ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

... ಮಾಡಿದ್ದು ಸ್ಫೋ ಮಹಾರಾಯ, ಭಟಜಿ - ಗಿರಿಯಂಣ, ಈ ಬೆಂಕೀ ನೋಡಿದೆಯ ? ಗಿರಿಯಂಣ- ನೋಡಿದೆ. ಕಾಡಿನಲ್ಲಿ ಇದ್ದ ಸುಡುವುದಕ್ಕೆ ಬೆಂಕಿ ಹಾಕಿದಾರೋ, ಇಲ್ಲ ಹೆಣಕ್ಕೆ ಬೆಂಕಿ ಹಾಕಿ ದಾರೋ, • ಯಾವುದೊ ಎರಡರಲ್ಲಿ ಒಂದು, ಭದಜಿ ಇದ್ದಲ ಸುಡುವ ಬೆಂಕಿಯಲ್ಲ. ಹೆಣಾ ಸುಡುವ ಬೆಂಕಿ, ಯಾವುದೋ ಊರು ಹತ್ತರವಾಯಿತು. ಸಂಜನಾಡಿ ಯಾಗಿರಬೇಕು. ದೂರದಲ್ಲಿ ಬೆಳಕು ಕಾಣುತ್ತೆ. ಗಿರಿ- ನೀನು ಹೇಳಿದ್ದೇ ಸರಿ, ಹೆಣವೆಂತಲೇ ತೋರುತ್ತೆ. ಇನ್ನೂ ಈಗತಾನೇ ಬೆಂಕಿಹಾಕಿ ಹೊರಟುಹೋಗಿದಾರೆ. ಭವ-ಇದು ಹೆಣ ಎನ್ನಬೇಡ, ಮನುಷ್ಯ ದೇಹವೇನೋ ಹ ವುದು, ಅದು ಸತ್ತಿಲ್ಲ, ಪ್ರಾಣವಿದೆ. ಆದರೂ ಬೆಂ ಕೀ ಹತ್ತಿಸಿ ಹೋಗಿದಾರೆ. ಗಿರಿ- ಬೆಂಕಿ ಹತ್ತಿ ಉರಿ ಏಳು ತಾ ಇದೆ. ವಾಣವಿದೆಯಂದ ರೇನು ? ಭದಜಿ–ಬೇಕಾದ ಪರೀಕ್ಷೆ ಮಾಡು, ತೋರಿಸುತ್ತೇನೆ. ಆ ಶರೀರಕ್ಕೆ ಪ್ರಾಣವಿದೆ. ಗಿರಿ- ಪ್ರಾಣವಿದೆ ಎಂತ ಹೇಗೆ ಹೇಳುತೀಯೆ ? ಭಟಜಿ-ನೀನು ಸ್ವಲ್ಪ ನಿಂತುಕೊಂಡು ಧ್ಯಾನಿಸಿ ಕೇಳು. ಆ ಶರೀರ ಕೂಗುತಾ ಇರುವ ಸದ್ದು ಕೇಳುತ್ತೆ. ಗಿರಿ- ಸ್ವಲ್ಪ ಸರೋ ಬಹಳ ಹೊತ್ತಿನಿಂದ ಸಂಣಗೆ ಕೇಳುತಿದೆ. ಆದರೆ ಅದು ಗಾಳಿಬೀಸುವ ಸದೆ ? ಆ ಹೆಣದ ಸದ್ದೆ ? 37