ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಮಾಡಿದ್ದುಣೋ ಮಹಾರಾಯ, ಹೀಗೆ ತನಗೆ ಉಂಟಾಗಿರುವ ರಾಜಪೂಜ್ಯತೆಯ ಮರೆಯಲ್ಲಿ ತಾನು ಯೇನ ಮಾಡಿದಾಗ್ಯೂ ನಡೆಯುತ್ತೆಂದು ಈ ಆಖಾಲಿ ನು ತಿಳಿದಿದ್ದನು. ಇವನ ಚರಿತ್ರೆ ಇಷ್ಟೆ ಅಲ್ಲ, ಇವನಲ್ಲಿ ಮೂರು ನಾಲ್ಕು ಜನ ಮಧ್ಯಸ್ಥಗಾರರು ಒಳಗೂ ಹೊರಗೂ ಓಡಿಯಾಡುತ್ತಲೇ ಇರುತಿದ್ದರು. ಇವರ ಮೂಲಕ ಒಂದೊಂದು ಮೊಕದ್ದಮೆಯಲ್ಲಿಯೂ ಒಳಅಂಚ ಹೆಚ್ಚಾಗಿ ನಡೆಯುತ್ತಲೇ ಇರು ತಿತ್ತು. ಹಣಗಾರರಾದ ಜನರು ಕಕ್ಷಿಗಾರರಾಗಿ ಬಂದಾಗ ಸು ಬೇದಾರರ ಜಾಳಿಗೆಯು ನೂರಾರು ಕಳೆಯಲ್ಲಿ ತುಂಬುತಾ ಇತ್ತು. ಈ ಆದಾಯವು ಇನ್ನೂ ಹೆಚ್ಚುತ್ತ ಇತ್ತು. ಕೊಟಾ ರದ ದಿವಸದಲ್ಲಿ ಜವಾನರು ಗ್ರಾಮಗಳಿಗೆ ಹೋಗಿ ಪಟೇಲರ ಮುಖಾ೦ತ್ರ ಒಕ್ಕಲುತನದವರಿಂದ ಬೇಕಾದಷ್ಟು ದವಸವನ್ನೂ ಹುಲ್ಲನ್ನೂ ಬಿಟ್ಟಿಯಾಗಿ ಹೊರಿಸಿಕೊಂಡು ಬರುತ್ತಲೇ ಇದ್ದರು. ಇದೆಲ್ಲವೂ ಸುಬೇದಾರರ ಮನೆಯಲ್ಲಿ ಮಾರಾಟವಾಗಿ ಬಂದ ಹ ಣ ಸುಬೇದಾರರ ಬೊಕ್ಕಸಕ್ಕೆ ಬೀಳುತ್ತಲೇ ಇತ್ತು. ಆ ಆ ಖಾಲರು ಯಾರನ್ನು ಕಂಡಾಗ-ಏನಕಣೆ ಗ್ಯವಡ, ನಾಳಿ ನನ್ನಲ್ಲಿ ತಿತಿ ಬರಾದು, ತರಕಾರಿ ಬಾಳಿಯಲಿ ಎಷ್ಟು ಸಿಕ್ಕಿದರೂ ತಂದುಕೊಡೇನು ? ಎಂದು ಹೇಳುತಿದ್ದರು. ಹೀಗೆ ಬಂದ ಕಾಯಿ ಪಲ್ಯ ಮನೆಯಲ್ಲಿ ತುಂಬಿಯೇ ಇರುತಿತ್ತು. ಇದೆಲ್ಲವನ್ನೂ ಸರ್ಕಾ ರದ ಜವಾನರು ಮಾರಿ ದುಡ್ಡನ್ನು ತಂದು ಅಮ್ಮ ನವರ ಕೈಯಲ್ಲಿ ಕೊಡುತಿದ್ದರು. ಆಮಿಾಲರು ಗ್ರಾಮಗಳಿಗೆ ಹೋದಾಗ ಒಂದಕ್ಕೆ ಹತ್ತರಷ್ಟು ಸೋಬಸ್ಕರವನ್ನು ರೈತರ ಮನೆಯಿಂದ