ಪುಟ:Chirasmarane-Niranjana.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಚಿರಸ್ಮರಣೆ

೧೩

ಚಿತ್ರೀಕರಣದ ಹಕ್ಕು ಪಡೆಯಲು ಬಂದವರು ಪ್ರಶ್ನೆ ಕೇಳಿದರು:
"ನಿಮ್ಮ ಕಾದಂಬರಿಯ ನಂಬೂದಿರಿ-ನಂಬಿಯಾರ್ ಯಾರು?"
ಉತ್ತರ : "ಪಾಳೆಗಾರಿಕೆಯ ಪ್ರತಿನಿಧಿಗಳು."
ಪ್ರಶ್ನೆ : "ದೇವಕಿ ಎಲ್ಲಿದ್ದಾಳೆ?"
ಉತ್ತರ : "ನನ್ನ ಕಾದಂಬರಿಯಲ್ಲಿ."
ಪ್ರಶ್ನೆ : "ಕಣ್ಣ..."
ಉತ್ತರ : "ಜನತೆಯ ಚಳವಳಿಯಲ್ಲಿ ಸಿರಿಕಂಠದ ಹಾಡುಗಾರ ಇರಲೇಬೇಕು, ಅಲ್ಲ?"
ಸಾಕ್ಷ್ಯಚಿತ್ರವೊ?ಕಥಾ ಚಿತ್ರವೊ?
ಚರಿತ್ರೆಯೊ? ಕಾದಂಬರಿಯೊ?
ಅವರು ಗೊಂದಲಕ್ಕೀಡಾಗಿದ್ದರು. ನಾನು ತಲೆಕೆಡಿಸಿಕೊಳ್ಳಲಿಲ್ಲ.
1925ರಲ್ಲಿ ಸೋವಿಯತ್ ಚಲಚ್ಚಿತ್ರ ನಿರ್ದೆಶಕ ಐಸೆನ್‍ಸ್ಟೀನ್ 'ಯುದ್ಧ ನೌಕೆ ಪೊಟೆಮ್ ಕಿನ್' ಎಂಬ ಕಥಾಚಿತ್ರವನ್ನು ನಿರ್ಮಿಸಿದರು. ಅದು ಅಪಾರ ಮೆಚ್ಚುಗೆ ಗಳಿಸಿತು. ಆದರೆ ನಿಂದಕರೂ ಕೆಲವರಿದ್ದರು. ಅವರೆಂದರು: "ಇದು ಇತಿಹಾಸದ ಯಥಾವತ್ ಚಿತ್ರಿಣವಲ್ಲ,"
ಆ 'ಟೀಕೆ'ಗೆ ಉತ್ತರವಾಯಿತು, ಅದಕ್ಕೂ 150 ವರ್ಷ ಹಿಂದೆ ಜರ್ಮನ್ ಮಹಾಕವಿ ಗಯಟೆ ಹೇಳಿದ್ದ ಒಂದು ಮಾತು: 'ಸಮ್ಮಕ್ ಸತ್ಯದ ದರ್ಶನಕ್ಕಾಗಿ ಸಣ್ಣಪುಟ್ಟ ಸತ್ಯಾಂಶಗಳು ಅಮುಖ್ಯವಾಗುತ್ತವೆ.' ಅದೇ ಮಾತನ್ನು 'ಚಿರಸ್ಮರಣೆ' ಕಾದಂಬರಿಗೆ ಸಂಬಂಧಿಸಿ ನಾನು ಆಡಿದರೆ ತಪ್ಪಾದೀತೆ?

ಆಭಾರ ಮನ್ನಣೆ

ನಾಲ್ಕನೆಯ ಮುದ್ರಣ

'ಚಿರಸ್ಮರಣೆ'ಯ ಎರಡನೆಯ ಮತ್ತು ಮೂರನೆಯ ಆವೃತ್ತಿಗಳನ್ನು ಹೊರತಂದವರು ಬೆಂಗಳೂರಿನ ನವಕರ್ನಾಟಕ ಪ್ರಕಾಶನದವರು. ಈಗ ನಾಲ್ಕನೆಯ ಜನಪ್ರಿಯ ಅವ್ರತ್ತಿಯಾಗಿ 'ಚಿರಸ್ಮರಣೆ'ಯನ್ನು ಮೈಸೂರಿನ ಸನ್ಮಿತ್ರ ಶ್ರೀ ಡಿ.ವಿ.ಕೆ. ಮೂರ್ತಿಯವರು ಪ್ರಕಟಿಸುತ್ತಿದ್ದಾರೆ. ಹೀಗೆ ಚತುರ್ಥ ಮುದ್ರಣವನ್ನು ಹೊರತರುತ್ತಿರುವ ಅವರಿಗೆ ಕರ್ತೃವಾದ ನಾನೂ ಕೃತಿಯ ಜಂಟಿ ಒಡತಿಯರಾದ ತೇಜಸ್ವಿನಿ-ಸೀಮಂತಿನಿಯರೂ ಕೃತಜ್ನರಾಗಿದ್ದೇವೆ. ಈ ಆವೃತ್ತಿಗೆ ಮುಖಚಿತ್ರ