ಪುಟ:Abhaya.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸರಸಮ್ಮ ಎಷ್ಟ್ಟೋ ಹುಡುಗಿಯರ ಕರುಣ ಕಥೆಗಳನ್ನು ಕೇಳಿದ್ದ ಅನುಭವಿ. ಅಭಯಧಾಮಕ್ಕೆ ಬಂದ ಯಾವ ಹುಡುಗಿಯೂ ಭಾವನೆಗಳನ್ನು ಹತ್ತಿಕ್ಕೆ ತನ್ನ ಬದುಕಿನ ಬಗೆಹೆ ಒಣವರದಿಯನ್ನೆಂದು ಒಪ್ಪಿಸಿರಲಿಲ್ಲ. ಇಲ್ಲವೆ, ಉಪ್ಪುಖಾರ ಸೇರಿಸಿ ಸ್ಪಷ್ಟನೆಯ ರಮ್ಯ ಕಧೆಯನ್ನು ಹೇಳಿರಲಿಲ್ಲ. ತುಂಗಮ್ಮನೂ ಅಷ್ಟೇ...

ಮಾತುಗಳು ತುಂಡು ತುಂಡಾಗಿ ಬರುತಿದ್ದವು.ಘಟನೆಗಳ ನಿರೂಪಣೆಯಲ್ಲಿ ಕ್ರಮಬದ್ಧತೆ ಇರಲಿಲ್ಲ ಯಾವುದಾದರೊಂದು ವಿಷಯ ಮೊದಲು ಮರೆತು ಹೋಗಿ, ನೆನಪಾದ ಮೇಲೆ ಹೊರಬರುತಿತ್ತು.

ಆದರೆ ಸರಸಮ್ಮ ಅಷ್ಟೆಲ್ಲವನ್ನೂ ಸರಿಯಾಗಿ ಜೋಡಿಸಲಲು ಸಮಥರಾಗಿದ್ದರು. ತುಂಗಮ್ಮನ ಮಾತಿನ ಸರಣಿ ಕಡಿಕಡಿದು ಬಂದಂತೆ, ಲಜ್ಜೆಗೊಂಡು ಆಕೆ ಹೇಳದೇ ಇದ್ದುದನ್ನೂ ಸರಸಮ್ಮ ಊಹಿಸಿಕೊಳ್ಳುತಿದ್ದರು. ಅವರ ಪಾಲಿಗೆ ತುಂಗಮ್ಮನ ಜೀವನ ತೆರೆದ ಪುಸ್ತಕವಾಗಿತ್ತು.

ತಂದೆ ತನ್ನನ್ನೂ ಮಾವಳ್ಳಿಯಮನೆಯಲ್ಲಿ ಬಿಟ್ಟು ಹೋದುದ್ದನ್ನು ತಿಳಿಸಿದ್ದ ಮೇಲೆ ತುಂಗಮ್ಮ ಸುಮ್ಮನಾದಳು.

ಸರಸಮ್ಮನೂ ಮಾತನಾಡಲಿಲ.

ಆ ಮೌನದ ವಿರಾಮ ಅವಶ್ಯವಾಗಿತ್ತು.

ನಿದ್ದೆ ಹೋಗಿದ್ದ ಜಲಜ ಅತ್ತಿಂದಿತ್ತ ಹೊರಳಿದಳು. ಹುಡುಗಿ ಎದ್ದಳೇನೋ ಎಂದು ಕೊಂಡರು ಸರಸಮ್ಮ. ಅವರ ಕೆಲಸವಾಗಿಯೇ ಇರಲಿಲ್ಲ. ಬರೆದುಕೊಳ್ಳುವ ದೊಡ್ಡ ಪುಸ್ತಕ ಮುಚ್ಚಿಕೊಂಡು ಮೇಜಿನ ಮೇಲೆ ನಿದ್ದೆ ಹೋಗಿತ್ತು. ವೃತ್ತಿ ಶಿಕ್ಷಣದ ತರಹತಿ ನಡೆಯುತಿತ್ತು ಹೊರಗೆ ಅಲ್ಲಿ ಸಣ್ಣನೆ ನಗುತಿದ್ದರು ಯಾರೋ. ಮೂಗಿ ಕಲ್ಯಾಣಿಯ ಕಿಕಿವಿಕಿ ಮಾತೂ ಕೇಳಿಸುತಿತ್ತು...