ಪುಟ:ರಾಮರಾಜ್ಯ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನೇಳನೆಯ ಹರಣ ಪ್ರದೇಶ:- ಮರೀತೀರದಲ್ಲಿ ಯಜ್ಞಶಾಲೆ. ಯಜ್ಞಶಾಲೆಯು ಜನಸನ್ನುದ್ಧವಾಗಿರುವುದು. ಶ್ರೀರಾಮನು ಯಜ್ಞದೀಕ್ಷೆಯನ್ನು ವಹಿಸಿ ರತ್ನ ಪೀಠದಲ್ಲಿ ಕುಳಿತಿರುವನು. ಭರತ ಲಕ್ಷಣ-ಶತ್ರುಘ್ನರು ಪ್ರಯುಕ್ತ ಕಾರಗಳಲ್ಲಿ ನಿರತರಾಗಿರುವರು. ವಸಿದ್ಧಾದಿ ಮಹರ್ಷಿಗಳು ವೇದಮಂತ್ರಗಳನ್ನು ಪಠಿಸುತ್ತಿರುವರು. ಸ್ತ್ರೀಯರು ಮಂಗಳ ಗೀತವನ್ನು ಹಾಡುತ್ತಿರುವರು. ವಿವಿಧ ವಾದ್ಯ ಗಳು ಭೋರ್ಗರೆಯುತ್ತಿರುವುವು. ವಸಿ:-ರಾಮಚಂದ್ರಾ! ಈ ಉತ್ತಮಾಕ್ಷದ ಕೊರಳಿಗೆ ಪುಷ್ಪಹಾರವನ್ನಲಂಕರಿಸು. ಶ್ರೀರಾಮು:-(ಯಜ್ಞಾರ್ಶಕ್ಕೆ ಪುಷ್ಪಹಾರವನ್ನು ಹಾಕುವನು.) ವಸಿಷ್ಠ:-ಈ ಹಲಗೆಯನ್ನು ಅದರ ಮುಖಕ್ಕೆ ಬಂಧಿಸು, ಶ್ರೀರಾಮು:-(ಸಾರ್ವಭೌಮತ್ವ ಸೂಚಕವಾದ ಹಲಗೆಯನ್ನು ಕುದುರೆಯ ಹಣೆಗೆ ಕಟ್ಟುವನು.) ವಸಿಷ್ಠ:-ಇನ್ನು ಕುದುರೆಯನ್ನು ಬಿಡಬಹುದು. ಶ್ರೀರಾಮ:-ಶತ್ರುಘಾ ! ನೀನೀಕುದುರೆಯೊಂದಿಗೆ ಸೈನ್ಯ ಪರಿ ವಾರ ಸಮೇತನಾಗಿ ತರಳಿ ದಿಗ್ವಿಜಯ ಶೀಲನಾಗಿ ಬಾ ! ಕತ್ರುಘ್ನ:-ಅಪ್ಪಣೆ. [ಕತ್ರುಘ್ನನು ಸೇನಾಪರಿವಾರ ಸಮೇತನಾಗಿ ಅಕ್ಕದೊಂದಿಗೆ ಅರಳುವನು.] ಹದಿನೆಂಟನೆಯ ಪಕರಣ. ಪ್ರದೇಶ:- ಅರಣ್ಯ ಭೂಮಿ. ವಾಲ್ಮೀಕಾಕ್ರಮ ಸಂವ ವನಭೂಮಿಯಲ್ಲಿ, ಲವಕುಮಾರ ನು ಮುನಿಪುತ್ರರೊಂದಿಗೆ ವಿಹರಿಸುತ್ತಿರುವನು. 10