ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ ಮಾಡಿದ್ದು ಣೋ ಮಹಾರಾಯ, ನ್ನು ಇರಿಸಿದ್ದೀಯೋ ಬಾಯಿಗೆ ಹಾಕಿಕೊಂಡೆಯೋ ? ನನಗೆ ಒಂದು ಚೂರೂ ಸಿಕ್ಕುವುದಿಲ್ಲ. ಎಲ್ಲಾ ನಿನ್ನ ಹೊಟ್ಟೆಯಲ್ಲೇ ಮಡಿಯುತ್ತೆ, ಎಂದನು. ಇವನ ಬೆಪ್ಪು ತನವನ್ನು ನೋಡಿ, ಪೇಚಾಡುತಾ, ಸದಾಶಿನದೀಕ್ಷಿತನು - ಕಿಟ್ಟಿ, ಉದ್ದರಣೆಯಿಂದ ಎರಡು ಸಾರಿ ದೀಕ್ಷಿತರ ಬಾಯಿಗೆ ನೀರನ್ನು ಹಾಕು ಎಂದನು. ಕೂಡಲೆ ಟೋನರಿಗೆ ಪ್ರಾಣಹೋಯಿತು. ಸದಾಶಿವದೀಕ್ಷಿತನು ಮುಂದಿನ ಕಾರಗಳೆಲ್ಲವನ್ನೂ ಸಾಂಗೆ ವಾಗಿ ನಟಿಸಿದನು, ತರುವಾಯ ಅಲ್ಲಿನ ಆದಾಯವಚ್ಛಗಳನ್ನು ನೋಡಿಕೊಂಡು, ಕೂಡಲ ನೀಲಕಂರಜೋಯಿಸರ ಅಕ್ಯನಾದ ವೆಂಕಮ್ಮ ನನ್ನು ಕುರಿತು, ಸದಾಶಿವ-ದೊಡ್ಡಮ್ಮ, ಊರಲ್ಲಿ ಎಲ್ಲವನ್ನೂ ಬಿಟ್ಟು ಏಕಾಏಕಿ ನಾನು ಬಂದುಬಿ, ಮೈಸೂರಿಗೆ ನಾನು ಹೋಗಿ ನನ್ನ ಮಾವಂದಿರಲ್ಲಿಯ ಯೋಚನೇಮಾಡಿ ಎಂದು ದಿನ ಸದೊಳಗಾಗಿ ಬರುತ್ತೇನೆ. ವೆಂಕಮ್ಮ - ಇಲ್ಲಿ ದಿಕ್ಕಿಲ್ಲ, ಈ ಹಾಳ ಊರಲ್ಲಿ ತುಂವರು ಹೆಚ್ಚು, ಯಾವ ಗಳಿಗೆಗೆ ಏನೋ ? ಸದಾಶಿವ-ನೀವು ಯೋಚಿಸಬೇಡಿ, ನಾನು ತಕ್ಕ ನಿರ್ವಾಡು ಮಾಡುತ್ತೇನೆ, ಕೂಡಲೆ ಬಂದೂಬರುತೇನೆ. ಹೀಗೆಂದು ಸದಾಶಿವ ದೀಕ್ಷಿತನು ಮೈಸೂರಿಗೆ ಬಂದು ಸೋದರಮಾವನಾದ ಪಶುಪತಿ ಸಾಂಬಶಾಸ್ತಿಗೆ ಸಂಜನಾಡಿಯ ಸಂದರ್ಭವನ್ನೆಲ್ಲಾ ತಿಳಿಸಿದನು. ಆ ದಿವಸ ಸಾಯಂಕಾ