ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧L ಶ್ರೀಮದ್ಭಾಗವತರ ಅಭ್ಯಾ. . ದೆಯು ತನಗೆ ಹೇಳಿಕೊಟ್ಟಿದ್ದ ಆ ಸಂಹಿತೆಯನ್ನು ಐದಾಗಿ ವಿಭಾಗಿಸಿ, ವಾ ತ್ಯ, ಮುದಲ, ಶಾಲೀಯ, ಗೌಶಲ್ಯ,ಶಿಶಿರರೆಂಬ ತನ್ನ ಐದುಮಂದಿ ಶಿಷ್ಯ ರಿಗೆ ಹೇಳಿಕೊಟ್ಟನು. ಶಾಕಲ್ಯನ ಶಿಷ್ಯನಾದ ಜಾತುಕರ್ಣನೆಂಬವನು, ತನಗೆ ಉಪದಿಷ್ಟವಾದ ಸಂಹಿತೆಯನ್ನು ನಿರುಕ್ತವೆಂಬ ವೈದಿಕಸದವ್ಯಾಖ್ಯಾನ ಹೊಡಸಿ ನಾಲ್ಲಾಗಿ ವಿಭಾಗಿಸಿ, ತನ್ನ ಶಿಷ್ಯರಾದ ಬಾಲಾಕ, ಹೈಂಜ, ವೈತಾಳ, ವಿರಜರೆಂಬ ನಾಲ್ವರಿಗೆ ಉಪದೇಶಿಸಿದನು. ಬಾಷ್ಕಲ ಪುತ್ರನಾದ ಬಾಪ್ಪಲಿಯು, ಹಿಂದೆ ಹೇಳಿದ ಎಲ್ಲಾ ಶಾಖೆಗಳಿಂದ ಲೂ ಸಂಗ್ರಹಿಸಿ, ವಾಲಖಿಲ್ಯಯೆಂಬ ಶಾಖೆಯೊಂದನ್ನು ರಚಿಸಿ, ಪೈಲಾ ಯನಿ, ಗಾರ್ಗಿ, ಕಾಸಾರರೆಂಬ ತನ್ನ ಮೂವರು ಶಿಷ್ಯರಿಗೆ ಉಪದೇಶಿ ಸಿದನು. ಇವೆಲ್ಲವೂ ಬಳಸಂಹಿತಗಳು. ಇವು, ಹಿಂದೆ ಹೇಳಿದ ಬ್ರಹ್ಮ ರ್ಷಿಗಳಿಂದ ಪ್ರಚಾರಕ್ಕೆ ಬಂದವು. ಓ ! ಶೌನಕಾದಿಗಳೇ! ಈ ಛಂದೋವಿ ಭಾಗಗಳನ್ನು ಕೇಳಿದಮಾತ್ರದಿಂದಲೇ ಜನರು ಪಾಪವಿಮುಕ್ತರಾಗುವರು. ಆ ಯಜುರ್ವೇದ ವಿಭಾಗವwww ಇನ್ನು ರೈತರೀಯಶಾಖೆಯ ಉತ್ಪತ್ತಿ ಕ್ರಮವನ್ನು ತಿಳಿಸುವೆನು ಈ ಳಿರಿ ವೈಶಂಪಾಯನನಿಗೆ ಚರಕರೆಂದೂ, ಆಧ್ಯರುಗಳೆಂದೂ, ಎರಡುಬಗೆಯ ಶಿಷ್ಯವರ್ಗಗಳಿದ್ದುವು. ಇವರಲ್ಲಿ ಅಧ್ಯಕ್ಯಶಾಖೆಯನ್ನು ಅಧ್ಯಯನಮಾಡು ಇಬಂದವರು ಆಧ್ಯರುಗಳೆನಿಸಿಕೊಂಡರು. ಬ್ರಹ್ಮಹತ್ಕಾಪಾತಕವನ್ನು ನೀ ಗಿಸತಕ್ಕುದಾಗಿ, ತಮ್ಮ ಗುರುಗಳಿಂದ ಅನುಷಿ ಸಲ್ಪಟ್ಟ ಒಂದಾನೊಂದು ವ್ರತಾಚರಣೆಯನ್ನು ಹಿಡಿದವರು ಚರಕರೆನಿಸಿಕೊಂಡರು. ಇವರಲ್ಲಿ ವೈಶಂ ಪಾಯನ ಶಿಷ್ಯನಾದ ಯಾಜ್ಞವಲ್ಕನೆಂಬವನು, ಒಮ್ಮೆ ತನ್ನ ಗುರು ವನ್ನು ನೋಡಿ «ಓ : ಪೂಜ್ಯಾ! ಸತ್ವ ಸುಲಭವಾದ ಈ ತಪಸ್ಸಿನಿಂದೇನು ? ಇದಕ್ಕಿಂತಲೂ ದುಷ್ಕರವಾದ ವ್ರತವನ್ನು ನಾನು ಹಿಡಿಯುವೆನು" ಎಂದನು. ಅದಕ್ಕಾ ವೈಶಂಪಾಯನನು ಬ್ರಾಹ್ಮಣರನ್ನು ಅವಮಾನಿಸತಕ್ಕ ಈ ಗರ್ವದ ಮಾತಿಗೆ ಕೋಪಿಸಿಕೊಂಡು «ಓ! ಯಾಜ್ಞವಲ್ಕಾ! ಇನ್ನು ಸಾಕು ಹೋಗು! ಇದುವರೆಗೆ ನೀನು ನನ್ನಿಂದ ಅಧ್ಯಯನಮಾಡಿದ ಶಾಖೆಗೆ ಇನ್ನು ಇಲ್ಲಿಯೇ ಬಿಟ್ಟು ಹೊರಟುಹೋಗು” ಎಂದನು. ದೇವರನ ಮನ