ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ೨ ಮಾಡಿದ್ದುಣೋ ಮಹಾರಾಯ. ದೀಕ್ಷಿ-ಪಟ್ಟನ ಭಯವು ಮನಸ್ಸಿನಲ್ಲಿ ಹೊಕ್ಕು ಆಗಿನಮಟ್ಟಿ ಗೆ ಜ್ಞಾಪಕ ಶಕ್ತಿಯನ್ನು ಚುರಕುಮಾಡಬಹುದು. ಬಾಲಕನ ಮನಸ್ಸಿನಲ್ಲಿ ಬೆಚ್ಚಗೂ ಅದರ ಭಯದಿಂದ ಹೊರಡುವ ಸಂಗತಿಗೂ ಸಂಬಂಧ ಕಲ್ಪನೆಯಾಗುವುದು. ಆ ಸಂಗತಿ ಹೇಳುವಾಗೆಲ್ಲಾ ಪೆಟ್ಟಿನ ಜ್ಞಾಪಕ ಬರುವ ಕಾರಣ, ಈ ಭಯವೂ ಆ ಅಂಶವೂ ಒಟ್ಟಿಗೆ ಸೇರಿ ಕೊಳ್ಳುವವು. ಭಯವೆಂದರೆ ಬುದ್ದಿಯು ಹೇಗೆ ಓಕ ರಿಸಿಕೊಳ್ಳುವುದೋ ಅದಕ್ಕೆ ಸಂಬಂಧಿಸಿದ ವಿಷಯ ವನ್ನು ಕಂಡರೂ ಹಾಗೆಯೇ ಅಸಹ್ಯ ಪಡುವುದು. ನಸ್ಸಿಗೆ ಅಸಹ್ಯವಾದ್ದು ಜ್ಞಾಪಕದಲ್ಲಿ ನಿಲ್ಲುವುದಿಲ್ಲ. ಹೀಗೆ ಭೀತಿಗೆ ಮೂಲಕಾರಣವಾದ ಪೆಟ್ಟನದೆಸೆಯಿಂದ ತಿಳಿದುಬಂದ ಅಂಶವು ಮನಸ್ಸಿನಲ್ಲಿ ನಿಲ್ಲದೆ ಖಂಡಿತವಾ ಗಿಯೂ ಮರೆತು ಹೋಗುವುದು. ನಮ್ಮ ಇಷ್ಟಕ್ಕೆ ವಿರೋಧವಾಗಿ ಒಂದು ಸಂಗತಿಯನ್ನು ನಾಲ್ಕು ಸಾರಿ ಉರು ಹಾಕಿದರೆ ಸದ್ಯಕ್ಕೆ ಆ ಅಂಶ ಮನಸ್ಸಿಗೆ ಹತ್ತಿದರೂ, ಆಮೇಲೆ ಮರೆಯುವುದು ಸಹಜವಾದ ಮನೋವೃತ್ತಿ ಯಾಗಿದೆ. ಇಂಧಾದ್ದರಲ್ಲಿ ನಿಜವಾದ ಭೀತಿಯಿಂದೊಡ ಗೂಡಿದ ಅಂಶ ಮನಸ್ಸಿನಲ್ಲಿ ನಿಂತೀತೆ ? ಹೀಗೆ ಹೇಳಿ ಕೊಟ್ಟ ಸಂಗತಿಯನ್ನು ಮರೆಯುವುದಕ್ಕೆ ನಾವೇ ಮಾ ರ್ಗವನ್ನು ಕಲ್ಪಿಸಿ ಮರೆತುಬಿಟ್ಟೆ ಎಂದು ಹುಡುಗರನ್ನು ಶಿಕ್ಷಿಸುವುದು ನ್ಯಾಯವೆ ? ನಾರ-ನಾನು ಹೇಳಿಕೊಟ್ಟಿದ್ದನ್ನೆಲ್ಲಾ ಹುಡುಗರು ಮರೆತು