ಪುಟ:ಪ್ರಬಂಧಮಂಜರಿ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುದುರೆ, ೪೬ ತಕ್ಕಂತೆ ದೊಡ್ಡದಾಗಿಯೂ ಉದ್ದವಾಗಿಯೂ ಇದೆ. ಕಿವಿಗಳು ತಲೆಯ ಮೇಲೆ ನೆಟ್ಟಗೆ ನಿಂತಿವೆ. ಕುದುರೆಯ ಕಣ್ಣಿಗೆ ಹುಬ್ಬಿಲ್ಲ. ಮೇಲುರೆಪ್ಪೆಗೆ 'ಮಾತ್ರ ಕೂದಲು ಇದೆ, ತುಟಿಗಳು ಮಂದವಾಗಿಯೂ ಬೇಕಾದಕಡೆಗೆ ತಿರುಗಿಸುವಂತೆಯೂ ಇವೆ. ಮೂಗಿನ ಸೊಳ್ಳೆಗಳು ಅಗಲ, ಕುತ್ತಿಗೆ ಉದ್ದವಾಗಿ ಬಾಗಿದೆ. ಅದರ ಮೇಲೆ ಕೇಸರವೆಂಬ ಉದ್ದವಾದ ಕೂದಲುಗಳಿವೆ. ಬೆನ್ನು ಬಾಗಿದೆ. ಮೈ ಉದ್ದವಾಗಿಯೂ, ಅದರ ಮೇಲಿನ ಚರ್ಮವು ದಪ್ಪವಾಗಿಯೂ ಇದೆ. ಚರ್ಮದ ಮೇಲೆ ನುಣವೂ ಹೊಳವೂ ಇರುವ ಸಣ್ಣ ಕೂದಲುಗಳಿವೆ. ಬಾಲವು ದಪ್ಪ, ತುದಿಯಲ್ಲಿ ಕೂಚು, ಮತ್ತು ವಿ. ಯೆಂಬ ಉದ್ದವಾದ ಕೂದಲುಳ್ಳದ್ದು. ಮುಂಗಾಲುಗಳು ನೆಟ್ಟ ಗೂ ಹಿಂಗಾಲುಗಳು ಸ್ವಲ್ಪ ಬಾಗಿಯೂ ಇವೆ. ಪಾದಗಳು ಎರಡು ಸಾಲಾಗಿ ಬಿರಿಯದೆ ಗುಂಡಾಗಿ ಉಂಡೆಯಾಗಿವೆ. ಒಂದೊಂದು ಜಾತಿಯ ಕುದುರೆ ಒಂದೊಂದು ವಿಷಯದಲ್ಲಿ ಪ್ರಸಿದ್ದಿ ಹೊಂದಿದೆ. ಅರಬೀ ಕುದುರೆ ಹೆಚ್ಚು ಸೌಂದರ್ಯವುಳ್ಳದ್ದು. ಇದಕ್ಕೆ ಬಹಳ ಹಗುರವಾದ ಮೈಯ, ಉದ್ದವಾಗಿ ಕಮಾನಿನಂತಿರುವ ಕು. ಗೆಯೂ, ದೀರ್ಘವಾಗಿ ತೆಳುವಾದ ಕಾಲುಗಳೂ ಇವೆ. ಈ ತರದ ಕುದುರೆಗೆ ಇರುವ ವೇಗವೂ ದಾರ್ಥ್ಯವೂ ಮತ್ತಾವಜಾತಿಯ ಕುದುರೆಗೂ ಇಲ್ಲ. ಜೂಜಿನಕುದುರೆಗೆ ಕಾಲು ಉದ್ದವು ಮತ್ತು ಕೃಶವು.ಮೈ ರೇಷ್ಮೆಯಂತೆ ಹೊಳೆವುದು. ಪೈಗೊ ಕುದುರೆ ಗಿಡ್ಡಾಗಿಯೂ ಬಲವಾಗಿಯೂ ಅಂದವಾಗಿಯೂ ಇದೆ. ಇದರ ಮೈ ಗುಂಡಾಗಿ ವಿಶೇಷ ಕೂದಲುಳ್ಳದ್ದು. ಗಾಡಿ ಕುದುರೆಯ ಕಾಲುಗಳು ದಪ್ಪ ಮತ್ತು ಮೋಟು .ಗೊರಸುಗಳು ದೊಡ್ಡವು. ನಾಲ್ಕೆತ್ತುಗಳುಎಳೆವ ಭಾರವನ್ನು ಇದೊಂದೇ ಎಳೆವುದು;ಆದರೆ ಬೇಗನೆ ಓಡಲಾರದು. ಕುದುರೆ ಒಹಳ ಬುದ್ದಿಯುಳ್ಳ ಪ್ರಾಣಿ. ಇದಕ್ಕೆ ಜ್ಞಾಪಕ ಶಕ್ತಿ ಹೆಚ್ಚು. ಚೆನ್ನಾಗಿ ಸಾಕಿದರೆ ಒಡೆಯನಲ್ಲಿ ಬಹಳ ಪ್ರೀತಿ ತೋರಿಸುತ್ತದೆ; ಅವನನ್ನು ಎಂದಿಗೂ ಮರೆವುದಿಲ್ಲ; ಅವನಿಗೆ ಬಹಳ ವಿಧೇಯವಾಗಿರುತ್ತದೆ, ಒಡೆಯನ ಧ್ವನಿಯನ್ನು ತಿಳಿದುಕೊಳ್ಳಬಲ್ಲುದು, ಸಾಮಾನ್ಯವಾಗಿ ಕುದುರೆಯು ನಿಂತುಕೊಂಡೇ ನಿದ್ರಿಸುವುದು; ಕೆಲವೇಳೆ ಕಾಲುಚಾಚಿಕೊಂಡು ಮಲಗುವುದೂ