ಕಾಗದ ಕಂಡಕೂ ಡಲೆ ಯಾವ ಕೆಲಸವಿದ್ದರೂ ಬಿಟ್ಟು ಜಾಗ್ರತೆಯಾಗಿ ಬಂದು ಮಾತನಾಡಿಕೊಂಡು ಹೋಗಬೇಕು. ಪಶುಪತಿಸಾಂಬಶಾಸ್ತ್ರಿಗಳ ಅಪ್ಪಣೆ ಪಡೆದು ಅವರಿಗೆ ನನ್ನ ನಮಸ್ಕಾರವನ್ನು ತಿಳಿಸಿ ನೀವು