ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ಮಾಡಿದ್ದು ಣೋ ಮಹಾರಾಯ, ಮಹಾ ಪತಿವ್ರತೆಯರ ಚರಿತ್ರೆಯನ್ನು ಯಾವಾಗಲೂ ಮನಸ್ಥಿ ನಲ್ಲಿ ಸ್ಮರಿಸುತಲೇ ಇರುತಿದ್ದಳು. ನೆರೆ ಹೊರೆಯವರು ಅಸ ಮಾಧಾನ ಪಟ್ಟುಕೊಳ್ಳುವ ಒಂದುಗುಣ ಈಕೆಯಲ್ಲಿತ್ತು. ಯಾ ರಸಂಗಡಲೂ ಹೆಚ್ಚಾಗಿ ಮಾತನಾಡುತಿರಲಿಲ್ಲ. ಯಾರನನೆಗೆ ಕರೆದರೂ ಹೋಗುವುದಕ್ಕೆ ಇವಳಿಗೆ ಮನಸ್ಸಿಲ್ಲ. ಮನೆಯಲ್ಲಿ ಹುಡುಕಿಕೊಂಡು ಏನಾದರೂ ಒಂದು ಕೆಲಸವನ್ನು ಮಾಡುತ್ತಲೇ ಇರುತಿದ್ದಳು. ಇದರಿಂದ ಈ ಹುಡುಗಿಗೆ ವಿಶೇಷವಾಗಿ ದುರ ಹಂಕಾರವಿದೆ ಎಂದು ಇತರರು ತಿಳಿಯುವಹಾಗಿತ್ತು. ಗಂಡನಿಗೆ ಹೆಂಡತಿಯಲ್ಲಿ ವಿಶೇಷವಾದ ಪ್ರೀತಿ ಇತ್ತು. ಮಾವನಿಗೆ ಇವಳನಡತೆ ಅಚ್ಚು ಮೆಚ್ಚಾಗಿತ್ತು. ಕಾರೇಷು ದಾಶೀ ಕರಣೇಷುನಂತ್ರಿ ರೂಪೇಚಲಕ್ಷ್ಮಿ ಕ್ಷಮಯಾಧರಿತ್ರೀ ಭೋಜೈಮುನಾತಾ ಶಯನೇಷವೇಶ್ಯಾ ಪದ್ದರ್ಮಯುಕ್ತಾ ಕುಲಧರ್ಮಪತ್ನಿ ” ಇದಕ್ಕೆ ಅನುಸಾರವಾಗಿ ಸೀತು ಇದ್ದ ಳು, ಕಿಟ್ಟ ಜೋಯಿಸನು ಯಾರು ಹೇಗೆ ಮಾತನಾಡಿದರೆ ಅವರಂತೆ ಹರಟೇ ಬಡಿಯುತಾ ಇಲಾಟವನ್ನು ಹತ್ತಿಕೊಂಡಿ ದ್ದನು. ಸತಿಯ ರೀತಿ ಮುಂದೆ ಗೊತ್ತಾಗುವುದು. ತಾನು ಶ್ರಮಟ್ಟು ಸಾಕಿದ ಮಹ ದೇವನ ಸಂಸಾರ ಅಚ್ಚ ಕಾಯಿತಲ್ಲ ಎಂಬ ಸಂತೋಷದಲ್ಲಿ ಪಾಲ್ಬತಮ್ಮ ಮುಳಗಿದ್ದಳು. ವೆಂಕ ಮ್ಮನು ತನ್ನ ತಮ್ಮ ನೀಲಕಂಠ ಜೋಯಿಸರ ಮನೆಯ ಹೆಸರ ವಾಸಿ ಇಷ್ಟರಮಟ್ಟಿಗೆ ನಿಂತಿತಲ್ಲಾ ಎಂದು ಹರ್ಷಿತಳಾಗಿಯೇ ಇದ್ದಳು. ಈಕೆ ಅಷ್ಟೊಂದು ಹೊಗೆಯನ್ನು ಅರಿತ ಪ್ರಾಣಿ ಯಲ್ಲ, ತಿಮ್ಮಮ್ಮನ ಮನಸ್ಸಿನಲ್ಲಿ ಮಾತ್ರ ಹೊಗೆ ಸುತ್ತಿ