ಪುಟ:ಪ್ರಬಂಧಮಂಜರಿ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಬಂಧ, ೩೧ (a) 1, ಈಸೋಪನ ಕಥೆಗಳಂಥ ಕಟ್ಟು ಕಥೆಗಳ ತಾತ್ಪರ್ಯವನ್ನು ಸೂಕ್ಷ್ಮವಾಗಿ ತಿಳಿಸಿದರೆ ಕಥೆಯನ್ನು ಲಂಬಿಸಿ ಬರೆವುದು, ಇಂಥ ಕಥೆಗಳು ನೀತಿಬೋಧಕವಾಗಿರುವುದರಿಂದ, ನೀತಿ ತೋರತಕ್ಕ ಭಾಗಗಳನ್ನು ಚೆನ್ನಾಗಿ ವಿವರಿಸಿ ಬರೆಯಬೇಕು. ಕೊನೆಯಲ್ಲಿ ಆ ನೀತಿಯನ್ನೂ ಸೂಚಿಸಬೇಕು. ಸಿಂಹವೂ ಇಲಿಯ. ಒಂದು ಸಿಂಹವು ಬಳಲಿ ಗುಹೆಯಲ್ಲಿ ನಿದ್ರೆ ಮಾಡುತ್ತಿತ್ತು-ಒಂದು ಇಲ್ಲಿ ಅದರ ಮೇಲೆ ಹರಿಯಿತು-ಸಿಂಹವು ಥಟ್ಟನೆ ಎದ್ದು ಇಲಿಯನ್ನು ಕೊಲ್ಲ ಹೋಯಿತು. ಇಲ್ಲಿ ಬೇಡಿಕೊಂಡಿತ:-ಸಿಂಹವು ಅಷ್ಟು ದೊಡ್ಡ ಪ್ರಾಣ, ಇಲಿ ಅಲ್ಪ ಜಂತು-ಸಿಂಹದ ಒಪ್ಪಿಗೆ-ಸ್ವಲ್ಪ ಕಾಲದ ಮೇಲೆ ಸಿಂಹವು ಬಲೆಯಲ್ಲಿ ಸಿಕ್ಕಿಬಿದ್ದಿತು-ಇಲಿ ಅದನ್ನು ಬಿಡಿಸಿತ್ತು ತೋರುವ ನೀತಿ:-ಉಪಕಾರಕ್ಕೆ ಪ್ರತ್ಯುಪಕಾರ ಮಾಡಬೇಕು 2. ಪುರಾಣದ ಕಥೆಯನ್ನೂ ಚರಿತ್ರೆಗೆ ಸಂಬಂಧಿಸಿದ ಕಥೆಯನ್ನೂ ಬರೆವಾಗ ಕೆಲಸಕ್ಕೆ ಬಾರದ ಅಲ್ಪ ವಿಷಯಗಳಿಗೆ ವಿಶೇಷ ಅವಕಾಶಕೊಡದೆ ಕಥೆಯ ಮುಖ್ಯ ಭಾಗವನ್ನು ಸ್ಪಷ್ಟ ಪಡಿಸುವುದು. ಪುರಾಣದ ಕಥೆಯು ಬೋಧಿಸುವ ನೀತಿಯನ್ನೂ ವಿವರಿಸಬೇಕು.


(b) ಕಾಲಂಡಿನ ಸಂತ (A Football Match). ಇದರ ವಿಷಯದಲ್ಲಿ ಮೊದಲು ಗುರುತು ಹಚ್ಚಿ ಕೊಳ್ಳಬೇಕಾದ ಮುಖ್ಯಾಂಶಗಳು: -

1. ಪೀಠಿಕೆ, 2. ಪಂತದ ವರ್ಣನೆ. 3. ಸಮಾಪ್ತಿ. - ಹೀಗೆ ಹೆಗ್ಗುರುತುಗಳನ್ನು ದೂರ ದೂರ ಬರೆದ ಬಳಿಕ ಸಣ್ಣ ಸಣ್ಣ ಅಂಶಗಳನ್ನು ಆಲೋಚಿಸಿ ನಡುನಡುವೆ ಸೇರಿಸಬೇಕು. ಹೇಗೆಂದರೆ:- 1, ಪೀಠಿಕೆ:-ಕಾಲ್ಬಂಡಾಟದ ಪ್ರಾಬಲ್ಯ-ಬಹುಮಾನಕ್ಕಾಗಿ ನಡೆವ ಪಂತಗಳು. ಯಾರು ಯಾರಿಗೆ - ಮೈಸೂರು ಕಾಲೇಜಿನವರಿಗೂ ಬೆಂಗಳೂರು ಕಾಲೇಜಿನವರಿಗತಿ-ಇವರಿಬ್ಬರಿಗೂ ಬಹಳ ಪೋಟಾಪೋಟಿ-ಈಸಲ ಎಲ್ಲರಿಗೂ ಅತ್ಯಾದರ-ಅದಕ್ಕೆ ಕಾರಣ: ನಾಲ್ಕು ವರ್ಷಗ• ಳಿಂದ ಆಡಿದುದರಲ್ಲಿ ಎರಡು ವರ್ಷ ಒಬ್ಬರು ಗೆದ್ದಿರುವುದು, ಇನ್ನೆರಡು ವರ್ಷ ಇನ್ನೊಬ್ಬರು ಕಾಲಸ್ಥಿತಿ: ಮಳೆಯಿಲ್ಲ, ಬಿಸಿಲೂ ಇಲ್ಲ ; ಮೋಡ-ಅನುಕೂಲ. ಕಾಲ |