ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪ ಮಾಡಿದ್ದು ಣೋ ಮಹಾರಾಯ, ಒಬ್ಬನ ಯೋಗಕ್ಷೇಮ ಇನ್ನೊಬ್ಬನಿಗೆ ತಿಳಿಯದಂತೆ ಇದ್ದ ಕಾ ರಣ ಕಳ್ಳಬಂದರು ಚತುರೋಪಾಯಮಾಡಿ ಕೆಲವು ಸಂಗತಿಗ ಳನ್ನು ತಿಳಿದುಕೊಳ್ಳಲು ಯತ್ನ ಮಾಡಿದರು. ಆದರೆ ಅವರು ಮಾಡಿದ ಯಾವ ಯತ್ನವೂ ಸಾಗಲಿಲ್ಲ. ಆ ಜನರಲ್ಲಿ ಒಬ್ಬ ವಿನಾ ಉಳಿದ ಏಳುಮಂದಿಯೂ ಎಷ್ಟೋಬಾರಿ ಅನೇಕ ಬಂದೀಖಾನೆಗೆ ಳಲ್ಲಿದ್ದು ಅನೇಕ ಜನ ಕಳ್ಳ ಬಂದರ ಪುಸುಲಾವಣೆಗೂ ಅನೇಕ ಜನ ಕಂದಾಚಾರದ ಕಚಗರ ಚಿದಗಳುಳ್ಳಿಗೂ ಸಿಕ್ಕಿ ಅನುಭ ವಿಸಿ ತೀರಿದ ಕೈಗಳಾಗಿದ್ದ ಕಾರಣ, ನಾ ಕಾಣೆ ನಾನರಿಯೆ, ಎಂಬ ಸಸೇಮಿರವನ್ನು ನುಡಿಯುತ್ತಲೇ ಬಂದರು. ಆದರೆ ಅವರಲ್ಲಿ ಒಬ್ಬ ಮಾತ್ರ ಕಾರಾಗ್ರಹಕ್ಕೆ ಹೊಸಬನಾಗಿದ್ದನು; ಆ ಗುಂಪಿ ನವರೆಲ್ಲರಿಗಿಂತಲೂ ಪೂವಯಸ್ಸಿನವನಾಗಿದ್ದನು. ಇವನ ಹತ್ತ ರ ಸೇರಿಕೊಂಡು ಇವನಿಗೆ ಆಪ್ತನಂತೆ ನಟಿಸುತ್ತಿದ್ದ ಕಳ ಬಂದನು ಕೇವಲ ಚಾತುರ ಉಳ್ಳವನಾದ ಕಾರಣ ದಿನಕ್ರಮೇಣ ಆ ಯವನನನ್ನು ಮಾರ್ಗಕ್ಕೆ ತಂದನು. ಕಳ್ಳ ಬಂtರನು ಆ ಡುತಾ ಬಂದ ನೀತಿಗೂ ಹೇಳುತ್ತಾ ಬಂದ ಕಥೆಗಳಿಗೂ ಮುರು ಗಿ ಆ ಹುಡುಗನು ತನ್ನ ಕಥೆಯನ್ನು ಹೇಳುತ್ತಾ ಬಂದದ್ದು ಹೇಗೆಂದರೆ:- ಹಿಮವದ್ರೂಪಾಲನ ಬೆಟ್ಟದ ತಪ್ಪಲಲ್ಲಿರುವ ಒಂದು ಊರಿನಲ್ಲಿ ನಾನು ಹುಟ್ಟಿದೆ. ಆ ಊರಹೆಸರನ್ನು ನಾನರಿ ಯೆ. ನಮ್ಮ ತಂದೆ ಕೇವಲ ಬಡವ. ನಮ್ಮ ತಾಯಿಗೆ ಒಂ ದುಕಾಲು ಕುಂದು, ಯಾವ ಕೆಲಸವನ್ನೂ ಮಾಡಲಾರಳು. ಇವಳ ಹೊಟ್ಟೆಯಲ್ಲಿ ಒಂದು ಹೆಂಣು ಒಂದು ಗಂಡು ಹೀಗೆ