ಪುಟ:ನನ್ನ ಸಂಸಾರ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

52 ಕಾದಂಬರಿ? ಸಂಗ್ರಹ

ವಿಷಯವನ್ನು ತಿಳಿದುಕೊಂಡಮೇಲೆ ನನ್ನ ಮನಸ್ಸಿನಲ್ಲಿ ಆದ ಆನಂದವು ಇಷ್ಟೇ ಎಂದು ಹೇಳಲಾರೆನು. ತೌರುಮನೆಗೆ ಹೋಗಲಾಶೆಯುಳ್ಳ ಹೆಣ್ಣುಮಕ್ಕಳೇ ಈ ಆನಂದವನ್ನು ಮನನ ಮಾಡಬಹುದು.

     ಮೂರುಗಂಟೆ ಕಾಲದೊಳಗಾಗಿ ಅಂದರೆ ರಾತ್ರಿಎಂಟುಗಂಟೆ ಸಮಯದಲ್ಲಿ ಬಂಡಿಯು ರಂಗಪುರದಲ್ಲಿ ನಮ್ಮ ತೌರುಮನೆಯ ಹತ್ತಿರ ಬಂದುನಿಂತಿತು. ನಾನೂ ಗಾಡಿಯಿಂದಿಳಿದು ಒಳಕ್ಕೆಹೋದೆನು. ನನ್ನ ತಾಯಿಯು ನನ್ನನ್ನು ತಬ್ಬಿಕೊಂಡು ಗಟ್ಟಿ ಯಾಗಿ ಅತ್ತುಬಿಟ್ಟರು. ವೃಥಾಸವಾದಕ್ಕೆ ಪಾತ್ರಳಾಗಿ ನಮ್ಮ ತಾಯಿಯು ಕೊಟ್ಟ ಹಣವನ್ನೂ ಹಾಳುಮಾಡಿಕೊಂಡುದಕ್ಕಾಗಿ ನಾನು ನನ್ನ ತಾಯಿಯನ್ನೇ ಸ್ವಲ್ಪನಿಂದೆ ಮಾಡಿದೆನು. ತಾಯಿಯೂ ಬಹು ಪಶ್ಚಾತ್ತಾಪ ಪಟ್ಟು ತಮ್ಮ ಅವಿದೇಕಕ್ಕಾಗಿ ವಿಷಾದ ಗೊಂಡರು. ನಮ್ಮ ಯಜಮಾನರು ನನ್ನನ್ನು ಅಲ್ಲಿ ಬಿಟ್ಟು ಮಾರನೆಯದಿನ ಬೆಳಿಗ್ಗೆರೈಲಿನಲ್ಲಿ ಶ್ರೀ ನಗರಕ್ಕೆ ಪ್ರಯಾಣ ಮಾಡಿದರು.
     ನಾನು ತೌರುಮನೆಗೆ ಬಂದು ಈಗಾಗಲೇ 8-1೦ದಿನಗಳು ಕಳೆದು ಹೋದುವು. ಈ 8-1೦ ದಿವಸಗಳವರೆಗೆ ನನ್ನ ಸ್ವಾಮಿಯ ವೃತ್ತಾಂತವೇ ತಿಳಿಯದೆ ನನಗೆ ಬಹುಚಿಂ ತೆಯುಂಟಾಗಿದ್ದಿತು. ಅಷ್ಟರಲ್ಲೇ ಅಂಚೆಯವನು ಬಂದು 1 ಪುಸ್ತಕದಭಾಂಗಿಯನ್ನೂ 1 ಕವರನ್ನೂ ನನಗೆ ಕೊಟ್ಟು ಹೊರಟು ಹೋದನು. ಅಂಚೆಯ ಮುದ್ರೆಯು ಹರಪುರದ್ದಾಗಿದ್ದಿತು. ನಾನು ಆತುರದಿಂ : ಪತ್ರವನ್ನು ಬಿಚ್ಚಿ ಓದಿನೋಡಿದೆನು. ಕುಶಲಂ,                                             ಹರಪುರ.                                             ಆಶಿರ್ವಾದಗಳು.                                     ಮಕರಸಂಕ್ರಮಣ.
    ನಾನು ಇಲ್ಲಿಗೆ ಬಂದು ನಾಲ್ಕು ದಿನವಾಯಿತು. ಶ್ರೀನಗರದಲ್ಲಿ ನಾನೊಬ್ಬನೇ ಇರಲು ಬಹು ತೊಂದರೆಯಾದುದರಿಂದಲೂ, ಹೊಟೇಲಿನಲ್ಲಿ ಊಟಮಾಡಬೇಕಾಗಿ ಬಂದುದರಿಂದಲೂ ವಾಸಕ್ಕೆಸರಿಯಾದ ಮನೆಯು ದೊರೆಯದೆಹೋದುದರಿಂದೆಯೂ ಮೂರು ತಿಂಗಳಕಾಲ ಶಾಲೆಗೆ ರಜವನ್ನು ತೆಗೆದುಕೊಂಡುಇಲ್ಲಿಗೆ ಬಂದೆನು. ಇಲ್ಲಿ ನಾನೂ ಮಾತೋಶ್ರೀಯವರೂ ಸುಖವಾಗಿದೇವೆ. ಇನ್ನೆರಡು ತಿಂಗಳು ಬಿಟ್ಟುಕೊಂಡು ಶ್ರೀನಗರಕ್ಕೆ ಹೋಗಿ ಅನುಕೂಲವಾದ ಮನೆಯೊಂದನ್ನು ಗೊತ್ತುಮಾಡಿ ಬಳಿಕ ನಿನ್ನನ್ನು ಕರೆಯಿಸಿಕೊಳ್ಳುವೆನು. ಇದೇ ದಿನವೇ ನಿನ್ನ ಹೆಸರಿಗೆ "ಸತೀಹಿತಬೋಧಿನಿ” "ಪಾತಿವ್ರತ್ಯ"  "ಸ್ತ್ರೀಧರ್ಮನೀತಿ" “ ಸಾಧ್ವೀಹಿತಸೂಚಿನಿ" ಎಂಬ ನಾಲ್ಕು

ಪುಸ್ತಕಗಳನ್ನು ಭಾಂಗಿಮಾಡಿ ಕಳುಹಿಸಿರುವೆನು. ಪುಸ್ತಕಗಳನ್ನು ಚೆನ್ನಾಗಿ ಓದುವದಲ್ಲದೆ ನಿನ್ನ ಸಮಯವನ್ನು ಒಳ್ಳೆಯ ರೀತಿಯಲ್ಲಿ ವಿನಿಯೋಗಿಸುತ್ತಿರಬೇಕು.