ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದುಣೋ ಮಹಾರಾಯ, ೧೨೩ ಗೆನೀರನ್ನು ಚಿಕ್ಕಿಸಿ ಎಲ್ಲರನ್ನೂ ಊಟಕ್ಕೆ ಎಬ್ಬಿಸಿ ದನು. ಸದಾಶಿವದೀಕ್ಷಿತ ಮೈಸೂರಿಂದ ಬಂದಿದ್ದ ಇಬ್ಬರು ನಂಟರು ೧೦ – ೧೫ ವರುಷದಿಂದ ದೀಕ್ಷಿತನ ಮನೆ ಯಲ್ಲಿಯೇ ಊಟಾ ಮಾಡಿಕೊಂಡಿದ್ದ ಉವಾದ್ರಿ ನಾರಪ್ಪಯ್ಯ ಇವರೆಲ್ಲರೂ ಎಡೆಯಮೇಲೆ ಬಂದು ಕೂತುಕೊಂಡರು. ತಂದೆ ಯ ಸಮಾಸದಲ್ಲಿ ಹಾಕಿ ಬಂದು ಎಲೆಮುಂದೆ ಕೂತು ಕೊಂಡಳು. ಉಪ್ಪಿನಕಾಯಿ ಮೊದಲಾಧ್ರನ್ನು ಬಡಿಸಿದ ತರು ವಾಯ ಸೀತಮ್ಮ ನು ಅನ್ನವನ್ನು ತಂದು ಬಡಿಸಿದಳು. ತಂದೆ ಯ ಹತ್ತಿರ ಕೂತಿದ್ದ ಹಾಕಿಯು ಇತರರು ಪರಿಷೇಚನೆಮಾಡಿ ಪ್ರಾಣಾಹುತಿಯನ್ನು ಹಾಕಿಕೊಳ್ಳುವುದಕ್ಕೆ ಮುಂಚೆ ಅಪ್ಪಾ ಅನ್ನವೆಲ್ಲಾ ಉಪ್ಪಿನಕ್ಷರವಾಗಿದೆ, ಎಂದಳು. ದೊಡ್ಡವರು ಊ ಟಕ್ಕೆ ಕೂತುಕೊಳ್ಳುವುದಕ್ಕೆ ಮುಂಚೆ ಹುಡುಗರು ಎಡೆಯನ್ನು ಮುಟ್ಟುವ ಪದ್ಧತಿ ಇಲ್ಲ. ಇತರರು ಪರಿಷೇಚನೆಯನ್ನೇ ಮಾಡ ದೆ ಇರುವಾಗ ಸಾಕಿಗೆ ಅನ್ನ ಉಪ್ಪಾಗಿದೆ ಎಂದು ತಿಳಿದದ್ದು ಹೇಗೆ ? ಇದು ಹಾಗಿರಲಿ, ಅಂತೂ ಈ ಮಾತನ್ನು ಕೇಳಿದಕೂ ಡಲೆ ಎಲ್ಲರೂ ಆವೇಶನವನ್ನು ತೆಗೆದುಕೊಂಡು ಬಾಯಿಗೆ ಪ್ರಾಣಾಹುತಿಯನ್ನು ಹಾಕಿಕೊಂಡರು. ಅನ್ನ ಎಲ್ಲಾ ಹೆಚ್ಚಾಗಿ ಉಪ್ಪಾಗಿತ್ತು. ಎಲ್ಲರೂ ಅನ್ನವನ್ನು ಚೆಲ್ಲಿ ಎದ್ದು ಬಿಟ್ಟರು. ಕೂಡಲೆ ಬೇರೆ ಅನ್ನವನ್ನು ಮಾಡಿ ಬಡಿಸಿದರು. ಹೀಗೆ ಮಾಡಿ ದಳಲ್ಲಾ ಎಂದು ಊಟಕ್ಕೆ ಕೂತಿದ್ದ ಎಲ್ಲರಿಗೂ ಆಗ್ರಹಬಂತು. ಸದಾ ಏನು ಸೀತಮ್ಮ, ಅಡಿಗೇ ಬಲ್ಲಳಾಣೆ ಎಂದು ಅಂದ ಆದಮೇಲೆ ಕೂರಿಸಿದರೆ ಚಕ್ಕೋತನ ಸೊಪ್ಪಿಗೆ ಏನು