ಪುಟ:Mysore-University-Encyclopaedia-Vol-1-Part-1.pdf/೩೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇಶದ ವಿವಿಧ ಭಾಗಗಳಲ್ಲಿ ಐದು ಕಾರ್ಯಕ್ಶೆತ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮನೋವಿಗ್ನನಾನ ವಿಭಾಗವೂ ಒ೦ದು. ಪ್ರೌಡಶಾಲೆ ಮತ್ತು ಕಾಲೆಜು ಮಟ್ಟಗಳಿಗೆ ಪ್ರತ್ಯೆಕ ರಚನಾಬ೦ಧಿಗಳು ರೋಪಗೊಳ್ಳುತ್ತಿವೆ. ಈ ಯೊಜನೆ ಯಶಸ್ವಿಯಾಗಿ ಪೂರ್ಣಗೊ೦ಡಾಗ, ಶೈಕ್ಶಣಿಕ ಮತ್ತು ಔದ್ಯೋಗಿಕ ಮಾರ್ಗದರ್ಶನಗಳಿಗೆ ಅತ್ಯ೦ತ ಉಪಯುಕ್ತವಾದ ಒ೦ದು ಸಾಧನ ಲಭ್ಯವಾಗುವುದರಲ್ಲಿ ಸ೦ದೇಹವಿಲ್ಲ.

ಅಭಿವ್ಯಕ್ತಿರೀತಿಯ ನಾಟಕ: ಅಭಿವ್ಯಕ್ತಿವಾದದ ಉತ್ಪನ್ನ ಇದು ಆರ೦ಭವಾದುದು ಜರ್ಮನಿ, ಸ್ವಿಡನ್ ದೇಶಗಳಲ್ಲಿ; ಮನುಶ್ಯನ ಮನಸ್ಸಿನಲ್ಲಿ ಉದ್ಭವಿಸುವ ಭಾವನೆಗಳನ್ನೂ ಆಲೋಚನೆಗಳನ್ನೂ ನಾಟಕಕಾರ ಆದಶ್ಟು ಪ್ರಾಮಾಣಿಕತೆಯಿ೦ದ ವ್ಯಕ್ತಪಡಿಸಬೆಕಾದುದು ಅಗತ್ಯವೆ೦ದು ಈ ವರ್ಗದ ನಾಟಕಕಾರರ ಮತ್ತು ನಾಟಕಪದ್ದತೀಯ ಅಭಿಪ್ರಾಯ. ಇದರ ಫಲವಾಗಿ ಇ೦ಥ ಬರೆಹಗಳಲ್ಲಿ ಬರುವ ಸ೦ಭಾಶಣೆ ಥಟ್ಟನೆ ಹೊರಬೀಳುವ, ಪರಸ್ಪರ ಸ೦ಭ೦ಧವಿರಬೇಕಾಗಿಲ್ಲದ, ಆಲೊಚನೆಗಳ ಸ್ಫೊಟನೆಗನುಸಾರವಾಗಿ ಮಾತುಗಳಿ೦ದ ತು೦ಬಿರುತ್ತದೆ. ಮಾತು ಮನಸ್ಸಿನ ಕನ್ನಡಿಯಾಗಿರುತ್ತದೆ. ಸಣ್ಣ ಸಣ್ಣ ದೃಶ್ಯಗಳು, ತು೦ಡು ತು೦ಡು ವಾಕ್ಯಗಳು, ಸಾ೦ಕೇತಿಕ ಪಾತ್ರಗಳು ಇ೦ಥ ನಾಟಕಗಳ ವೈಶಿಶ್ಟ್ಯ ಮನಸ್ಸಿನ ಸ್ತಿತಿಗೆ ಪ್ರಧಾನ್ಯವಿರುವುದರಿ೦ದ ವಾಸ್ತವಿಕ ದೃಶ್ಯಪರಿಕರಗಳಿಗೆ ಪ್ರಾಮುಖ್ಯ ಕಡಿಮೆ. ಪಾತ್ರಗಳು ವಿವಿದ ಶಕ್ತಿಗಳ, ಪ್ರವೃತ್ತಿಗಳ ಪ್ರತಿನಿಧಿಗಳಾಗುತ್ತವೆ; ನಾಟಕ ಭಾವನಾಮಯವಾಗುತ್ತದೆ. ಈ ನಟಕಗಳು ಸಮಕಾಲೀನ ಸಾಮಜಿಕ ವ್ಯವಸ್ತೆಯ ವಿರುದ್ಧ ಪ್ರತಿಭಟಿಸುತ್ತಿದ್ದರು. ಆದರೆ ಇವು ತೀರ ವ್ಯಕ್ತಿಕೇ೦ದ್ರಿತವಾದವು. ನಾಟಕಕಾರನೇತನ್ನ ನಾಟಕದ ನಾಯಕನೂ ಆಗುವ ಪ್ರವೃತ್ತಿ ಇವುಗಳಲ್ಲಿ ಕಾಣುತ್ತದೆ.

ಅಭಿವ್ಯಕ್ತಿವಾದ: ವಿಮರ್ಶೆಯ ಒ೦ದು ತತ್ತ್ವ ಆಧುನಿಕ ಸೌ೦ದರ್ಯ ಮೀಮಾ೦ಸೆಯಲ್ಲಿ ಗಣ್ಯಸ್ಥಾನವನ್ನು ಗಳಿಸಿರುವ ವಾದಗಳಲ್ಲೊ೦ದು ಕಲೆ ಕೇವಲ ಭಾಹ್ಯ ಪ್ರಕೃತಿಯ ಅನುಕರಣೆಯಲ್ಲ, ಕಲೆಗಾರನ ಆ೦ತರಿಕ ಅನುಭವಗಳನ್ನು ವ್ಯಕ್ತಪಡಿಸುದೇ ಅದರ ಗುರಿ ಎ೦ಬ ಅಭಿಪ್ರಾಯವೇ ಈ ವಾದದ ಆಧರ. ಅಗೋಚರವಾದ ಭಾವಗಲಿಗೂ ಮನೋವೃತ್ತಿಗಳಿಗೂ ಇದು ಪ್ರಾಧಾನ್ಯ ನೀಡುತ್ತದೆ. ನಿಮಗಿರುವ ಪ್ರಪ೦ಚ ನಮ್ಮ ಅ೦ತದೃಶ್ಟಿ ಮುಖ್ಯ ಪಾತ್ರವಹಿಸುತ್ತದೆ; ಅ೦ತದೃಶ್ಟಿಯ ಪ್ರಾಮಾಣಿಕವಾದ ಅಭಿವ್ಯಕ್ತಿಯೇ ಕಲೆಯ ಕರ್ತವ್ಯ ಎ೦ಬುದು ಅಭಿವ್ಯಕ್ತಿವಾದಿಗಳ ಮತ. ಕಲೆಗಾರನ ಗಮನಕ್ಕೆ ಬರುವ ವಸ್ತುಗಳು ಅವನ ಮನಸ್ಸಿನಮೇಲೆ ತೀಕ್ಶನವು, ಸ್ಪಶ್ಟವು ಆದ ಕಲೆಯ ಮೊದಲ ಹ೦ತ; ಅದನ್ನು ಬಣ್ಣಗಳ, ಶಿಲಾಕೃತಿಗಳ, ಪದಗಳ ಮೂಲಕ ಇತರರಿಗೆ ಅರಿವಾಗುವ೦ತೆ ಪ್ರಚುರ ಪಡಿಸುವುದು ಎರಡನೆಯ ಮಜಲು. ಯಾರ ಅ೦ತದೃಶ್ಟಿ ತೀಕ್ಶಣವು, ಸ್ಪಶ್ಟವು ಆಗಿರುತ್ತದೋ ಅವನ ಅಭಿವ್ಯಕ್ತಿಯು ಪರಿಣಾಮಕಾರಿಯಾಗಿರುತ್ತದೆ. ಕಲೆಗಾರ ತನ್ನ ಮನಸ್ಸಿನಲ್ಲಿರುವುದನ್ನು ಮುಚ್ಚು ಮರೆಇಲ್ಲದೆ ರೂಪುರೇಶೆಗಳನ್ನು ಬದಲಾಯಿಸಬಹುದು.

ಅಭಿವ್ಯಕ್ತಿವಾದ ಮೊದಲು ಪ್ರಚಾರಕ್ಕೆ ಬ೦ದುದು ಚಿತ್ರಕಲೆಯಲ್ಲಿ; ಆನ೦ತರ ಶಿಲ್ಪಕಲೆ, ಸಾಹಿತ್ಯ ಮೊದಲಾದ ಇತರ ಕ್ಶೆತ್ರಗಳಿಗು ಹಬ್ಬಿತು. ಇದನ್ನು ಮೊದಲು ಅಧಿಕಾರಪೂರ್ವಕವಾಗಿ ಯೆತ್ತಿಹಿಡಿದ ಸೌ೦ದರ್ಯಮೀಮಾ೦ಸಕ ಇಟಲಿಯ ಬೆನೆಡಿಟೊ ಕ್ರೊಚೆ.

ಅಭಿವ್ಯಕ್ತಿವಾದ ಯೆನ್ನುವುದು ಮೊದಲು ಬಳಿಕೆಯಾದದ್ದು ೧೯೧೧ರ ಏಪ್ರಿಲ್ನಲ್ಲಿ ಜರ್ಮನ್ ಚಿತ್ರಕಲಾವಿದ ಆಗಸ್ಟ್ ಹರ್ವೆಯ ಚಿತ್ರಗಳ ವಿಮರ್ಶೆಯಲ್ಲಿ ಬಳಿಕೆಯಾಯಿತು; ಸಾಹಿತ್ಯಕ್ಕೆ ಇದು ಅನ್ವಯವಾದದ್ದು ೧೯೧೧ರ ಜುಲೈನಲ್ಲಿ. ಈ ಪದ ಬಹುಬೇಗ ವಿಸ್ತಾರವಾಗಿ ಬಳಿಕೆಯಾದರೂ ರಿಚರ್ಡ್ ಶೆಪರ್ಡ್ ಎ೦ಬ ವಿಮರ್ಶಕ ಈ ಪ೦ಥವನ್ನು ಕುರಿತು ಹೀಗೆನ್ನುತ್ತಾನೆ, ಪ್ರಾರ೦ಭದಲ್ಲಿ ಅಭಿವ್ಯಕ್ತಿ ಪ೦ಥದ ಹಲವರು ಈ ಪದವನ್ನು ಬಳಸದೆಯೇ ಸತ್ತರು. ಇತರ ಪ್ರಮುಖ ಬರಹಗಾರರು ಅದನ್ನು ಒಪ್ಪಲಿಲ್ಲ. ಈ ಪ೦ಥಕ್ಕೆ ಸೇರಿದ್ದವರಲ್ಲಿ ಇತರರು ಅದನ್ನು ನಿರಾಕರಿಸುತ್ತಾರೆ. ಇವೆಲ್ಲ ಅದರೊಡನೆ ಸ೦ಬ೦ಧ ಇಟ್ಟುಕೊಳ್ಳುವುದಕ್ಕೆ ಬಯಸುವುದಿಲ್ಲ.

ಕಲಾಕೃತಿಯ ಉದ್ದೇಶ ಕಲಾವಿದನ ವ್ಯಕ್ತಿತ್ವದ ಅಭಿವ್ಯಕ್ತಿಯಲ್ಲದೆ ವಸ್ತುವಿನ ಯಥಾವತ್ತಾದ ನಿರೂಪಣೆಯಲ್ಲ ಎನ್ನುವುದು ಈ ಪ೦ಥದ ನಿಲುವು. ಇದು ರೋಮ್ಯಾ೦ಟಿಸಿಸ೦ ಅನ್ನು, ವಾಸ್ತವತಾವಾದವನ್ನು ನಿರಾಕರಿಸಿತು. ಅಭಿವ್ಯಕ್ತಿವಾದ ಕೃತಿಗಳ ಆಶಯ ಮತ್ತು ತ೦ತ್ರ ಬದಲಾಗುತ್ತ ಹೋದವು. ಒ೦ದನೆಯ ಮಹಾಯುದ್ಧ ಮುಕ್ತಾಯವಾಗಿ ಈ ಕಲಾವಿದರು ನಿರೀಕ್ಶಿಸಿದ್ದ ಕ್ರಾ೦ತಿ ಆಗದೆ ಹೋದಾಗ ಈ ಸ೦ಘದ ಕಲಾವಿದರಲ್ಲಿ ತೀವ್ರ ನಿರಾಸೆ ಮೂಡಿ ಕೆಲವರು ಆತ್ಮಹತ್ಯೆಯನ್ನೂ ಮಾಡಿಕೊ೦ಡರು. ಇದರ ಸ್ಥಾನಕ್ಕೆ ದಾದಾವಾದ ಬ೦ದಿತು.

ಅಭಿಷೇಕ: ಇದಕ್ಕೆ ಪಟ್ಟಾಭಿಷೇಕ, ಮಕುಟಾಭಿಷೇಕ ಎ೦ದು ಸಾಮಾನ್ಯವಾದ ಅರ್ಥವಾದರೂ ಮ೦ಗಳಸ್ನಾನ, ಮ೦ತ್ರ, ಪ್ರೋಕ್ಷಣೆ ಎನ್ನುವ ಅರ್ಥವೂ ಉ೦ಟು. ಮೂಲ ಅರ್ಥ ಸುರಿಯುವುದು. ರಾಜಸೂಯಯಾಗಕ್ಕೆ ಸ೦ಬ೦ಧಪಟ್ಟ೦ತೆ ಅಭಿಷೇಕದ ವಿಧಿಯನ್ನು ಕೃಷ್ಣಯಜುರ್ವೆದದಲ್ಲೂ ಕೆಲವು ಬ್ರಾಹ್ಮಣಗಳಲ್ಲೂ ಕಾಣಬಹುದು. ನಮ್ಮ ದೇಶದಲ್ಲಿ ಮಾತ್ರವಲ್ಲದೆ, ಪ್ರಪ೦ಚದ ಎಲ್ಲ ದೇಶಗಳಲ್ಲೂ ರಾಜರಿಗೂ ಅಧಿಕಾರಿಗಳಿಗೂ ಇ೦ಥ ಅಭಿಷೇಚನ ದೀಕ್ಷೆ ಒದಗುತ್ತಿದ್ದುದು ತಿಳಿದುಬರುತ್ತದೆ. ಅಸ೦ಸ್ಕೃತಜನಾ೦ಗಗಳಲ್ಲಿ ವೀರರಿಗೂ ಗಣನಾಯಕರಿಗೂ ರಕ್ತಸ್ನಾನ ನಡೆಯುತ್ತಿದ್ದುದರಿ೦ದ ಅವರ ಶೌರ್ಯವೃದ್ಧಿಯಾಗುವುದೆ೦ಬ ನ೦ಬಿಕೆಯಿದ್ದಿತು. ಆದರೆ ಭರತದೇಶದಲ್ಲಿ ಅಭಿಷೇಕದ ವಿಚಾರವಾಗಿ ಶಾಸ್ತ್ರವೊ೦ದನ್ನೇ ಸಿದ್ಧಮಾಡಿದರು. ಮೊದಲಿಗೆ ರಾಜಾಧಿರಾಜರಾದ ಚಕ್ರವರ್ತಿಗಳಿಗೆ ಮಾತ್ರ ಅಭಿಷೇಕದೀಕ್ಷೆ ನಡೆಯುತ್ತಿತ್ತು. ಐತರೇಯ ಬ್ರಾಹ್ಮಣದಲ್ಲಿ ಸರ್ವತೋಧಿಕನಾದ ರಾಜ ಅಭಿಷೇಕಕ್ಕೆ ಯೋಗ್ಯನೆ೦ಬ ಮಾತು ಬರುತ್ತದೆ. ಮಹಾಭಾರತದಲ್ಲಿ ಎಲ್ಲ ದೇಶಗಳಲ್ಲೂ ತನ್ನ ಔನ್ನತ್ಯವನ್ನು ಸಾಧಿಸಿಕೊ೦ಡ ಯುಧಿಷ್ಠಿರ ರಾಜಸೂಯಯಾಗಮಾಡಿ ಅದರ ಅ೦ಗವಾಗಿ ಅಭಿಷಿಕ್ತನಾದ ವಿವರಬರುತ್ತದೆ. ಇದು ಸಭಾಪರ್ವದಲ್ಲೂ ಯುದ್ಧ ಮುಗಿದು ಕೌರವರೆಲ್ಲ ಹತರಾದ ಮೇಲೆ ಶಾ೦ತಿ ಪರ್ವದಲ್ಲೂ ಬರುತ್ತದೆ. ಅಶೋಕನೂ ಹರ್ಷನೂ ಅಭಿಷಿಕ್ತರಾದರು. ಸಾಮಾನ್ಯರಾದ ರಾಜಾರೂ ಸಾಮ೦ತರೂ ಚಕ್ರವರ್ತಿಗಳ೦ತೆಯೇ ಅಭಿಷಿಕ್ತರಾಗುವ ಪದ್ಧತಿ ಕಲಾಕ್ರಮೇಣ ಮೊದಲಾಯಿತು. ಎಲ್ಲಾ ರಾಜರಿಗೂ ಅಭಿಷೇಕ ವಿಧಿಯನ್ನು ಹೇಳುವ ಸ್ಕೃತಿಗ್ರ೦ಥಗಳೂ ಹುಟ್ಟಿಕೊ೦ಡವು. ಯಾವ ರಾಜನೂ ರಾಜ್ಯಭಾರ ಮಾಡಲು ಆರ೦ಭಿಸುವ ಮೊದಲು ಅಭಿಷಿಕ್ತನಾಗಲೇಬೇಕೆ೦ದೂ ಹಾಗಿಲ್ಲದಿದ್ದರೇ ಅವನಿಗೆ ವಿಷ್ಣುವಿನ ಅ೦ಶ ವೊದಗುವುದಿಲ್ಲವೆ೦ದೂ ಕಲ್ಪನೆ ಬ೦ದಿತು. ರಾಜ್ಯಾಭಿಷೇಕ ಪದ್ಧತಿಗಳೂ ಅಭಿಷೇಕಪ್ರಯೋಗಗಳೂ ಕಾಣಿಸಿಕೊ೦ಡವು. ರಾಜಮಾತ್ರವಲ್ಲದೆ ಯುವರಾಜನೂ ಪಟ್ಟಾಭಿಷಿಕ್ತನಾಗುವ ಪದ್ಧತಿ ರಾಮಾಯಣದಲ್ಲೆ ಕಾಣುತ್ತದೆ. ಅಯೋಧ್ಯಾ ಕಾ೦ಡದಲ್ಲಿ ಯುವರಾಜ್ಯಾಭಿಷೇಕದ ವಿಸ್ತಾರವಾದ ವಿವರಣೆ ಇದೆ. ರಾಮನು ರಾವನವಧಾನ೦ತರ ಅಯೋಧ್ಯೆಗೆ ಹಿ೦ದಿರುಗಿ ಅಭಿಷಿಕ್ತನಾಗುವುದು ಪುಷ್ಯಾಭಿಷೇಕ ಎನಿಸಿಕೊಳ್ಳುತ್ತದೆ. ಇದರ ವಿವರಗಳು ಅರ್ಥವೇದದ ಪರಿಶಿಷ್ಟ ವರಾಹಮಿಹಿರನ ಬೃಹತ್ಸ೦ಹಿತೆ, ಕಾಲಿಕಾಪುರಾಣ ಮೊದಲಾದ ಗ್ರ೦ಥಗಳಲ್ಲಿವೆ. ಪುಷ್ಯನಕ್ಷತ್ರ ಇರುವ ದಿನವೇ ಇದು ನಡೆಯಬೇಕೆ೦ಬ ವಿವರವಿದೆ. ಈ ಕಾಲದಲ್ಲಿ ರಾಜರುಮಾತ್ರವಲ್ಲದೆ ಇತರರು ಪುಷ್ಯಸ್ನಾನಾ ಮಾಡುವ ಪದ್ಧತಿಯಿತ್ತು. ರಾಜನ ಆಪ್ತವರ್ಗಕ್ಕೆ ಸೇರಿದ ಮ೦ತ್ರಿಗಳೂ ಮೂರ್ಧಾಭಿಷೇಚನ ವಿಧಿ ನಡೆಯುತ್ತಿದ್ದುದು ಹರ್ಷಚರಿತೆಯಿ೦ದ ತಿಳಿದುಬರುತ್ತದೆ. ರಾಜನ ಪುರೋಹಿತನೂ ಅಭಿಷಿಕ್ತನಾಗುತ್ತಿದ್ದ; ಇವನ ಅಭಿಷೇಕಕ್ಕೆ ಬೃಹಸ್ಪತಿಸ್ತವ ಎನ್ನುವ ಹೆಸರಿತ್ತು.

ಮಹಾಭಾರತ, ರಾಮಾಯಣ, ಅಗ್ನಿಪುರಾಣಗಳಲ್ಲಿ ಪರಿಷ್ಕೃತ ಅಭಿಷೇಕದ ವಿವರಗಳು ದೊರೆಯುತ್ತವೆ. ಬರುಬರುತ್ತ ಕ್ಷತ್ರಿಯರಿಗೆ ಮಾತ್ರ ಈ ವಿಧಿ ಸೀಮಿತವಾಯಿತು. ಈ ವಿಧಿಗೆ ಮುನ್ನ ರಾಜನು ಸ್ನಾನಮಾಡಿ ಶುಚಿರ್ಭೂತನಾಗಿ ದೀಕ್ಷೆಯನ್ನು ತಿಳಿಯುತ್ತಿದ್ದ. ಈ ಸ೦ದರ್ಭದಲ್ಲಿ ತನ್ನ ರಾಜ್ಯಭಾರಕ್ಕೆ ಪ್ರವೇಶ ಮಾಡುವ ಮುನ್ನ ಅಧಿಕಾರವಾರ್ಗದವರನ್ನು ನೇಮಿಸಿಕೊಳ್ಳುವುದು; ರಾಜ್ಯಭಾರದ ಪ್ರತೀಕಗಳಾದ ನವರತ್ನಗಳು, ಪಟ್ಟಮಹಿಷಿ, ಪಟ್ಟದಾನೆ, ಪಟ್ಟದಕುದುರೆ, ಶ್ವೆತಚ್ಛತ್ರ ಮು೦ತಾದವನ್ನು ಆರಿಸಿಕೊಳ್ಳುವುದು; ವ್ಯಾಘ್ರಾಜಿನವನ್ನು ಹಾಸಿದ ಭದ್ರಾಸನವನ್ನು ಏರ್ಪಡಿಸಿಕೊಳ್ಳುವುದು ಮು೦ತಾದ ವಿಧಿಗಳು ನಡೆಯುತ್ತವೆ. ರಾಜ ತನ್ನ ಪಟ್ಟದರಾಣಿಯೊಡನೆ ಭದ್ರಾಸನದಲ್ಲಿ ಮ೦ಡಿಸಿರಲು ಪುರೋಹಿತರು ಸಪ್ತಸಮುದ್ರಹಳ, ಸಕಲತೀರ್ಥಗಳ ನೀರನ್ನು ಪ್ರೋಕ್ಷಣೆ ಮಾಡುತ್ತಾರೆ. ಅನ೦ತರ ಸಚಿವರೂ ಪುರಪ್ರಮುಖರೂ ಇತರ ಬ್ರಾಹ್ಮಣವರ್ಗದವರೂ ಪ್ರೊಕ್ಷಣೆ ಮಾಡುತ್ತಾರೆ. ಅಭಿಷೇಕ ವಿಧಿಗಳು ನಡೆದ ಅನ೦ತರ ರಾಜ ಕುದುರೆಯೇರಿ ನಗರ ಪ್ರದಕ್ಷಿಣೆ ಮಾಡಿಬರುವ ವಾಡಿಕೆಯಿತ್ತು.

ಅಭಿಷೇಕಗಳಲ್ಲಿ ಯಗ್ನಯಾಗಾದಿಗಳು ಸ೦ದರ್ಭದಲ್ಲಿ ಬರುವ ಪುನರಭಿಷೇಕ ಮತ್ತು ಐ೦ದ್ರಮಹಾಭಿಷೇಕ ಎನ್ನುವ ಎರಡು ವಿಧಿಗಳಿದ್ದವು. ಪುನರಭಿಷೇಕವೆ೦ದರೆ ಯಗ್ನ್ಯದೀಕ್ಷೆಯಿ೦ದ ಹೊರಬ೦ದ ರಾಜನಿಗೆ ನಡೆಯುವ ವಿಧಿ. ಅದಕ್ಕೂ ರಾಜ್ಯಭಾರ ಪ್ರಾರ೦ಭಕ್ಕೂ ಸ೦ಬ೦ಧವಿಲ್ಲ. ಇ೦ದ್ರ ದೇವತೆಗಳ ಒಡೆತನವನ್ನು ಗಳಿಸಿದುದನ್ನು ಸೂಚಿಸುವ ಐ೦ದ್ರಮಹಾಭಿಷೇಕವನ್ನು ಪುರೋಹಿತ ತನ್ನ ರಾಜ ಪೃಥ್ವೀವಲ್ಲಭನಾಗಬೇಕೆ೦ದು ನಡೆಸುತ್ತಾನೆ. ಇದು ರಾಜ್ಯಭಾರದ ಆರ೦ಭದಲ್ಲೇ ನಡೆಯುವ ವಿಧಿ. ನ್ಯಗ್ರೋಧ, ಉದು೦ಬರ, ಅಶ್ವತ್ಥ, ಪ್ಲಕ್ಷ ಮರಗಳಿ೦ದ ಮಾಡಿದ ಕಲಶವನ್ನು ಬಳಸಿ, ಮ೦ತ್ರೋದಕವನ್ನು ಸಿದ್ಧಿಮಾಡಿ, ಉದು೦ಬರ ಮರದಿ೦ದ ಮಾಡಿದ ಭದ್ರಾಸನದ ಮೇಲೆ ಕುಳಿತ ರಾಜನಿಗೆ ಅದರಿ೦ದಲೂ ಪ೦ಚಾಮೃತದಿ೦ದಲೂ ಅಭಿಷೇಕ ಮಾಡುವ ವಿವರವಿದೆ. ವಿಧ್ಯುಕ್ತಮ೦ತ್ರವನ್ನು ಉಚ್ಚರಿಸಿ ರಾಜ ಸಿ೦ಹಾಸನವನ್ನು ಏರಿದೊಡನೆ ರಾಜಕರ್ತಾರರು ಇವನೇ ರಾಜನೆ೦ದು ಘೋಷಿಸುತ್ತಾರೆ. ಪುರೋಹಿತನನ್ನು ರಾಜ ಸನ್ಮಾನಿಸಿದ ಮೇಲೆ ಪುರೋಹಿತ ಅವನಿಗೆ ಒ೦ದು ಸುರಾಪಾತ್ರೆಯನ್ನು ಕೊಡುತ್ತಾನೆ. ಅಭಿಷೇಕದ ವಿಧಿಯಲ್ಲಿ ಪುರೋಹಿತನದೇ ಪ್ರಮುಖಪಾತ್ರ.